Advertisement

ರಾಮ-ರಾವಣರ ಯುದ್ಧಕ್ಕೆ 7.7 ಕೋಟಿ ವೀಕ್ಷಣೆ: ‘ರಾಮಾಯಣ’ವಿಶ್ವದಾಖಲೆ

01:50 AM May 04, 2020 | Hari Prasad |

ಹೊಸದಿಲ್ಲಿ: ದೂರದರ್ಶನದಲ್ಲಿ 33 ವರ್ಷಗಳ ನಂತರ ಮರು ಪ್ರಸಾರವಾಗುತ್ತಿರುವ ರಾಮಾಯಣ ಧಾರಾವಾಹಿ ವೀಕ್ಷಣೆಯಲ್ಲಿ ವಿಶ್ವದಾಖಲೆ ನಿರ್ಮಿಸಿದೆ.

Advertisement

ಎಪ್ರಿಲ್‌ 16ರಂದು ಪ್ರಸಾರವಾದ ಕಂತನ್ನು 7.7 ಕೋಟಿ ಮಂದಿ ವೀಕ್ಷಿಸಿದ್ದು, ಇದು ಜಗತ್ತಿನಲ್ಲೇ ಅತೀಹೆಚ್ಚು ವೀಕ್ಷಣೆ ಪಡೆದ ಮನರಂಜನಾ ಕಾರ್ಯಕ್ರಮ ಎಂಬ ಖ್ಯಾತಿಗೆ ಪಾತ್ರವಾಗಿದೆ. ಈ ದಿನದಂದು ಲಂಕೆಯಲ್ಲಿ ಶ್ರೀರಾಮ- ರಾವಣನ ನಡುವಿನ ಯುದ್ಧದ ಕಂತುಗಳು ಪ್ರಸಾರಗೊಂಡಿದ್ದವು.

ಅಂದು ಇಂದ್ರಜಿತ್‌, ಕುಂಭಕರ್ಣರಂಥ ಘಟಾನು ಘಟಿಗಳ ವಿರುದ್ಧದ ಕಾಳಗ, ಹನುಮಂತ ಸಂಜೀವಿನಿ ಪರ್ವತ ಹೊತ್ತು ತಂದಿದ್ದು, ರಾವಣ ಸಂಹಾರದ ದೃಶ್ಯಗಳು ಮುಖ್ಯವಾಗಿ ವೀಕ್ಷಕರನ್ನು ಸೆಳೆದಿದ್ದವು.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜನರಿಗೆ ಮನರಂಜನೆ ನೀಡಲು, ದೂರದರ್ಶನವು ಮಾರ್ಚ್‌ನಿಂದಲೇ, ರಾಮಾಯಣದ ಮರುಪ್ರಸಾರ ಆರಂಭಿಸಿತ್ತು. ಅರುಣ್‌ ಗೋವಿಲ್‌, ದೀಪಿಕಾ ಚಿಖ್ಲಿಯಾ, ದಾರಾ ಸಿಂಗ್‌, ಸುನಿಲ್‌ ಲಹ್ರಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಧಾರಾವಾಹಿ, 1987ರಲ್ಲಿ ಮೊದಲ ಬಾರಿಗೆ ಪ್ರಸಾರ ಕಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next