ಕೆ. ಶಿವರುದ್ರಯ್ಯ ನಿರ್ದೇಶನದ “ರಾಮನ ಸವಾರಿ’ ಚಿತ್ರ ಈ ವಾರ ತೆರೆಕಾಣುತ್ತಿದೆ. 2018ನೇ ಸಾಲಿನ ರಾಜ್ಯಪ್ರಶಸ್ತಿಯಲ್ಲಿ ದ್ವಿತೀಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಹಾಗೂ ಅತ್ಯುತ್ತಮ ಬಾಲನಟ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ “ರಾಮನ ಸವಾರಿ’ ಚಿತ್ರ ಈ ವಾರ ತೆರೆಕಾಣುತ್ತಿದೆ. ಇದು ಕಥೆಗಾರ ಕೆ.ಸದಾಶಿವ ಅವರ “ರಾಮನ ಸವಾರಿ ಸಂತೆಗೆ ಹೋದದ್ದು’ ಕಥೆ ಆಧರಿಸಿದ ಚಿತ್ರ. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಶಿವರುದ್ರಯ್ಯ “ಇದು ಮಕ್ಕಳ ಚಿತ್ರ. 2006 ರಲ್ಲೇ ಈ ಚಿತ್ರ ಮಾಡಬೇಕಿತ್ತು. ಆಗಲಿಲ್ಲ. ನಿರ್ಮಾಪಕ ಜೋಸೆಫ್ ಫೈಸ್ ಒಳ್ಳೆಯ ಕಥೆ ಇಟ್ಟುಕೊಂಡು ಚಿತ್ರ ಮಾಡಬೇಕೆಂದು ನಿರ್ಧರಿಸಿದ್ದರಿಂದ ಇದು ಸಾಧ್ಯವಾಗಿದೆ. ಕಥೆ ಬಗ್ಗೆ ಹೇಳುವುದಾದರೆ, ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಗಾದೆಗೆ ಹತ್ತಿರವಾದಂತಹ ಕಥೆಯ ಚಿತ್ರಣ ಇಲ್ಲಿದೆ. ಇದು ಮಲೆನಾಡ ಭಾಗದ ಕಥೆಯಾದ್ದರಿಂದ ಬಹುತೇಕ ಹೊಸನಗರ, ತೀರ್ಥಹಳ್ಳಿ ಸುತ್ತಮುತ್ತ ಚಿತ್ರೀಕರಣಗೊಂಡಿದೆ. 1964, 1974 ರ ಕಾಲಘಟ್ಟದ ಕಥೆ ಇಲ್ಲಿ ಹೇಳಲಾಗಿದೆ ‘ ಎಂದರು. ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರು ಈ ಚಿತ್ರಕ್ಕೆ ಚಿತ್ರಕಥೆ-ಸಂಭಾಷಣೆ ಬರೆದಿದ್ದಾರೆ. ಸ್ಟ್ರೋಯಿ° ಜೋಸೆಫ್ ಪಾಯ್ಸ ಈ ಚಿತ್ರದ ನಿರ್ಮಾಪಕರು. ಇಡೀ ಚಿತ್ರ ಸಹಜವಾಗಿ ಮೂಡಿಬಂದಿದೆ. ಚಿತ್ರದ ಒಂದೊಂದು ದೃಶ್ಯಗಳು ಅದ್ಭುತವಾಗಿವೆ. ಹೀರೋ, ವಿಲನ್, ಹೊಡಿಬಡಿಕಡಿ ಸಿನಿಮಾಗಳ ನಡುವೆ ಈ ಚಿತ್ರ ಮನಸ್ಸಿಗೆ ನೆಮ್ಮದಿ ಕೊಡುವಂತಹ ಕಥಾಹಂದರ ಹೊಂದಿದೆ ಎನ್ನುವುದು ಚಿತ್ರತಂಡದ ಮಾತು.
ಚಿತ್ರದಲ್ಲಿ ಸೋನುಗೌಡ, ರಾಜೇಶ್ ನಟರಂಗ, ಸುಧಾ ಬೆಳವಾಡಿ, ಬಾಲನಟ ಆರೋನ್, ಅಹನ್ ಸು§ತಿ, ಶೃಂಗೇರಿ ರಾಮಣ್ಣ, ವಿಜಯ್‌ಕುಮಾರ್, ಗುಂಡುರಾಜ್ ಮುರಳಿ ಇತರರು ನಟಿಸಿದ್ದಾರೆ. ಚಿತ್ರಕ್ಕೆ ಕೆ.ಕಲ್ಯಾಣ್ ಅವರ ಸಂಗೀತವಿದೆ. ವಿಶ್ವನಾಥ್ ಛಾಯಾಗ್ರಹಣವಿದೆ.