ಮುಂಬಯಿ: ಸಮಾಜಕ್ಕಾಗಿ ಸದಸ್ಯತ್ವ, ಸದಸ್ಯರಿಂದ ಸಂಘ ಸಂಸ್ಥೆ ಮತ್ತು ಇವೆಲ್ಲವೈಗಳ ಉನ್ನತಿಗಾಗಿ ಸದಸ್ಯರ ಸಹಯೋಗ ಮುಖ್ಯವಾಗಿರುತ್ತದೆ. ನಮ್ಮಲ್ಲಿ ಒಗ್ಗಟ್ಟಿದೆ, ಆದರೂ ಯುವ ಜನತೆ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಾಗ ಸಂಸ್ಥೆ ಇನ್ನೂ ಏಕೀಕರಣವಾಗಲು ಸಾಧ್ಯ. ಹಣಕ್ಕಿಂತ ಜನ ಮಾನ್ಯತೆ ದೊರೆತಾಗ ಸಂಸ್ಥೆ ಸಮಾಜ ತನ್ನಷ್ಟಕ್ಕೆನೇ ಮುನ್ನಡೆಯುತ್ತದೆ. ಇಂದು ನಮ್ಮಲ್ಲಿ ಸಾವಿರಕ್ಕೂ ಮಿಕ್ಕಿದ ಸದಸ್ಯತ್ವ ಇದೆ. ಇಂತಹ ಏಕತೆಗೆ ನಮ್ಮ ಪೂರ್ವಜರ, ಸಂಸ್ಥೆಯ ರೂಪಕರ ದೂರದೃಷ್ಟಿತ್ವವೇ ಕಾರಣ. ಅವರ ಆಶಯದ ಕನಸು ನಮ್ಮ ಒಗ್ಗೂಡುವಿಕೆಯಿಂದ ನನಸಾಗಿಸಿದೆ ಎಂದು ರಾಮರಾಜ ಕ್ಷತ್ರಿಯ ಸೇವಾ ಸಂಘ ಮುಂಬಯಿ ಅಧ್ಯಕ್ಷ ರಾಜ್‌ಕುಮಾರ್ ಕಾರ್ನಾಡ್ ನುಡಿದರು.
ಜ. 7 ರಂದು ಸಯಾನ್ ಪೂರ್ವ ಜಿಎಸ್‌ಬಿ ಸೇವಾ ಮಂಡಲದ ಶ್ರೀ ಸುಧೀಂದ್ರ ಸಭಾಗೃಹದಲ್ಲಿ ರಾಮರಾಜ ಕ್ಷತ್ರಿಯ ಸೇವಾ ಸಂಘ ಮುಂಬಯಿ ಇದರ ವಾರ್ಷಿಕ ಸ್ನೇಹಸಮ್ಮಿಲನಕ್ಕೆ ಚಾಲನೆ ನೀಡಿ ಬಳಿಕ 74 ನೇ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಸಂಸ್ಥೆಯ ಅಮೃತ ಮಹೋತ್ಸವ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಂಸ್ಥೆಯ ಸಮಾಜಪರ ಕಾರ್ಯಕ್ರಮಗಳ ಸದುಪಯೋಗವನ್ನು ಸಮಾಜ ಬಾಂಧವರು ಪಡೆದುಕೊಳ್ಳುವಂತೆ ವಿನಂತಿಸಿದರು.
ಉಪಾಧ್ಯಕ್ಷ ಕೆ. ಶಿವರಾಮ ರಾವ್, ಜೊತೆ ಕಾರ್ಯದರ್ಶಿಗಳಾದ ಕೇದರ್‌ನಾಥ ಆರ್. ಬೋಳಾರ್ ಮತ್ತು ರಿತೇಶ್ ಆರ್. ರಾವ್, ಜೊತೆ ಕೋಶಾಧಿಕಾರಿ ರೂಪೇಶ್ ಆರ್. ರಾವ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರೀನಾ ಕೇದರ್‌ನಾಥ ಬೋಳಾರ್, ಕಾರ್ಯದರ್ಶಿ ಚಿತ್ರಾ ಎಂ. ರಾವ್ ವೇದಿಕೆಯಲ್ಲಿ ಆಸೀನರಾಗಿದ್ದರು. ಗೌ| ಪ್ರ| ಕಾರ್ಯದರ್ಶಿ ಎನ್. ರವೀಂದ್ರನಾಥ್ ರಾವ್ ಸ್ವಾಗತಿಸಿ ವಾರ್ಷಿಕ ಚಟುವಟಿಕೆಗಳ ಮಾಹಿತಿ ಹಾಗೂ ಗತ ವಾರ್ಷಿಕ ಮಹಾಸಭೆ ವರದಿ ವಾಚಿಸಿದರು. ಗೌರವ ಕೋಶಾಧಿಕಾರಿ ನವೀನ್ ಎಸ್. ರಾವ್ ಅವರು ಗತ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು.
ಕಾರ್ಯಕ್ರಮದಲ್ಲಿ ರಾಮರಾಜ ಕ್ಷತ್ರೀಯ ಸಂಘದ ಅಧ್ಯಕ್ಷ ಬಿ. ಗಣಪತಿ ಶೇರೆÌಗಾರ್ ಮತ್ತಿತರ ಹಿರಿಯ ಮುಂದಾಳುಗಳು ಉಪಸ್ಥಿತರಿದ್ದರು. ಗಣ್ಯರು ಹಾಗೂ ಪದಾಧಿಕಾರಿಗಳು ಸಮಾಜದ ಮಧುಸೂದನ ರಾವ್, ರಮೇಶ್ ವಿ. ರಾವ್ ದಂಪತಿಗಳು, ಕೆ. ದಾಮೋದರ್ ರಾವ್, ವೆಂಕಟಲಕ್ಷಿ¾à ಎಸ್. ರಾವ್, ಪ್ರತಿಭಾವಂತ ವಿದ್ಯಾರ್ಥಿಗಳಾದ ಕು| ಅಕ್ಷತಾ ಸಂತೋಷ್ ರಾವ್, ಕು| ದಿವ್ಯಾ ಸೂರ್ಯಕಾಂತ್ ರಾವ್, ಕು| ಶಿವಾನಿ ದಿನೇಶ್ ರಾವ್, ರಾಜೇಂದ್ರ ಆರ್. ರಾವ್, ನಿತ್ಯಾನಂದ ಸಿ. ರಾವ್, ಚಿರಾಗ್ ಆರ್. ರಾವ್ ಮೊದಲಾದವರನ್ನು ಗೌರವಿಸಿದರು.
ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧಕರೆಣಿಸಿದ ಸಮಾಜ ಬಾಂಧವರನ್ನು ಸತ್ಕರಿಸಿ ಅಭಿನಂದಿಸಲಾಯಿತು. ಸಭೆಯ ಆದಿಯಲ್ಲಿ ಗತ ವಾರ್ಷಿಕ ಸಾಲಿನಲ್ಲಿ ಅಗಲಿದ ಸಂಸ್ಥೆಯ ಸದಸ್ಯರು, ಸಮಾಜ ಬಂಧುಗಳು, ಗಣ್ಯರಿಗೆ ಶ್ರದ್ಧಾಂಜಲಿ ಕೋರಲಾಯಿತು.
ಬೆಳಗ್ಗೆ ಶ್ರೀ ಕೆ. ರಾಮಚಂದ್ರ ಉಪಾಧ್ಯಾಯ ಅವರು ಶ್ರೀ ಸತ್ಯನಾರಾಯಣ ಮಹಾಪೂಜೆ ನೆರವೇರಿಸಿ ತೀರ್ಥ ಪ್ರಸಾದವನ್ನಿತ್ತು ಹರಸಿದರು. ನಿತಿನ್ ರಾವ್ ಮತ್ತು ಶೃತಿ ರಾವ್ ಹಾಗೂ ಪ್ರತಿಮಾ ರಾವ್ ದಂಪತಿ ಪೂಜೆಯ ಯಜಮಾನತ್ವ ವಹಿಸಿದ್ದರು. ನಂತರ ಮಹಿಳಾ ಸದಸ್ಯೆಯರಿಂದ ಅರಸಿನ ಕುಂಕುಮ ಮತ್ತು ಭಜನಾ ಕಾರ್ಯಕ್ರಮ ನಡೆಯಿತು.
ಋದಸ್ಯ ಬಂಧುಗಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಾಗೂ ಅಶೋಕ್ ಕೊಡ್ಯಡ್ಕ ನಿರ್ದೇಶನದಲ್ಲಿ “ಭಕ್ತ ಮಾರ್ಕಂಡೆಯ’ ನಾಟಕ ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರಾದ ರಾಜೇಂದ್ರ ರಾವ್, ಮನೋಜ್ ಸಿ. ರಾವ್, ಸಂತೋಷ್ ಕುಮಾರ್ ರಾವ್, ನಾರಾಯಣ ಯು. ರಾವ್, ದಿನೇಶ್ ಎಸ್. ರಾವ್, ಧನಂಜಯ ಎನ್. ಶೇರ್ವೆಗಾರ್, ಅಶೋಕ್ ಕುಮಾರ್ ಎಸ್. ರಾವ್, ಶಿವನಂದ ಎಸ್. ಕೋಟೆಕಾರ್, ಜನಾರ್ಧನ ಸಿ. ಶೇರೆÌಗಾರ್, ನಿತ್ಯಾನಂದ ಸಿ. ರಾವ್, ಮಹಿಳಾ ಮಂಡಳಿಯ ಉಪ ಕಾರ್ಯಾಧ್ಯಕ್ಷೆ ವೀಣಾ ಎಸ್. ರಾವ್, ಕೋಶಾಧಿಕಾರಿ ಪ್ರಜ್ಞಾ ಎಸ್. ರಾವ್, ಜೊತೆ ಕಾರ್ಯದರ್ಶಿ ಆರತಿ ಎನ್. ರಾವ್, ಜೊತೆ ಕೋಶಾಧಿಕಾರಿ ಕವಿತಾ ಆರ್. ರಾವ್ ಮತ್ತಿತರ ಮಹಿಳಾ ಪದಾಧಿಕಾರಿಗಳು ಸೇರಿದಂತೆ ಹೆಚ್ಚಿನ ಸದಸ್ಯ ಬಾಂಧವರು ಉಪಸ್ಥಿತರಿದ್ದರು. ಮಹಿಳಾ ವಿಭಾಗದ ಕೋಶಾಧಿಕಾರಿ ಪ್ರಜ್ಞಾ ಸುಹಾಸ್ ರಾವ್ ಪ್ರಾರ್ಥನೆಗೈದರು. ಕೆ. ಶಿವರಾಮ ರಾವ್ ಸ್ವಾಗತಿಸಿದರು. ಎನ್. ರವೀಂದ್ರನಾಥ್ ರಾವ್ ವಂದಿಸಿದರು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್