ಮೈಸೂರು: ಆಧ್ಯಾತ್ಮ ಲೋಕದಲ್ಲಿ ಭಕ್ತಿಯ ನಂದಾದೀಪ ಹಚ್ಚುವ ಮೂಲಕ ಭಕ್ತರ ಹೃದಯಕ್ಕೆ ಭಗವಂತನ ಅರಿವು ಮೂಡಿಸಿದವರು ರಾಮಾನುಜ ಚಾರ್ಯರು ಎಂದು ಪಾಲಿಕೆ ಸದಸ್ಯ ಮಾ.ವಿ.ರಾಮಾಪ್ರಸಾದ್ ಬಣ್ಣಿಸಿದರು.
ನಗರದ ಪ್ರಜಾnವಂತ ನಾಗರಿಕ ವೇದಿಕೆಯ ವತಿಯಿಂದ ಅಗ್ರಹಾರದ ರಾಮಾನುಜ ರಸ್ತೆಯಲ್ಲಿರುವ ಸಾಯಿಬಾಬಾ ಭವನದಲ್ಲಿ ಏರ್ಪಡಿಸಿದ್ದ ಶ್ರೀ ರಾಮಾನುಜಾಚಾರ್ಯರ ಜಯಂತಿಯಲ್ಲಿ ಮಾತನಾಡಿ, ರಾಮಾನುಜರ ತತ್ವಜಾnನ, ಜೀವನಾದರ್ಶಗಳ ಹಿರಿಮೆ ಅಪಾರವಾಗಿದ್ದು, ಸಾತ್ವಿಕ ಸದ್ಗುಣಗಳ ಗಣಿ ಹಾಗೂ ಅಪೂರ್ವ ಸಮಾಜ ಸುಧಾರಕರಾಗಿದ್ದಾರೆ.
ಸಮಾಜದ ಎಲ್ಲಾ ವರ್ಗದ ಜನರ ನೆಮ್ಮದಿಗಾಗಿ ಒಂದು ವಿಶಿಷ್ಟ ಕಾರ್ಯವನ್ನು ಮಾಡಿದ ಅವರು, ಆ ಮೂಲಕ ಸಮಾಜದಲ್ಲಿ ಜಾತಿ – ಮತ, ಮೇಲು – ಕೀಳು ಎಂಬ ಬೇಧವಿಲ್ಲದೆ ಭಗವಂತನನ್ನು ಕಾಣಲು ದಾರಿತೋರಿಸಿದರು ಎಂದು ಹೇಳಿದರು. ಪ್ರತಿಯೊಂದು ಗ್ರಾಮಗಳ ಜನರಲ್ಲಿ ಭಕ್ತಿಯ ಪರಿಮಳವನ್ನು ಪಸರಿಸಿದ ರಾಮಾನುಜಾಚಾರ್ಯರು, ಗ್ರಾಮಗಳಲ್ಲಿ ಜೀವಂತವಾಗಿದ್ದ ವಿವಿಧ ಮತಗಳ ಜನರನ್ನು ಸೇರಿಸಿ ಸೌಹಾರ್ದದಿಂದ ಬಾಳುವಂತೆ ಮಾಡಿದರು.
ಅಲ್ಲದೆ ತಮೊoದಿಗಿದ್ದ ಭಕ್ತರಿಗೆ ತಿರುಕುಲತ್ತಾರ್ ಎಂದು ಕೂಗುವ ಜತೆಗೆ ದೇವಸ್ಥಾನಕ್ಕೆ ಕರೆದೊಯ್ದ ಧೀಮಂತ ಸನ್ಯಾಸಿ ರಾಮಾನುಜರು ಎಂದು ತಿಳಿಸಿದರು. ಸಮಾಜದಲ್ಲಿ ಹಲವು ವರ್ಷಗಳ ಹಿಂದೆಯೇ ಇಂತಹ ಕ್ರಾಂತಿಕಾರಿ ಕೆಲಸ ಮಾಡಿದ್ದ ರಾಮಾನುಜಾ ಚಾರ್ಯರು, ಸಮಾಜದಲ್ಲಿ ಎಲ್ಲ ಜಾತಿವರ್ಗದವರೂ ಸೌಹಾರ್ದದಿಂದ ಬಾಳಲು ಹಲವು ದೇವಸ್ಥಾನಗಳನ್ನು ನಿರ್ಮಿಸಿ ಭಕ್ತಿಗೆ ಹೊಸ ಅರ್ಥ ನೀಡಿದ ಸಂತರಾಗಿದ್ದಾರೆ.
ಆದ್ದರಿಂದಲೇ ರಾಮಾನುಜರ ಜೀವನ, ಸಾಧನೆ ಎಂದೆಂದೂ ಪ್ರಸ್ತುತವಾಗುತ್ತದೆ. ಈ ನಿಟ್ಟಿನಲ್ಲಿ ರಾಮಾನುಜಾ ಚಾರ್ಯರನ್ನು ನೆನೆಯುವುದು ಒಳ್ಳೆಯ ಬೆಳವಣಿಗೆ ಎಂದರು. ವೇದಿಕೆ ಅಧ್ಯಕ್ಷ ಜಗದೀಶ್ ಕಡಕೊಳ, ವಿಪ್ರ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಮ್ ಅಯ್ಯಂಗಾರ್, ಭವಾನಿ ಶಂಕರ್, ಬಿಜೆಪಿ ಮುಖಂಡ ನವೀನ್, ಜೋಗಿಮಂಜು ಇನ್ನಿತರರು ಹಾಜರಿದ್ದರು.