Advertisement

ಜನರ ನೋವು, ನಲಿವುಗಳಿಗೆ ಸ್ಪಂದಿಸಿದ ಶಿರಹಟ್ಟಿ ಕ್ಷೇತ್ರದ ಜನಪ್ರಿಯ ಶಾಸಕ ರಾಮಣ್ಣ ಲಮಾಣಿ

12:00 PM Aug 30, 2022 | Team Udayavani |

ಅಭಿವೃದ್ಧಿಯ ಕನಸು ಹೊತ್ತು ರಾಜಕೀಯದಲ್ಲಿ ಧುಮುಕಿ ಶಿರಹಟ್ಟಿ ತಾಲೂಕಿನ ಮಾಗಡಿ ಜಿಪಂ ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾಗುವ ಮೂಲಕ ರಾಮಣ್ಣ ಲಮಾಣಿಯವರು ರಾಜಕೀಯ ಪ್ರವೇಶಿಸಿದರು.

Advertisement

ಶಿರಹಟ್ಟಿ ವಿಧಾನಸಭಾ ಕ್ಷೇತ್ರ ಮೀಸಲಾತಿ ಕ್ಷೇತ್ರವಾಗಿರುವುದು ರಾಮಣ್ಣ ಲಮಾಣಿಯವರಿಗೆ ವರದಾನವಾಗಿ ಪರಿಣಮಿಸಿತು. 2008ರ ವಿಧಾನಸಭಾ ಚುನಾವಣೆಯಲ್ಲಿ ಮತಕ್ಷೇತ್ರದ ಜನತೆ ರಾಮಣ್ಣ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿದರು. ಶಾಸಕರಾದ ನಂತರ ಹಲವಾರು ಸಮಾಜಮುಖೀ ಕಾರ್ಯಗಳನ್ನು ಮಾಡುವ ಮೂಲಕ ಜನಾನುರಾಗಿಯಾದರು. ಮತಕ್ಷೇತ್ರದಲ್ಲಿ ಜನಮನ್ನಣೆ ಪಡೆದ ಹಿನ್ನೆಲೆಯಲ್ಲಿ 30 ಸಾವಿರ ಅಂತರದ ಗೆಲುವು ಸಾಧಿ ಸುವ ಮೂಲಕ ಮತ್ತೂಮ್ಮೆ ಶಾಸಕರಾಗಿ ಆಯ್ಕೆಯಾದರು. ರಾಮಣ್ಣ ಲಮಾಣಿಯವರು ರೈತರ ನೋವು-ನಲಿವುಗಳಿಗೆ ಸದಾ ಸ್ಪಂದಿಸುವ, ರೈತರ ಬದುಕು ಹಸನಗೊಳಿಸುವುದರೊಂದಿಗೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದರು. ಮತಕ್ಷೇತ್ರದಲ್ಲಿ ಕುಡಿಯುವ ನೀರು, ರಸ್ತೆಗಳ ನಿರ್ಮಾಣ, ಶೈಕ್ಷಣಿಕ ಸೌಲಭ್ಯ ಸೇರಿದಂತೆ ಮೂಲಸೌಕರ್ಯ ಒದಗಿಸುವುದಕ್ಕಾಗಿ ಅವಿರತವಾಗಿ ಶ್ರಮಿಸಿದರು.

ಕೊಡುಗೈ ದಾನಿ, ಜನಾನುರಾಗಿ ಶಾಸಕ ರಾಮಣ್ಣ ಲಮಾಣಿ: ಶಿರಹಟ್ಟಿ ಮತಕ್ಷೇತ್ರದ ಜನತೆ ಅಹವಾಲು ಮತ್ತು ಇನ್ನಾವುದೇ ಕಾರ್ಯಗಳಿಗಾಗಿ ಕುಂದ್ರಳ್ಳಿ ಗ್ರಾಮಕ್ಕೆ ಬೆಳಗಿನ ಜಾವ ಆಗಮಿಸಿದರೆ ತಿಂಡಿ(ನಾಷ್ಟಾ), ಮಧ್ಯಾಹ್ನ ಬಂದರೆ ಊಟದ ವ್ಯವಸ್ಥೆಯನ್ನು ಕಲ್ಪಿಸುತ್ತಾರೆ. ಲಗ್ನ-ಮುಹೂರ್ತಗಳಿದ್ದರೆ ಭೇಟಿ ನೀಡಿ ಶುಭಾಶಯ ತಿಳಿಸುವುದು, ಯಾರಾದರೂ ಅನಾರೋಗ್ಯಕ್ಕೆ ಒಳಗಾಗಿದ್ದರೆ ಭೇಟಿ ನೀಡಿ ಹಣಕಾಸು ಸಹಾಯ-ಸಹಕಾರ ನೀಡುವಲ್ಲಿ ಹಿಂದೇಟು ಹಾಕಲ್ಲ. ಹೀಗೆ ಜನಸಂಪರ್ಕ ಹೊಂದುವ ಮೂಲಕ “ಜನಾನುರಾಗಿ ಶಾಸಕರು’ ಎಂದೇ ಖ್ಯಾತಿ ಹೊಂದಿದ್ದಾರೆ.

ಕ್ರಿಯಾಶೀಲ ಶಾಸಕರು: ಯಾವುದೇ ಪಕ್ಷದ ಮುಖಂಡರು ಯಾವುದೇ ಕಾರ್ಯಗಳಿಗಾಗಿ ಬರಲಿ ಅನ್ಯತಾ ಭಾವಿಸದೇ ಬೆಂಗಳೂರಿಗೆ ಹೋಗಿ ಸಂಬಂಧಿಸಿದ ಸಚಿವರು ಮತ್ತು ಇಲಾಖೆಯ ಅ ಧಿಕಾರಿಗಳನ್ನು ಖುದ್ದಾಗಿ ಭೇಟಿ ಮಾಡಿ ಅವರಿಗೆ ಅನುಕೂಲ ಕಲ್ಪಿಸುವ ಗುಣ ಶಾಸಕ ರಾಮಣ್ಣ ಲಮಾಣಿಯವರಲ್ಲಿದೆ.

ಕೋವಿಡ್‌ ಸಂದರ್ಭದಲ್ಲಿ ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸದೇ ಖುದ್ದಾಗಿ ತಾಲೂಕು ಆಸ್ಪತ್ರೆಗಳಿಗೆ ಭೇಟಿ ನೀಡಿ ಆಸ್ಪತ್ರೆಗಳಿಗೆ ಮೂಲ ಸೌಕರ್ಯ ಪರಿಶೀಲಿಸಿದ್ದಾರೆ. ಜತೆಗೆ ಖುದ್ದಾಗಿ ರೋಗಿಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸುವುದರೊಂದಿಗೆ ಧೈರ್ಯ ತುಂಬುವ ಕಾರ್ಯ ಮಾಡಿದ್ದಾರೆ. ಜತೆಗೆ ಫ್ರಂಟ್‌ಲೆçನ್‌ ವಾರಿಯರ್ಸ್‌ಗಳಿಗೆ ಆರೋಗ್ಯ ಕಿಟ್‌ಗಳನ್ನು ಒದಗಿಸಿದ್ದಾರೆ. ಮತಕ್ಷೇತ್ರದಲ್ಲಿ ರೋಗಿಗಳಿಗೆ ಅನುಕೂಲವಾಗಲೆಂದು ಶಿರಹಟ್ಟಿ-ಲಕ್ಷ್ಮೇಶ್ವರ ಪಟ್ಟಣಕ್ಕೆ ತಮ್ಮ ಅನುದಾನದಲ್ಲಿ ಆಂಬ್ಯುಲೆನ್ಸ್‌ ಗಳನ್ನು ನೀಡಿದ್ದಾರೆ. ಮತಕ್ಷೇತ್ರದಾದ್ಯಂತ ಸುತ್ತಾಡಿ ಕೋವಿಡ್‌ನ‌ ಅಗತ್ಯ ಕ್ರಮಗಳನ್ನು ಪಾಲಿಸುವಂತೆ ವಿನಂತಿಸಿದ್ದಾರೆ.

Advertisement

ಮಹತ್ವಾಕಾಂಕ್ಷಿ ಯೋಜನೆಗಳಿಗೆ ಚಾಲನೆ: ಗ್ರಾಮೀಣ ಭಾಗದ ಜನತೆ ಶುದ್ಧ ಕುಡಿಯುವ ನೀರೊದಗಿಸುವ ಜೆ.ಜೆ.ಎಮ್‌ ಕಾಮಗಾರಿಯನ್ನು ಶಿರಹಟ್ಟಿ ಮತಕ್ಷೇತ್ರದಲ್ಲಿ ಜಿಲ್ಲೆಯಲ್ಲಿಯೇ ಮೊದಲು ಆರಂಭಿಸಿದ್ದಾರೆ. ಮತಕ್ಷೇತ್ರದ ಎಲ್ಲಾ ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಮೂಲಕ ರಸ್ತೆ ಅಭಿವೃದ್ಧಿಗೆ ನಾಂದಿ ಹಾಡಿದ್ದಾರೆ. ಮತಕ್ಷೇತ್ರದ ಬಹುತೇಕ ರಸ್ತೆಗಳ ನಿರ್ಮಾಣಕ್ಕಾಗಿ ಅನುದಾನ ಒದಗಿಸುವ ಮೂಲಕ ರಸ್ತೆಗಳ ಪುನರ್‌ ನಿರ್ಮಾತೃ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅವರು ಅಗತ್ಯವಿದ್ದಲ್ಲಿ ಶಾಲೆಗಳಿಗೆ ಕಟ್ಟಡಗಳನ್ನು ನಿರ್ಮಿಸಿದ್ದಾರೆ.

ಮತಕ್ಷೇತ್ರದ ಯಾವುದೇ ಗ್ರಾಮದಲ್ಲಿ ಸಮಸ್ಯೆಗಳಿದ್ದಲ್ಲಿ ಖುದ್ದಾಗಿ ಭೇಟಿ ನೀಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಜತೆ ಮಾತನಾಡುತ್ತಾರೆ. ಸಂಬಂಧಿಸಿದ ಸಚಿವರನ್ನು ಭೇಟಿ ಮಾಡಿ ಕೆಲಸ ಮಾಡಿಕೊಳ್ಳಲು ಮುಂದಾಗುತ್ತಾರೆ. ಈ ಕಾರಣದಿಂದಾಗಿಯೇ ಮುಂಡರಗಿ, ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳು ಜರಗುತ್ತಿವೆ.

ಶಿರಹಟ್ಟಿ ತಾಲೂಕು ಕೇಂದ್ರಕ್ಕೆ ಕೊಡುಗೆ: ಶಿರಹಟ್ಟಿ ತಾಲೂಕಿನ ಜನತೆಗೆ ಬಸ್‌ ಡಿಪೋ ಬಹುದಿನದ ಬೇಡಿಕೆ ಇತ್ತು. ಶಾಸಕ ರಾಮಣ್ಣ ಲಮಾಣಿಯವರ ಅವಿರತ ಹೋರಾಟ ಫಲವಾಗಿ ಅನುಷ್ಠಾನಗೊಳ್ಳಲು ಕಾರಣವಾಯಿತು. ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರಿಂದ ಶಿರಹಟ್ಟಿ ಬಸ್‌ ಡಿಪೋ ಕಾರ್ಯಾರಂಭಕ್ಕೆ ಚಾಲನೆ ನೀಡಲಾಯಿತು.ಶಿರಹಟ್ಟಿ ತಾಲೂಕು ಕೇಂದ್ರಕ್ಕೆ 100 ಹಾಸಿಗೆ ಆಸ್ಪತ್ರೆ ನಿರ್ಮಿಸಲು 70 ಲಕ್ಷ ರೂ. ಮೊತ್ತದಲ್ಲಿ ನಿವೇಶನ ಖರೀದಿಗೆ ಅನುಕೂಲ ಕಲ್ಪಿಸಿದ್ದಾರೆ.

ಶಿರಹಟ್ಟಿ ತಾಲೂಕು ಕೇಂದ್ರ, ಜೆಎಮ್‌ಎಫ್‌ಸಿ ನ್ಯಾಯಾಲಯ ಕಾರ್ಯಾರಂಭಕ್ಕೆ ಸಂಬಂಧಿಸಿದ ಇಲಾಖೆಯೊಂದಿಗೆ ಶ್ರಮಿಸಿದ್ದಾರೆ.

ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2ಲಕ್ಷ ರೂ.ಗಳ ಶಾಸಕರ ಅನುದಾನದಲ್ಲಿ ಎರಡು ಪ್ರಯೋಗಾಲಯಗಳನ್ನು ನಿರ್ಮಿಸಲು ಅನುಕೂಲ ಕಲ್ಪಿಸಿದ್ದಾರೆ. ಪಟ್ಟಣದ ಲೋಕಮಾನ್ಯ ಟಿಳಕ ಸಾರ್ವಜನಿಕ ಗ್ರಂಥಾಲಯ ನೂತನ
ಕಟ್ಟಡಕ್ಕೆ ಭೂಮಿ ಪೂಜೆ, ಶಿರಹಟ್ಟಿಯಲ್ಲಿ 50ಲಕ್ಷ ರೂ.ವೆಚ್ಚದಲ್ಲಿ ಮೌಲಾನಾ ಆಝಾದ ಆಂಗ್ಲ ಮಾಧ್ಯಮ ಶಾಲೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಅವರು ಶಿರಹಟ್ಟಿ ಭಾಗದ ಜನತೆಯ ಬಹುದಿನಗಳ ಬೇಡಿಕೆ ಗದಗ ಯಲವಿಗಿ ನೂತನ ರೈಲ್ವೆ ಮಾರ್ಗಕ್ಕೆ ಬಜೆಟ್‌ನಲ್ಲಿ 640 ಕೋಟಿ ರೂ. ಮೊತ್ತ ಮೀಸಲಿಡಲು ಶಾಸಕ ರಾಮಣ್ಣ ಲಮಾಣಿ ಒತ್ತಾಯಿಸಿದ್ದಾರೆ.

ಕೋವಿಡ್‌ ಸೋಂಕಿತರ ಭೇಟಿ-ಸಮಾಧಾನ
ಕೋವಿಡ್‌ ಸಂದರ್ಭದಲ್ಲಿ ಮನೆಯಲ್ಲಿ ಕೈಕಟ್ಟಿ ಕುಳಿತು ಕೊಳ್ಳದೇ ತಾವೇ ಖುದ್ದಾಗಿ ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್‌ ಸೋಂಕಿತರನ್ನು ಭೇಟಿ ಮಾಡಿ ಸಮಸ್ಯೆ ಆಲಿಸಿದ್ದಾರೆ. ಜತೆಗೆ ಸಹಾಯಕರಾಗಿರುವವರಿಗೆ ಆಹಾರ ಪೊಟ್ಟಣ, ತಾಲೂಕಾಸ್ಪತ್ರೆಗಳಿಗೆ ಅಗತ್ಯವಾಗಿ ಬೇಕಿರುವ ಸಾಮಗ್ರಿ ಪೂರೈಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಬಡವರ ಬಂಧು
ಮತಕ್ಷೇತ್ರದ ಪ್ರತಿ ಗ್ರಾಮದಲ್ಲಿ ಎಸ್‌ಸಿ-ಎಸ್‌ಟಿ ಕಾಲೋನಿಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳುವ ಮೂಲಕ ಬಡವರ, ದೀನದಲಿತರ ಆಶಾಕಿರಣವಾಗಿದ್ದಾರೆ. ಸರಳ-ಸಜ್ಜನಿಕೆಯ, ಹೃದಯವಂತ ಶಾಸಕರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅಭಿವೃದ್ಧಿ ಕಾಮಗಾರಿ

– ತಾಲೂಕಿನ ಚಿಕ್ಕಸವಣೂರ ಗ್ರಾಮದಲ್ಲಿ 55 ಲಕ್ಷ ರೂ. ಸಿಸಿ ರಸ್ತೆ, ಬೂದಿಹಾಳ ಗ್ರಾಮದಲ್ಲಿ 20ಲಕ್ಷ ರೂ.ಗಳ ಸಿಸಿ ರಸ್ತೆ, ಗೋವನಕೊಪ್ಪ ಮತ್ತು ಕೊಗನೂರ ಗ್ರಾಮದ ಹತ್ತಿರದ ಹಳ್ಳಕ್ಕೆ ಸೇತುವೆ ನಿರ್ಮಾಣಕ್ಕೆ 22.50 ಕೋಟಿ ರೂ. ಅನುದಾನ ಒದಗಿಸಿದ್ದಾರೆ.

– ಶಿರಹಟ್ಟಿ ತಾಲೂಕಿನ ಛಬ್ಬಿ ಗ್ರಾಮದಿಂದ ಕುಂದ್ರಳ್ಳಿ ಗ್ರಾಮದವರೆಗೆ ದ್ವಿಪಥ ರಸ್ತೆ ನಿರ್ಮಾಣ ಕಾಮಗಾರಿಗೆ 4.90 ಕೋಟಿ ರೂ.ಅನುದಾನ ಒದಗಿಸಿದ್ದಾರೆ.

– ತಾಲೂಕಿನ ಮಾಗಡಿ ಗ್ರಾಮದಿಂದ ಯರೇಬೂದಿಹಾಳ ಗ್ರಾಮದವರೆಗೆ 2.18 ಕೋಟಿ ರೂ. ಮೊತ್ತದ ರಸ್ತೆ ನಿರ್ಮಾಣ ಕಾಮಗಾರಿಗೆ ಅನುದಾನ ಕಲ್ಪಿಸಿದ್ದಾರೆ.

– 4.50 ಕೋಟಿ ರೂ.ವೆಚ್ಚದಲ್ಲಿ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ-ಕಡಕೋಳ ವಾಯಾ ಮಾಚೇನಹಳ್ಳಿ ಕುಸಲಾಪೂರ ಜಿಲ್ಲಾ ಮುಖ್ಯ ರಸ್ತೆ ಸುಧಾರಣೆಗೆ ಶಾಸಕ ರಾಮಣ್ಣ ಲಮಾಣಿಯವರ ವಿಶೇಷ ಪ್ರಯತ್ನದಿಂದಾಗಿ ಅನುದಾನ ಒದಗಿಸಲಾಗಿದೆ.

– ತಾಲೂಕಿನ ಚಿಕ್ಕ ಸವಣೂರ ಗ್ರಾಮದಲ್ಲಿ 3ಲಕ್ಷ ರೂ. ಅನುದಾನದಲ್ಲಿ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿ ಕೈಗೊಳ್ಳಲಾಗಿದೆ. ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಹಾಯ ಕಲ್ಪಿಸಲಾಗಿದೆ.

– ಶಿರಹಟ್ಟಿಯ ತಾಪಂ ಸಭಾಭವನದಲ್ಲಿ ತಾಲೂಕು ಆಡಳಿತ, ತಾಪಂ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವುಗಳ ಆಶ್ರಯದಲ್ಲಿ 2021-22ನೇ ಸಾಲಿನ ಅಮೃತ ಕಿರು ಉದ್ಯಮ ಯೋಜನೆಯಡಿ ಆಯ್ಕೆಯಾದ ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಬೀಜಧನ ವಿತರಿಸಿದ್ದಾರೆ.

– ಶಿರಹಟ್ಟಿ ತಾಲೂಕಿನಲ್ಲಿ ಜೆಜೆಎಮ್‌ ಕಾಮಗಾರಿಗೆ ಅನುದಾನ ಕಲ್ಪಿಸಿರುವುದು.

– ಶಿರಹಟ್ಟಿ ತಾಲೂಕಿನ ನಾಗರಮಡುವು ಗ್ರಾಮದಲ್ಲಿ 60ಲಕ್ಷ ರೂ.ವೆಚ್ಚದಲ್ಲಿ ಕೋಗನೂರ ಗ್ರಾಮದಲ್ಲಿ 77ಲಕ್ಷ ರೂ. ವೆಚ್ಚದಲ್ಲಿ ಜೆಜೆಎಂ ಯೋಜನೆಯಡಿ ಪೈಪ್‌ಲೈನ್‌ ಅಳವಡಿಸುವ ಕಾಮಗಾರಿಗೆ ಶಾಸಕರು ಚಾಲನೆ ನೀಡಿದ್ದಾರೆ.

– ತಾಲೂಕಿನ ಮಾಗಡಿ ಗ್ರಾಮದಲ್ಲಿ 2.2ಕೋಟಿ ರೂ. ವೆಚ್ಚದ ಅನುದಾನದಲ್ಲಿ ಜಲಜೀವನ ಮಿಷನ್‌ ಯೋಜನೆ ಕಾಮಗಾರಿ ಚಾಲನೆ ನೀಡಿದ್ದಾರೆ.

– ತಾಲೂಕಿನ ಶಿವಾಜಿನಗರ ಗ್ರಾಮದಲ್ಲಿ ಜಲ ಜೀವನ ಮಿಷನ್‌ ಯೋಜನೆಯ 76 ಲಕ್ಷ ರೂ.ಮೊತ್ತದ ಕಾಮಗಾರಿಗೆ ಅನುದಾನ ಒದಗಿಸಿದ್ದಾರೆ.

– ಬನ್ನಿಕೊಪ್ಪ ಗ್ರಾಮದಲ್ಲಿ 1.93 ಕೋಟಿ ರೂ. ಯೋಜನೆಯ ಜಲಜೀವನ ಮಿಷನ್‌ ಯೋಜನೆ ಕಾಮಗಾರಿಗೆ ಅನುದಾನ ಒದಗಿಸಿದ್ದಾರೆ.

– ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ 2 ಕೋಟಿ ರೂ. ವೆಚ್ಚದ ಜೆಜೆಎಮ್‌ ಕಾಮಗಾರಿಗೆ ಅನುದಾನ ಒದಗಿಸಿದ್ದಾರೆ.

– ಶಿರಹಟ್ಟಿ ತಾಲೂಕಿನ ಛಬ್ಬಿ ಗ್ರಾಮದಲ್ಲಿ 2ಕೋಟಿ ರೂ. ವೆಚ್ಚದಲ್ಲಿ ಜಲಜೀವನ ಮಿಷನ್‌ ಯೋಜನೆ ಅಡಿ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಿದ್ದಾರೆ.

– ತಾಲೂಕಿನ ಹೆಬ್ಟಾಳ ಗ್ರಾಮದಲ್ಲಿ 1.50 ಕೋಟಿ ರೂ.ಮೊತ್ತದ ಜೆಜೆಎಮ್‌ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದಾರೆ.

– ತಾಲೂಕಿನ ಸುಗನಹಳ್ಳಿ ಗ್ರಾಮದಲ್ಲಿನ ಆಲದಮ್ಮ ಕೆರೆ ಮತ್ತು ಬನ್ನಿಕೊಪ್ಪ ಕೆರೆ ಅಭಿವೃದ್ಧಿಗಾಗಿ 10 ಕೋಟಿ ರೂ. ಮೊತ್ತದ ಅನುದಾನ ಒದಗಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next