Advertisement

Bhopal; 15 ನಿಮಿಷದೊಳಗೆ ಎರಡು ಬಾರಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ರಾಮನಿವಾಸ್ ರಾವತ್

05:28 PM Jul 08, 2024 | Team Udayavani |

ಭೋಪಾಲ್: ಮಧ್ಯ ಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಸಂಪುಟಕ್ಕೆ ಹೊಸದಾಗಿ ಸೇರ್ಪಡೆಯಾದ ರಾಮನಿವಾಸ್ ರಾವತ್ ಅವರು ವಿಚಿತ್ರ ಪ್ರಸಂಗಕ್ಕೆ ಸಾಕ್ಷಿಯಾದರು. ಅವರ ಪ್ರಮಾಣ ವಚನ ಕಾರ್ಯಕ್ರಮವು ಸಾಮಾನ್ಯ ಕಾರ್ಯಕ್ರಮದಂತೆ ಇರದೆ, ಹಲವು ಗೋಜಲುಗಳಿಗೆ ಕಾರಣವಾಯಿತು.

Advertisement

ಕಾಂಗ್ರೆಸ್ ಪಕ್ಷದ ಶಾಸಕ ರಾಮನಿವಾಸ ರಾವತ್ ಅವರು ಇಂದು ಮೋಹನ್ ಯಾದವ್ ನೇತೃತ್ವದ ಬಿಜೆಪಿ ಸರ್ಕಾರದ ಸಂಪುಟಕ್ಕೆ ಸಚಿವರಾಗಿ ಸೇರ್ಪಡೆಯಾದರು.

ಬೆಳಗ್ಗೆ 9 ಗಂಟೆಗೆ ರಾಮನಿವಾಸ್ ರಾವತ್ ಅವರ ಪ್ರಮಾಣ ವಚನ ಕಾರ್ಯಕ್ರಮ ಯೋಜನೆಯಾಗಿತ್ತು. ರಾಜಭವನದಲ್ಲಿ ಗರ್ವನರ್ ಮಂಗುಭಾಯ್ ಸಿ ಪಟೇಲ್, ಸಿಎಂ ಮೋಹನ್ ಯಾದವ್ ಮತ್ತು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬೆಳಗ್ಗೆ 9.03 ರ ಹೊತ್ತಿಗೆ ಅವರು ಆದರೆ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ ಹದಿನೈದು ನಿಮಿಷಗಳ ನಂತರ ರಾವತ್ ಅವರು ಕ್ಯಾಬಿನೆಟ್ ಸಚಿವರಾಗಿ ಎರಡನೇ ಪ್ರಮಾಣವಚನ ಸ್ವೀಕರಿಸಿದರು.

ಎರಡೆರಡು ಬಾರಿ ಪ್ರಮಾಣ ವಚನ ಸ್ವೀಕರಿಸಿದ ಘಟನೆಯು ಕಾರ್ಯವಿಧಾನದ ಬಗ್ಗೆ ಅನುಮಾನಕ್ಕೆ ಕಾರಣವಾಗಿದೆ.

ರಾವತ್ ಕಾಂಗ್ರೆಸ್ ಶಾಸಕರಾಗಿದ್ದಾಗಲೇ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ ಮೊದಲ ವ್ಯಕ್ತಿಯಾಗಿದ್ದಾರೆ. ಯಾಕೆಂದರೆ ರಾವತ್ ಅವರು ಇನ್ನೂ ಕಾಂಗ್ರೆಸ್‌ ಗೆ ರಾಜೀನಾಮೆ ನೀಡಿಲ್ಲ, ಅವರು ಕಾಂಗ್ರೆಸ್ ಪಕ್ಷದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಮತ್ತು ವಿಜಯಪುರ ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿದ್ದರು. ಆದರೂ ಅವರು ಬಿಜೆಪಿಯ ಸದಸ್ಯರಾಗಿ ಸಚಿವರಾಗಿದ್ದಾರೆ.

Advertisement

ರಾಮನಿವಾಸ್ ರಾವತ್ ಅವರು ರಾಜ್ಯ ಸಚಿವ ಮತ್ತು ಕ್ಯಾಬಿನೆಟ್ ಸಚಿವರಾಗಿ ಸ್ಥಾನ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next