Advertisement
ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಅವರು, ರಾಜ್ಯದ ಕಾಂಗ್ರೆಸ್ ಸರಕಾರದಲ್ಲಿ ನಾನು ಅರಣ್ಯ ಸಚಿವ ನಾಗಿದ್ದ ಸಂದರ್ಭ ಕೇಂದ್ರ ಸರಕಾರ ಕಸ್ತೂರಿ ರಂಗನ್ ವರದಿಯ ಕರಡು ಪ್ರತಿ ಸಿದ್ಧಪಡಿಸಿತ್ತು. ಇದನ್ನು ಜಾರಿಗೊ ಳಿಸಿದರೆ ಪಶ್ಚಿಮ ಘಟ್ಟ ತಪ್ಪಲಿನಲ್ಲಿ ವಾಸಿಸುವ ಅನೇಕ ಕುಟುಂಬಗಳಿಗೆ ತೊಂದರೆಯಾಗುತ್ತದೆ ಎಂಬ ದೂರು ಗಳು ವ್ಯಕ್ತವಾಗಿದ್ದವು. ಈ ಬಗ್ಗೆ ಸಾಕಷ್ಟು ಚರ್ಚೆ ನಡೆದು ಪಶ್ಚಿಮ ಘಟ್ಟದಲ್ಲಿ ಈಗಾಗಲೇ ರಕ್ಷಿತಾರಣ್ಯ, ರಾಷ್ಟ್ರೀಯಉದ್ಯಾನವನ, ಮೀಸಲು ಅರಣ್ಯ, ಅಭಯಾರಣ್ಯ ಮುಂತಾದ ಸೂಕ್ಷ್ಮ ವಲಯಗಳು ಜಾರಿಯಲ್ಲಿರುವುದ ರಿಂದ ಕಸ್ತೂರಿ ವರದಿ ಜಾರಿ ಬೇಡ ಎಂದು ರಾಜ್ಯದಿಂದ ಕೇಂದ್ರಕ್ಕೆ ಶಿಫಾರಸು ಮಾಡಲಾಗಿತ್ತು ಎಂದರು.
Related Articles
ಇದೇ ರೀತಿ ಹುಲಿ ಯೋಜನೆ ಜಾರಿ ಯಾಗುತ್ತದೆ ಎಂದು ಬಿಜೆಪಿಯವರು ಗುಲ್ಲೆಬ್ಬಿಸಿದ್ದರು. ಇದೀಗ ಕೇಂದ್ರ ಸರಕಾರ ಜಾರಿಗೊಳಿಸಲು ಹೊರಟಿದೆ. ಜಾರಿಗೊಳಿಸದಂತೆ ರಾಜ್ಯದ ಬಿಜೆಪಿ ಕೇಂದ್ರವನ್ನು ಆಗ್ರಹಿಸಲಿ ಎಂದರು.
Advertisement
ಕೋಡಿಜಾಲು ಇಬ್ರಾಹಿಂ, ಜಿ.ಎ. ಬಾವಾ, ಶಾಹುಲ್ ಹಮೀದ್, ಶಶಿಧರ ಹೆಗ್ಡೆ, ನವೀನ್ ಡಿ’ಸೋಜಾ, ಹರಿನಾಥ್, ಪ್ರಕಾಶ್ ಸಾಲಿಯಾನ್, ಶುಭೋದಯ ಆಳ್ವ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.