ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ಸಮಯದಿಂದ ದ್ವೇಷ ರಾಜಕಾರಣ ನಡೆಯುತ್ತಿದ್ದು, ಈಗ ಅದು ಪರಾಕಾಷ್ಠೆಗೆ ತಲುಪಿದೆ; ಸಮಯ ಮೀರುವ ಮುನ್ನ ಜನರು ಮತ್ತು ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಜಾತ್ರೆ ಸಂದರ್ಭ ಈ ಹಿಂದಿನಿಂದಲೂ ಸೌಹಾರ್ದ, ಸಾಮರಸ್ಯದಿಂದ ವ್ಯಾಪಾರ ವಹಿ ವಾಟು ನಡೆಯುತ್ತಿದ್ದು, ಈ ವ್ಯವಸ್ಥೆಯ ಮುಂದುವರಿಕೆಗೆ ಅವಕಾಶ ನೀಡಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ತತ್‌ಕ್ಷಣ ಸರ್ವ ಧರ್ಮೀಯರ ಶಾಂತಿಸಭೆ ಕರೆದು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಲಹೆ ಮಾಡಿದರು.
ಕಾನೂನು ಸುವ್ಯವಸ್ಥೆ ಕಾಪಾಡು ವುದು ಸರಕಾರದ ಕೆಲಸ. ಆದರೆ ಸರಕಾರದ ಪ್ರತಿನಿಧಿಗಳೇ ಕೋಮು ದ್ವೇಷ ಹರಡುತ್ತಿದ್ದಾರೆ; ಇದು ಸರಿಯಲ್ಲ. ಧರ್ಮದ ಹೆಸರಿನಲ್ಲಿ ಎಫ್ಐಆರ್ ಹಾಕಿಸಿಕೊಂಡವರು ಕಾಂಗ್ರೆಸ್‌ನವರಲ್ಲ. ಕಾಂಗ್ರೆಸ್ ಪಕ್ಷ ಸಂವಿಧಾನದ ಪ್ರಕಾರ ನಡೆಯುವ ಪಕ್ಷ ಎಂದರು.
ಇದನ್ನೂ ಓದಿ: ದೇಶಾದ್ಯಂತ ಅಂಗನವಾಡಿ ಅಭಿವೃದ್ಧಿಗೆ ಕ್ರಮ: ಸಚಿವೆ ಸ್ಮತಿ ಇರಾನಿ
ಬೆಲೆ ಏರಿಕೆಯಿಂದ ಜನ ಕಂಗೆಟ್ಟಿ ದ್ದಾರೆ. ಇದನ್ನು ನಿಯಂತ್ರಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ಇವೆಲ್ಲವನ್ನೂ ಮರೆಮಾಚಿ ಜನರಲ್ಲಿ ದೇವರು, ಧರ್ಮ, ದೇಶಪ್ರೇಮದ ಹೆಸರಿನಲ್ಲಿ ಸಮಾಜದಲ್ಲಿ ವಿಭಜನೆ ಸೃಷ್ಟಿಸುವ ಕಾರ್ಯದಲ್ಲಿ ಬಿಜೆಪಿ ಹಾಗೂ ಅದರ ಬೆಂಬಲಿತ ಸಂಘಟನೆಗಳು ನಡೆಸುತ್ತಿರುವುದು ಖಂಡನೀಯ ಎಂದರು.