Advertisement

ರಮಾನಾಥ ರೈ ಮತ್ತೆ ಬೆಂಗಳೂರಿನತ್ತ

11:30 AM Jul 25, 2017 | Team Udayavani |

ಮಂಗಳೂರು: ಗೃಹಸಚಿವ ಸ್ಥಾನಕ್ಕೆ ಜಿಲ್ಲೆಯ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರ ಹೆಸರು ಬಲವಾಗಿ ಕೇಳಿಬರುತ್ತಿದ್ದು ಒಂದೆರಡು ದಿನದೊಳಗೆ ಈ ಊಹಾಪೋಹಗಳಿಗೆ ತೆರೆಬೀಳುವ ಸಾಧ್ಯತೆ ಇದೆ. ಇದಕ್ಕೆ ಪುಷ್ಟಿ ನೀಡುವಂತೆ ಸಚಿವ ರಮಾನಾಥ ರೈ ಅವರು ಮಂಗಳವಾರ ನಗರದಲ್ಲಿ ಪೂರ್ವನಿಗದಿತ ಕಾರ್ಯಕ್ರಮಗಳನ್ನು ಬದಿಗೊತ್ತಿ ಮತ್ತೆ ಬೆಂಗಳೂರಿಗೆ ತೆರಳುತ್ತಿದ್ದಾರೆ. ಮೂಲಗಳ ಪ್ರಕಾರ ಸಚಿವ ರಮಾನಾಥ ರೈ ಅವರು ಮಂಗಳವಾರ ಮಧ್ಯಾಹ್ನ ಬೆಂಗಳೂರಿಗೆ ತೆರಳುವ ಸಾಧ್ಯತೆಗಳಿದ್ದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಲಿದ್ದಾರೆ.

Advertisement

ಗೃಹಸಚಿವ ಸ್ಥಾನವನ್ನು ಒತ್ತಾಯಪೂರ್ವಕವಾಗಿ ಒಪ್ಪಿಕೊಳ್ಳುವುಂತೆ ಚರ್ಚಿಸುವ ಸಂಬಂಧ ಮುಖ್ಯಮಂತ್ರಿ ಖುದ್ದು ಬುಲಾವ್‌ ನೀಡಿದ್ದಾರೆ. ಗೃಹಖಾತೆಯನ್ನು ಒಪ್ಪಿಕೊಳ್ಳುವುದಕ್ಕೆ ರೈ ಈಗಾಗಲೇ ನಿರಾಕರಿಸಿದ್ದು ಒಲ್ಲದ ಮನಸ್ಸಿನಿಂದಲೇ ಈ ವಿಷಯ ಚರ್ಚಿಸಲು ಮುಖ್ಯಮಂತ್ರಿಯನ್ನು ಭೇಟಿ ಮಾಡುತ್ತಿದ್ದಾರೆ ಎನ್ನಲಾಗಿದೆ. ರಮಾನಾಥ ರೈ ಅವರು ಮುಂದಿನ ಗೃಹಸಚಿವರಾಗುತ್ತಾರೆ ಎನ್ನುವ ಕುರಿತು ಕಳೆದ ಕೆಲವು ದಿನಗಳಿಂದ ದ.ಕನ್ನಡ ಜಿಲ್ಲೆಯಲ್ಲಿ ರಾಜಕೀಯವಾಗಿ ಹಬ್ಬಿರುವ ವದಂತಿಗಳಿಗೆ ಶುಕ್ರವಾರದ ವೇಳೆಗೆ ಸ್ಪಷ್ಟತೆ ದೊರೆಯುವ ಸಾಧ್ಯತೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next