Advertisement

ಬಿಡದಿ ಪುರಸಭೆಗೆ ಕರಡು ಮೀಸಲಾತಿ: ಆಕ್ಷೇಪ ಸಲ್ಲಿಕೆ

06:22 PM May 20, 2021 | Team Udayavani |

ರಾಮನಗರ: ಬಿಡದಿ ಪುರಸ‌ಭೆಗೆ ವಾರ್ಡುವಾರು ಕರಡು ಮೀಸಲಾತಿ ಪ್ರಕಟಣೆಯಾಗಿದ್ದು, ಹಾಲಿ ಪುರಸಭಾ ಸದಸ್ಯರು ಮತ್ತು ಕೆಲವು ನಾಗರಿಕರು ಆಕ್ಷೇಪಣೆ  ವ್ಯಕ್ತಪಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

Advertisement

ಜೂನ್‌ ತಿಂಗಳಲ್ಲಿ ಹಾಲಿ ಪುರಸಭೆಯ ಅವಧಿ ಪೂರ್ಣಗೊಳ್ಳಲಿದೆ. ತದನಂತರ ನಡೆಯಬೇಕಾದ ಚುನಾವಣೆಗೆ ಸರ್ಕಾರ ತನ್ನ ರಾಜ್ಯ ಪತ್ರದಲ್ಲಿ ಪುರಸಭೆಯ 23 ವಾರ್ಡುಗಳಿಗೆ ಮೀಸಲಾತಿ ಪ್ರಕಟಿಸಿದೆ.ಆಕ್ಷೇಪಣೆಗಳನ್ನು ಆಹ್ವಾನಿಸಿದೆ. ಈ ಹಿನ್ನೆಲೆಯಲ್ಲಿ ಮೀಸಲಾತಿಗೆ ಆಕ್ಷೇಪಣೆ ವ್ಯಕ್ತಪಡಿಸಿ, ಪರಿಷ್ಕರಿಸುವಂತೆ ಮನವಿ ಸಲ್ಲಿಸಲಾಗಿದೆ.

ಈ ಸಂಬಂಧ ಸುದ್ದಿಗಾರರ ಬಳಿ ಮಾತನಾಡಿದಬಿಡದಿ ಪುರಸಭೆಯ ಸದಸ್ಯ ಸಿ.ಉಮೇಶ್‌ ಮತ್ತುಬೋರೇಗೌಡ (ಹರೀಶ್‌), ಬಿಡದಿ ಪುರಸಭೆಯ23 ವಾರ್ಡುಗಳಿಗೆ 2011ರ ಜನಗಣತಿಯನ್ನಾಧರಿಸಿ ವಾರ್ಡ್‌ವಾರು ಕರಡು ಮೀಸಲಾತಿಯನ್ನು ಪ್ರಕಟಿಸಲಾಗಿದೆ. ಆದರೆ 10 ವರ್ಷಗಳ ಹಿಂದಿನ ಜನಗಣತಿಯನ್ನಾಧರಿಸಿ ಕರಡುಮೀಸಲಾತಿ ಪಟ್ಟಿಯನ್ನು ಪ್ರಕಟಿಸಿರುವುದಕ್ಕೆ ನಮ್ಮ ಆಕ್ಷೇಪಣೆಯಿದೆ. 2021ರ ಜನಗಣತಿ ಸಮೀಕ್ಷೆನಡೆಸಿದ ನಂತರವಷ್ಟೇ ವಾರ್ಡುವಾರುಮೀಸಲಾತಿ ಪಟ್ಟಿಯನ್ನು ಬಿಡುಗಡೆ ಮಾಡಬೇಕು.ಇಲ್ಲವಾದರೆಕೆಲವುವರ್ಗಗಳಿಗೆಮೀಸಲಾತಿಯಲ್ಲಿ ಅನ್ಯಾಯವಾಗುವ ಸಂಭವವಿದೆ ಎಂದರು.

2015ರಲ್ಲಿ ಗ್ರಾಪಂನಿಂದ ಮೇಲ್ದರ್ಜೆಗೇರಿ 23ವಾರ್ಡುಗಳ ವಿಂಗಡಣೆಯೊಂದಿಗೆ ಬಿಡದಿಪುರಸಭೆ ಸ್ತಿತ್ವಕ್ಕೆ ಬಂದಿದೆ. 2016ರಲ್ಲಿ ಮೊದಲಪುರಸಭೆ ಚುನಾವಣೆ ನಡೆದಿದೆ. ಆಗಲೂ 2011ರ ಜನಗಣತಿ ಪ್ರಕಾರವೇ ಮೀಸಲಾತಿಯನ್ನುಪ್ರಕಟಿಸಲಾಗಿದೆ. 2021ರ ಚುನಾವಣೆಯಲ್ಲೂಅದೇ ಜನಗಣತಿಯ ಪ್ರಕಾರ ಮೀಸಲುನಿಗದಿಗೊಳಿಸುವುದು ಸರಿಯಾದ ಕ್ರಮವಲ್ಲಎಂದು ಅವರು ಅಭಿಪ್ರಾಯಪಟ್ಟರು.

ಕಳೆದ 10 ವರ್ಷಗಳಲ್ಲಿ ಸಾಕಷ್ಟು ಬದಲಾವಣೆಆಗಿರುವುದರಿಂದ ಬಿಡದಿ ಪುರಸಭೆಗೆ ವಾಡ್‌ìವಾರು ಪ್ರಕಟಿಸಿರುವ ಮೀಸಲಾತಿ ಪಟ್ಟಿಯನ್ನು ಮರುಪರಿಶೀಲಿಸಬೇಕು ಎಂದು ತಾವು ಆಗ್ರಹಿಸಿರುವುದಾಗಿ ತಿಳಿಸಿದರು.ಅಲ್ಲದೆ ವಾರ್ಡ್‌ವಾರು ಕರಡು ಮೀಸಲಾತಿಪಟ್ಟಿಯಲ್ಲಿ ಸಾಕಷ್ಟು ನ್ಯೂನತೆಗಳು ಕಂಡುಬಂದಿದ್ದುಕೆಲವು ಕಾಣದ ಕೈಗಳು ಈ ಮೀಸಲು ಪಟ್ಟಿತಯಾರಿಕೆ ಹಿಂದೆ ಕೆಲಸ ಮಾಡಿವೆ ಎನಿಸುತ್ತಿದೆ.ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಶಾಸಕ ಎ.ಮಂಜುನಾಥ್‌ ಅವರು ತಮಗೆ ಬೇಕಾದ ರೀತಿಯಲ್ಲಿ ವಾರ್ಡ್‌ಗಳ ಮೀಸಲಾತಿಯನ್ನು ಸಿದ್ದಪಡಿಸಿರುವ ಅನುಮಾನವಿದೆ ಎಂದು ಅವರು ಆರೋಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next