Advertisement

ಅಶ್ವತ್ಥ ನಾರಾಯಣ್ ಮೇಲೆ ಆರೋಪಕ್ಕೆ ರಾಮನಗರದ ಕಾರ್ಯಕ್ರಮ ಕಾರಣ: ಸಚಿವ ಮುನಿರತ್ನ

01:38 PM May 05, 2022 | Team Udayavani |

ಬೆಂಗಳೂರು: ಪಿಎಸ್‌ಐ ಪರೀಕ್ಷೆ ಹಗರಣಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಅವರು ದಾಖಲೆ ನಂತರ ಕೊಡುವೆ ಎಂದು ಹೇಳುವ ಮೂಲಕ ಗಾಳಿಯಲ್ಲಿ ಗುಂಡು ಹೊಡೆದಿದ್ದಾರೆ ಎಂದು ಸಚಿವ ಮುನಿರತ್ನ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ದಿನಗಳಿಂದ ಪಿಎಸ್‌ಐ ಪರೀಕ್ಷೆಗೆ ಸಂಬಂಧಿಸಿ ಕಾಂಗ್ರೆಸ್ ಪಕ್ಷದ ನಾಯಕರು, ಬಿಜೆಪಿ ನಾಯಕರ ಮೇಲೆ ಯಾವುದೇ ಆಧಾರವಿಲ್ಲದೆ ಆರೋಪ ಮಾಡುತ್ತಿದ್ದಾರೆ. ಅನುಭವ ಇಲ್ಲದ ನಾಯಕರು ಆರೋಪ ಮಾಡಿದರೆ ಸರಿ, ಆದರೆ ಮುಖ್ಯ ಮಂತ್ರಿ ಆಗಿದ್ದವರು, ಹಲವು ಬಾರಿ ಬಜೆಟ್ ಮಂಡಣೆ ಮಾಡಿದವರು ಆಧಾರ ರಹಿತ ಆರೋಪ ಮಾಡಿದ್ದಾರೆ. ಸಂಪೂರ್ಣ ತನಿಖೆಗೆ ಸರ್ಕಾರ ಬದ್ದವಿದೆ ಆದರೂ, ಊಹಾಪೋಹದ ಹೇಳಿಕೆಗಳನ್ನು ಹೇಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಚುನಾವಣೆ ಹತ್ತಿರವಿದೆ. 8 ಸರ್ವೇ ಮಾಡಿದ್ದಾರೆ, ಎಲ್ಲಾ ಸರ್ವೆಯಲ್ಲೂ ಬಿಜೆಪಿ ಮುಂದಿದೆ. ಹೇಗಾದರೂ ಮಾಡಿ, ಸುಳ್ಳು ಆರೋಪ ಹೊರಿಸಲು ಮುಂದಾಗಿದ್ದಾರೆ. ಸಚಿವ ಬೈರತಿ ಬಸವರಾಜ್‌ ಸೇರಿದಂತೆ ಇತರರ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷದ ನಾಯಕರಿಗೆ ಕಿವಿಮಾತು ಹೇಳುತ್ತೇನೆ. ಆರೋಪ ಮಾಡಿದ ವ್ಯಕ್ತಿ ಎಲ್ಲಿದ್ದರೂ, ಹೇಗಿದ್ದರೂ ಗೊತ್ತಾ?. ಅಶ್ವತ್ಥ ನಾರಾಯಣ ವಿರುದ್ಧ ಈ ರೀತಿಯ ಆರೋಪ ಮಾಡಬೇಕೆಂದು ಕಾಂಗ್ರೆಸ್ ನಾಯಕರು ರಾಮನಗರದ ವೇದಿಕೆಯಲ್ಲೇ ನಿರ್ಧಾರ ಮಾಡಿದ್ದರು ಎಂದರು.

ಇದನ್ನೂ ಓದಿ:ಸಿದ್ದರಾಮಯ್ಯನವರೇ ಡಿಕೆಶಿಯಿಂದ ದೂರವಿರಿ: ರೇಣುಕಾಚಾರ್ಯ ಸಲಹೆ!

Advertisement

ಅಶ್ವತ್ಥ ನಾರಾಯಣ್ ಸಹೋದರನ ದಿನಚರಿ ತೆಗೆಯಿರಿ. ವಿನಾಕಾರಣ ಆರೋಪ ಮಾಡಬೇಡಿ, ಈಗಾಗಲೇ ಜನರ ಒಲವು ಕಳೆದುಕೊಂಡಿದ್ದೀರಿ. ದಯವಿಟ್ಟು ದಾಖಲೆ ಬಿಡುಗಡೆ ಮಾಡಿ, ದಾಖಲೆ ಇಲ್ಲದ ಆರೋಪವನ್ನು ದೇವರೂ ಒಪ್ಪಲ್ಲ ಎಂದು ಹೇಳಿದ್ದಾರೆ.

ದಾಖಲೆ ಇಲ್ಲದೆ ಯಾರೇ ಮಾತಾಡಿದರೂ ತಪ್ಪು, ಮೋದಿ ಮಾತಾಡಿದರೂ ತಪ್ಪು 10% ಬಗ್ಗೆ ಸಿದ್ದರಾಮಯ್ಯ ಮೋದಿಯವರ ಬಳಿ ದಾಖಲೆ ಕೇಳಬೇಕಿತ್ತು. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಹೇಳಿಕೆ ನೀಡಬೇಕು. ಪ್ರಿಯಾಂಕ್‌ ಖರ್ಗೆಯವರು ಹೋಗಿ ನೋಟೀಸ್ ಗೆ ಉತ್ತರ ನೀಡಬೇಕು. ಕುಮಾರಸ್ವಾಮಿ ಆರೋಪದ ಬಗ್ಗೆ ಅವರನ್ನೇ ಕೇಳಬೇಕು. ದಾಖಲೆ ಯಾರು ಕೊಡುತ್ತಾರೆ ಅಂತ ಅವರನ್ನು ಕೇಳಿ ಎಂದರು.

ಅಶ್ವತ್ಥ ನಾರಾಯಣ್ ಮೇಲೆ ಆರೋಪ ಬರಲು ರಾಮನಗರದ ಕಾರ್ಯಕ್ರಮ ಕಾರಣ

ಅಶ್ವತ್ಥ ನಾರಾಯಣ್‌ ಅವರ ಮೇಲೆ ಆರೋಪ ಬರಲು ರಾಮನಗರ ಕಾರ್ಯಕ್ರಮವೇ ಕಾರಣ, ಅಲ್ಲಿಂದಲೇ ಅವರ ಮೇಲೆ ಆರೋಪ ಬರಲು ಶುರುವಾಯಿತು. ಇದೆಲ್ಲ ಹೇಗೆ ಗೊತ್ತು ಅಂದರೆ, ನಾವೂ ಕಾಂಗ್ರೆಸ್‌ನಲ್ಲೇ ಇದ್ದೆವಲ್ಲಾ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next