Advertisement

ರಾಮನಗರ ಒನ್‌ ಡಿಜಿಟಲ್‌ ಸೇವೆ ಕಾರ್ಯಾರಂಭ

12:51 PM Jan 29, 2022 | Team Udayavani |

ರಾಮನಗರ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಂಗಳೂರು ಒನ್‌ ಕೇಂದ್ರಗಳಲ್ಲಿ ವಿದ್ಯುತ್‌, ನೀರು ಸೇರಿದಂತೆ ವಿವಿಧ ಸೇವೆಗಳ ಬಿಲ್‌ ಪಾವತಿ ವ್ಯವಸ್ಥೆ ಯಶಸ್ವಿಯಾಗಿದ್ದು, ಇದೇ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಗ್ರಾಮ ಪಂಚಾಯ್ತಿಗಳಲ್ಲಿ ಪರಿಚಯಿಸಿದೆ. ತಾಲೂಕಿನಲ್ಲಿ ರಾಮನಗರ ಒನ್‌ ಎಂಬ ಹೆಸರಿನಲ್ಲಿ ಇಂತಹ ವ್ಯವಸ್ಥೆ ಆರಂಭವಾಗಿದೆ.

Advertisement

ನಗರ ಪ್ರದೇಶಗಳ ಜನತೆ ಅನೇಕ ಸೇವೆಗಳನ್ನು ಆನ್‌ಲೈನ್‌ಮೂಲಕವೇ ಪಡೆಯುತ್ತಿದ್ದಾರೆ.ಬಹಳಷ್ಟು ಕೆಲಸಗಳು ಆನ್‌ಲೈನ್‌ ಅಂಗೈನಲ್ಲಿಯೇ ನಡೆಯುತ್ತಿದೆ. ಆದರೆ ಗ್ರಾಮೀಣ ಭಾಗದ ಜನತೆಗೆ ಡಿಜಿಟಲ್‌ ತಂತ್ರಜ್ಞಾನ ಅಷ್ಟಾಗಿ ತಲುಪಿಲ್ಲ.

ನಗರ ಪ್ರದೇಶಗಳಲ್ಲಿ ಲಭ್ಯವಿರುವ ಆನ್‌ಲೈನ್‌ ಸೇವೆಗಳು ಗ್ರಾಮೀಣ ಭಾಗದಲ್ಲೂ ನಾಗರಿಕರಿಗೆ ಲಭ್ಯವಾಗಬೇಕು ಎಂಬ ಉದ್ದೇಶದಲ್ಲಿ ಸರ್ಕಾರ ಗ್ರಾಮ ಒನ್‌ ಡಿಜಿಟಲ್‌ ಕೇಂದ್ರಗಳನ್ನು ಆರಂಭಿಸಿದೆ. ಸರ್ಕಾರ ಈ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ರಾಮನಗರ ಒನ್‌ ಎಂಬ ನಾಮಕರಣದೊಂದಿಗೆ ಆರಂಭವಾಗಿದೆ.

ಯೋಜನೆ ಜಾರಿ: ರಾಮನಗರ ಜಿಲ್ಲಾ ಪಂಚಾಯ್ತಿ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋ ಪಾಯ ಸಂವರ್ಧನ ಸಂಸ್ಥೆ, ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಜೀವನೋ ಪಾಯ ಇಲಾಖೆಗಳು ಸಂಯುಕ್ತ ವಾಗಿ ಈ ಯೋಜನೆಯನ್ನು ಜಿಲ್ಲೆಯಲ್ಲಿ ಜಾರಿಗೊಳಿಸಿವೆ.

20 ಗ್ರಾಪಂನಲ್ಲಿ ಸೇವೆ: ರಾಮನಗರ ತಾಲೂಕಿನಲ್ಲಿ ಪ್ರಥಮ ಹಂತದಲ್ಲಿ 20 ಗ್ರಾಪಂನಲ್ಲಿ ಈ ಯೋಜನೆ ಅನುಷ್ಠಾನವಾಗುತ್ತಿದೆ. ಗುರುವಾರ ಹರೀಸಂದ್ರ, ಹುಣಸನಹಳ್ಳಿ, ಬಿಳಗುಂಬ ಪಂಚಾಯ್ತಿಗಳಲ್ಲಿ ಈ ಸೇವೆ ಆರಂಭವಾಗಿದ್ದು, ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

ಗ್ರಾಮ ಒನ್‌ ಡಿಜಿಟಲ್‌ ಸೇವೆ: ರಾಮನಗರ ಒನ್‌ ಡಿಜಿಟಲ್‌ ಕೇಂದ್ರಗಳಲ್ಲಿ ಆನ್‌ಲೈನ್‌ ಮೂಲಕಗ್ರಾಮೀಣ ಭಾಗದ ಜನತೆ ವಿದ್ಯುತ್‌ ಬಿಲ್‌, ನೀರಿನಬಿಲ್‌, ಮೊಬೈಲ್‌ ರೀಚಾರ್ಜ್‌ ಮುಂತಾದ ಸೇವೆಗಳಿಗೆಪಟ್ಟಣ ಪ್ರದೇಶಗಳಿಗೆ ಅಲೆದಾಡಬೇಕಾಗಿತ್ತು. ಗ್ರಾಮ ಒನ್‌ ಡಿಜಿಟಲ್‌ ಕೇಂದ್ರಗಳು ಗ್ರಾಪಂನಲ್ಲೇ ಲಭ್ಯವಾಗಿದ್ದು, ಈ ಸೇವೆಗಳನ್ನು ಅತ್ಯಲ್ಪ ಸೇವಾ ಶುಲ್ಕದಲ್ಲಿ ಪಡೆಯಬಹುದಾಗಿದೆ.

ಪಾರ್ಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವುದು, ಜೀವನ ಪ್ರಮಾಣ ಪತ್ರ ಪಡೆಯುವುದು, ರಾಷ್ಟ್ರೀಯ ಪಿಂಚಣಿ ಯೋಜನೆ ಸೇವೆ ಪಡೆಯುವುದು ಸಹ ಈ ಕೇಂದ್ರಗಳಲ್ಲಿ ಸಾಧ್ಯವಿದೆ. ಬಸ್‌, ರೈಲು, ವಿಮಾನಗಳ ಟಿಕೆಟ್‌ ಖರೀದಿ ಇಲ್ಲಿ ಲಭ್ಯವಿದೆ. ಜೀವ ವಿಮಾ ಪಾಲಿಸಿಗಳ ನವೀಕರಣ, ಪ್ರೀಮಿಯಂ ಪಾವತಿ, ಹಿರಿಯ ನಾಗರಿಕರ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಗ್ರಾಮೀಣ ಭಾಗದ ಮನೆ ಬಾಗಿಲಿನಲ್ಲೇ ಸೇವೆ ಲಭ್ಯವಿದೆ.

ವಿವಿಧ ದಾಖಲೆಗೆ ಅರ್ಜಿ: ಪಾನ್‌ ಕಾರ್ಡ್‌, ಆಧಾರ್‌ ಕಾರ್ಡ್‌, ಪಡಿತರ ಚೀಟಿ, ಆರ್‌ಟಿಸಿ ದಾಖಲೆ ಸೇರಿ ದಂತೆ ಸರ್ಕಾರದ ವಿವಿಧ ದಾಖಲೆಗಳನ್ನು ಪಡೆಯುವುದು ಸಾಧ್ಯವಿದೆ. ಮೈಕ್ರೋ ಬ್ಯಾಂಕಿಂಗ್‌ ವ್ಯವಸ್ಥೆಯು ಈ ಸೇವೆಯಲ್ಲಿ ಅಡಕವಾಗಿದ್ದು, ನಾಗರಿಕರು ಎಇಪಿ ಎಸ್‌ ವ್ಯವಸ್ಥೆ ಮೂಲಕ ಈ ಕೇಂದ್ರಗಳಲ್ಲಿ ತಮ್ಮಬ್ಯಾಂಕಿನ ಖಾತೆಯಿಂದ ನಗದನ್ನು ಸಹ ಪಡೆಯಬಹುದಾಗಿದೆ. ಇವೇ ಅಲ್ಲದೆ ಅನೇಕ ಸೇವೆಗಳನ್ನು ಪಡೆಯಲು ಗ್ರಾಮೀಣ ಪ್ರದೇಶದ ನಾಗರಿಕರು ರಾಮನಗರ ಒನ್‌ ಕೇಂದ್ರಗಳನ್ನು ಅವಲಂಭಿಸಬಹುದಾಗಿದೆ.

ಬೆಳಗ್ಗೆ 8 ರಿಂದ ಸಂಜೆ 8ರವರೆಗೆ ಕಾರ್ಯ: ರಾಮನಗರ ಒನ್‌ ಡಿಜಿಟಲ್‌ ಕೇಂದ್ರಗಳು ಬೆಳಗ್ಗೆ 8 ಗಂಟೆಯಿಂದ ಸಂಜೆ 8 ಗಂಟೆಯವರೆಗೂ ಕಾರ್ಯನಿರ್ವಹಿಸಲಿವೆ. ಡಿಜಿಟಲ್‌ ಸಖೀಯರು ನಾಗರಿಕರು ವಿವಿಧ ಸೇವೆಗಳನ್ನು ಪಡೆಯಲು ಸಹಕಾರ ನೀಡುವರು.

ನಾಗರಿಕರು ಈ ಕೇಂದ್ರಗಳಲ್ಲಿ ಪಡೆಯುವ ಪ್ರತಿ ಸೇವೆಯ ಮಾಹಿತಿ ಅವರು ನೀಡುವ ಮೊಬೈಲ್‌ ಸಂಖ್ಯೆಗೆ ಮೆಸೆಜ್‌ ರೂಪದಲ್ಲಿ ಮಾಹಿತಿ ಲಭ್ಯವಾಗುತ್ತದೆ. ಸೇವಾ ಸಿಂಧು ಸೇವೆ ಅಡಿಯಲ್ಲಿ ಸಿಗುವ ಎಲ್ಲ ಸವಲತ್ತುಗಳು, ಸಕಾಲ ವ್ಯವಸ್ಥೆ ಕೂಡ ರಾಮನಗರ ಒನ್‌ ಕೇಂದ್ರಗಳು ಗ್ರಾಮೀಣ ಭಾಗದಲ್ಲೇ ಜಾರಿಯಾಗಿರುವುದರಿಂದ ಗ್ರಾಮೀಣ ನಾಗರಿಕರು ಒಂದು ದಾಖಲೆಗೂ ನಗರಗಳಿಗೆ ಬರುವುದು ತಪ್ಪುತ್ತದೆ. ಮಧ್ಯವರ್ತಿಗಳ ಹಾವಳಿಯೂ ತಪ್ಪುತ್ತದೆ ಎಂಬುದು ಸರ್ಕಾರದ ಅಭಿಪ್ರಾಯವಾಗಿದೆ.

ರಾಮನಗರ ಒನ್‌ ಕೇಂದ್ರಗಳಲ್ಲಿರುವ ಡಿಜಿಟಲ್‌ ಸಖೀಯರಿಗೆ ನಾಗರಿಕರು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅಗತ್ಯ ದಾಖಲೆ ಕೊಡಬೇಕಾಗಿದೆ. ನಿಗದಿತ ಸೇವಾ ಶುಲ್ಕವನ್ನುಮಾತ್ರ ಪಾವತಿಸಬೇಕಾಗಿದೆ. -ಇಕ್ರಮ್‌, ಸಿಇಒ, ಜಿಲ್ಲಾ ಪಂಚಾಯ್ತಿ

ರಾಮನಗರ ಒನ್‌ ಡಿಜಿಟಲ್‌ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಜಿಲ್ಲಾ ಹಂತದಲ್ಲಿಸಂಜೀವಿನಿ ಗುಂಪುಗಳ ಮಹಿಳಾ ಸದಸ್ಯರಿಗೆ ತರಬೇತಿನೀಡಲಾಗಿದೆ. ಡಿಜಿಟಲ್‌ ಕೇಂದ್ರಗಳು ಈ ಗುಂಪುಗಳಬಲವರ್ಧನೆ ಹಾಗೂ ಸದಸ್ಯರಿಗೆ ಜೀವನೋಪಾಯ ಕಲ್ಪಿಸಲು ಸಹಕಾರಿಯಾಗಿದೆ. -ವಿನೋದ್‌ ಕುಮಾರ್‌, ರಾಮನಗರ ಒನ್‌ ವ್ಯವಸ್ಥಾಪಕ

Advertisement

Udayavani is now on Telegram. Click here to join our channel and stay updated with the latest news.

Next