Advertisement

ಹಾರೋಹಳ್ಳಿ ದೊಡ್ಡಕೆರೆಗೆ ಬೇಕಿದೆ ಕಾಯಕಲ್ಪ

05:47 PM Jul 25, 2021 | Team Udayavani |

ಕನಕಪುರ: ಪುರಾತನ ಕಾಲದಿಂದಲೂಅಂತರ್ಜಲಕ್ಕೆ ಕೊಂಡಿಯಾಗಿದ್ದ ಹಾರೋಹಳ್ಳಿ ಕೆರೆ ವಿಷದ ಕೂಪವಾಗಿ ಮಾರ್ಪಟ್ಟುಕಾಯಕಲ್ಪಕ್ಕಾಗಿ ಎದುರು ನೋಡುತ್ತಿದೆ.ತಾಲೂಕಿನ ಹಾರೋಹಳ್ಳಿಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ದೊಡ್ಡಕೆರೆಗೆ ಕಸದ ರಾಶಿ ಕೊಳಿ ತ್ಯಾಜ್ಯ ಚರಂಡಿನೀರು ಶೌಚಾಲಯದ ತ್ಯಾಜ್ಯ ಸೇರಿ ಕೆರೆಸಂಪೂರ್ಣವಾಗಿ ವಿಷದ ಕೂಪವಾಗಿಮಾರ್ಪಟ್ಟು ಗಬ್ಬು ನಾರುತಿದೆ.

Advertisement

ಕೆರೆಯಸ್ವರೂಪವನ್ನು ಕಾಪಾಡಬೇಕಾದ ಸ್ಥಳೀಯಆಡಳಿತ ಯಾವುದೇ ಕಟ್ಟು ನಿಟ್ಟಿನಕ್ರಮವಹಿಸದೆ ವಿಫ‌ಲವಾಗಿರುವುದುಎದ್ದುಕಾಣುತ್ತಿದೆ.ಸುಮಾರು 40 ಎಕರೆಗಿಂತಲೂ ಹೆಚ್ಚುವಿಸ್ತೀರ್ಣದಲ್ಲಿರುವ ಹಾರೋಹಳ್ಳಿ ಕೆರೆಪುರಾತನ ಕಾಲದಿಂದಲೂ ಅಂತರ್ಜಲಕ್ಕೆಕೊಂಡಿಯಾಗಿ ಹಾರೋಹಳ್ಳಿ ಮತ್ತು ಸುತ್ತಮುತ್ತಲ ಕೊಳವೆ ಬಾವಿಗಳಿಗೆ ಆಸರೆಯಾಗಿತ್ತು.

ಆದರೆ, ಹಾರೋಹಳ್ಳಿ ಅಭಿವೃದ್ಧಿಯೇ ಕೆರೆಗೆ ಕಂಟಕವಾಗಿ ಪರಿಣಮಿಸಿರುವುದು ಮಾತ್ರ ಸುಳ್ಳಲ್ಲ ಹಾರೋಹಳ್ಳಿ ದಿನೇದಿನೆ ಕೈಗಾರಿಕಾ ಕ್ಷೇತ್ರದಲ್ಲಿ ಬೆಳೆಯುತ್ತಿರುವಜತೆಗೆ ಸಮೀಪದ ಬೆಂಗಳೂರಿನಲ್ಲಿ ಜನದಟ್ಟಣೆ ಹೆಚ್ಚಾದಂತೆಲ್ಲ ಹಾರೋಹಳ್ಳಿಯತ್ತಜನರು ಮುಖಮಾಡಿದ್ದಾರೆ ಇದರಿಂದಜನಸಂಖ್ಯೆ ಗಣನೀಯವಾಗಿ ಹೆಚ್ಚಿದೆ.ಅಂಗಡಿ ಮುಂಗಟ್ಟು ದ್ವಿಗುಣವಾಗಿಉತ್ಪಾತ್ತಿಯಾಗುವ ತ್ಯಾಜ್ಯವನ್ನು ತಂದುಕೆರೆಗೆ ಸುರಿಯುತ್ತಿರುವುದರಿಂದ ವಿಷಮಸ್ಥಿತಿ ನಿರ್ಮಾಣವಾಗಿದೆ.ಹಾರೋಹಳ್ಳಿಯಲ್ಲಿ ಒಳಚರಂಡಿವ್ಯವಸ್ಥೆ ಮತ್ತು ಚರಂಡಿ ತ್ಯಾಜ್ಯದವಿಲೇವಾರಿಗೆ ಪ್ರತ್ಯೇಕ ವ್ಯವಸ್ಥೆ ಇಲ್ಲದೇಇರುವುದು ಕೆರೆಯ ನೀರು ಕಲುಷಿತವಾಗಲು ಮತ್ತೂಂದು ಕಾರಣ.

ಚರಂಡಿತ್ಯಾಜ್ಯ ವಿಲೇವಾರಿಗೆ ಪರ್ಯಾಯ್ನಾ ವ್ಯವಸ್ಥೆಇಲ್ಲದೆ ಕೆರೆಗೆ ಬಿಡಲಾಗುತ್ತಿದೆ ಒಳಚರಂಡಿಇಲ್ಲದೆ ಕೆಲವರು ಶೌಚದ ತ್ಯಾಜ್ಯವನ್ನುಚರಂಡಿಗೆ ಹರಿಸುತ್ತಿದ್ದಾರೆ. ಬಸ್‌ನಿಲ್ದಾಣದ ಶೌಚದ ತ್ಯಾಜ್ಯ ಹಾಗೂ ಕೆಲವುಅಂಗಡಿ ಮಾಲೀಕರು ಶೌಚದ ತ್ಯಾಜ್ಯವನ್ನುಚರಂಡಿ ಮೂಲಕ ಕೆರೆಗೆ ಬಿಡುತ್ತಿದ್ದಾರೆಇದರಿಂದ ಕೆರೆ ಮತ್ತಷ್ಟು ಕಲುಷಿತವಾಗಿದ್ದು,ಅಂತರ್ಜಲ ವಿಷಯಮವಾಗುತ್ತಿದೆ.ಕೆರೆ ಸುತ್ತಲು ಒತ್ತುವರಿಯಾಗಿ ತನ್ನಸ್ವರೂಪ ಕಳೆದುಕೊಳ್ಳುತ್ತಿದ್ದರು ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಅದರ ರಕ್ಷಣಾಕ್ರಮಕೈಗೊಂಡಿಲ್ಲ.

ವಿಶಾಲವಾಗಿದ್ದ ಕೆರೆದಿನಕಳೆದಂತೆ ಒತ್ತುವರಿಯಾಗಿದೆ. ಕಸಮತ್ತು ಕಟ್ಟಡ ತೆರವುಗೊಳಿಸಿದ ಇಟ್ಟಿಗೆಮಣ್ಣು ಸುರಿದು ಕೆರೆಯನ್ನು ಮುಚ್ಚಿ ಆಜಾಗದಲ್ಲಿ ತಳ್ಳುವ ಗಾಡಿಗಳಲ್ಲಿ ಕ್ಯಾಂಟೀನ್‌ವ್ಯಾಪಾರಕ್ಕೆ ಆಟೋ ನಿಲುಗಡೆಗೆ ಬಳಸಿಕೊಳ್ಳುತ್ತಿದ್ದಾರೆ. ಕೆರೆ ಒತ್ತುವರಿ ತೆರವಿಗೆಈಗಾಗಲೇ ಮನವಿ ಮಾಡಲಾಗಿದೆ.ಹಾರೋಹಳ್ಳಿ ತಾಲೂಕು ಕೇಂದ್ರವಾಗಿಘೋಷಿಸಲಾಗಿದ್ದು, ಗ್ರಾಪಂ, ಪಪಂಮೇಲ್ದರ್ಜೆಗೇರಿದೆ ಆಡಳಿತ ವ್ಯವಸ್ಥೆಚುರುಕುಗೊಂಡು ನಗರದಲ್ಲಿ ಸ್ವತ್ಛತೆಗೆಹೆಚ್ಚಿನ ಆದ್ಯತೆ ನೀಡಬೇಕಿದೆ ಸಂಬಂಧಪಟ್ಟಅಧಿಕಾರಿಗಳು ಈಗಲಾ ದರೂ ಎಚ್ಚೆತ್ತುಕೊಂಡು ಕರೆ ಅಭಿವೃದ್ಧಿಗೆ ಶ್ರಮಿಸಬೇಕಿದೆಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next