Advertisement

ಸಾವಯವ  ಬೆಳೆಗೆ ಹೆಚ್ಚಿನ ಆದ್ಯತೆ ನೀಡಿ: ಶಂಕರ್

06:33 PM Jun 13, 2021 | Team Udayavani |

ರಾಮನಗರ: ಸಾವಯವ ಆಹಾರ ಸೇವಿಸುವುದು ಆರೋಗ್ಯಕರ ಆಹಾರ ಪದ್ಧತಿ ಎಂದು ತೋಟ ಗಾ ರಿಕೆಮತ್ತು ರೇಷ್ಮೆ ಖಾತೆ ಸಚಿವ ಆರ್‌. ಶಂಕರ್‌ ಹೇಳಿ ದರು.ನಗ ರಕ್ಕೆ ಭೇಟಿ ನೀಡಿದ್ದ ಅವರು ಬಿಳ ಗುಂಬ ಗ್ರಾಮ ದ ಲ್ಲಿ ರುವ ಪ್ರಗತಿ ಪರ ರೈತ ವಾಸು ಅವರ ತೋಟಕ್ಕೆಭೇಟಿ ನೀಡಿದ ವೇಳೆ ಮಾತ ನಾ ಡಿ, ಸಾವಯವ ಬೆಳೆಗೆ ಉತ್ತಮ ಬೆಲೆ ಸಿಗಬೇಕಾದರೆ ಅವುಗಳನ್ನು ಗುರುತಿಸಿ,ಪ್ರಮಾಣಿಕರಿಸಬೇಕಾದ ಅಗ ತ್ಯ ವಿದೆ.

Advertisement

ಗ್ರಾಹ ಕ ರಿಗೆ ಸಾವ ಯವ ಪದ್ಧ ತಿ ಯಲ್ಲಿ ಬೆಳೆದ ಆಹಾರ ಮತ್ತು ರಾಸಾಯ ನಿಕ ಬಳಸಿ ಉತ್ಪಾ ದಿ ಸಿ ರುವ ಆಹಾ ರದ ಬಗ್ಗೆ ಸ್ಪಷ್ಟತೆ ಬೇಕಾ ಗಿದೆ. ಹೀಗಾಗಿ ಸಾವ ಯವ ಆಹಾ ರಕ್ಕೆ ಪ್ರಮಾಣಿ ಕ ರಿ ಸುವ ಅಗ ತ್ಯ ವಿದೆ. ಆದರೆ, ಸಾವಯವ ಬೆಳೆಗಳನ್ನು ಗುರುತಿಸಿ, ಪ್ರಮಾಣಿಕರಿಸಲುಪ್ರಯೋಗಾಲಯದ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ಸಾವಯವ ಬೆಳೆಯನ್ನು ಪ್ರಮಾಣಿಕರಿಸುವವ್ಯವಸ್ಥೆ ಕಲ್ಪಿ ಸಲು ಚಿಂತ ನೆ ಗಳು ನಡೆ ಯು ತ್ತಿವೆ ಎಂದು ಹೇಳಿದರು.

ಮಾರಾಟ ಮಳಿಗೆ ವ್ಯವಸ್ಥೆಗೆ ಮನವಿ: ಪ್ರಗತಿಪರ ರೈತ ವಾಸು ಅವರು ತೋಟದಲ್ಲಿ 22 ವಿವಿಧ ಮಾವಿನತಳಿಯನ್ನು ಬೆಳೆದಿದ್ದು, ಈ ಪೈಕಿ 3 ವಿದೇಶಿ ತಳಿಯನ್ನು ಸಹ ಇವೆ. ತಮ್ಮಲ್ಲಿ ಉತ್ಪಾ ದ ನೆ ಯಾ ಗಿ ರುವ ಬೆಳೆಯನ್ನು ಮಾರಾಟ ಮಾಡಲು ಒಂದು ಮಳಿಗೆ ವ್ಯವಸ್ಥೆ ಮಾಡಿ ಕೊ ಡು ವಂತೆ ರೈತ ವಾಸು ಸಚಿ ವ ರಲ್ಲಿ ಮನವಿಮಾಡಿ ದರು.

ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ವ ಹಿ ಸು ವು ದಾಗಿ ತಿಳಿ ಸಿ ದರು. ತೋಟಗಾರಿಕೆ ಇಲಾಖೆಉಪನಿರ್ದೇಶಕ ಮುನೇಗೌಡ, ರೇಷ್ಮೆ ಇಲಾಖೆ ಉಪನಿರ್ದೇಶಕ ಪುಟ್ಟಸ್ವಾಮಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಸೂರ್ಯನಾರಾಯಣ, ಕೃಷಿ ಮೇಲ್ವಿಚಾರಕ ಕುಮಾರ್‌ ಟಿ.ಆರ್‌,ವಲಯ ಮೇಲ್ವಿಚಾರಕಿ ನಿಷ್ಮಿತ ಶೆಟ್ಟಿ, ಒಕ್ಕೂಟದ ಅಧ್ಯಕ್ಷೆ ಮಮತಾ ರಾಣಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next