Advertisement

ರಾಮನಗರ ನಗರಸಭೆಗೆ ರಾಜ್ಯ ಮಟ್ಟದ ಪ್ರಶಸ್ತಿ

04:52 PM Nov 18, 2019 | Suhan S |

ರಾಮನಗರ: ರಾಮನಗರ ನಗರಸಭೆ ವತಿಯಿಂದ ಸ್ಥಾಪನೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಹಸಿ ಕಸದಿಂದ ವಿದ್ಯುತ್‌ ಉತ್ಪಾದಿಸುವ ಘಟಕಕ್ಕೆ ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿದೆ.

Advertisement

ಕರ್ನಾಟಕ ಸರ್ಕಾರದ ಪೌರಾಡಳಿತ ನಿರ್ದೇಶ ನಾಲಯದಡಿ ಸ್ಥಾಪನೆಯಾಗಿರುವ ಸಿಟಿ ಮ್ಯಾನೇಜರ್ಅ ಸೋಶಿಯಷನ್‌ ಆಫ್ ಕರ್ನಾಟಕ (ಸಿ.ಎಂ.ಎ.ಕೆ) ಪ್ರತಿ ವರ್ಷ ಅತ್ಯುತ್ತಮ ವ್ಯವಸ್ಥೆ ಪ್ರಶಸ್ತಿಯನ್ನು ಕೊಡುತ್ತಿದ್ದು, ರಾಮನಗರ ನಗರಸಭೆ ಸ್ಥಾಪಿಸಿರುವ ಹಸಿ ಕಸದಿಂದ ವಿದ್ಯುತ್‌ ಉತ್ಪಾದನಾ ಘಟಕಕ್ಕೆ

(ಬಯೋಮಿಥನೈಸೇಷನ್‌ ಪ್ಲಾಂಟ್‌ ಫಾರ್‌ ಎಲೆಕ್ಟ್ರಿಸಿಟಿ ಜನರೇಷನ್‌) ರಾಜ್ಯ ಮಟ್ಟದ ತೃತೀಯ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಿದೆ. ಪ್ರಶಸ್ತಿ ಪತ್ರದ ಜೊತೆಗೆ 50 ಸಾವಿರ ರೂ ನಗದುಹಣ ಕೂಡ ಲಭಿಸಿದ್ದು, ಈ ಘಟಕವನ್ನು 2017-18ನೇ ಸಾಲಿನ ಅತ್ಯುತ್ತಮ ವ್ಯವಸ್ಥೆ ಎಂದು ದಾಖಲಿಸಿಕೊಳ್ಳಲಾಗಿದೆ ಎಂದು ಸಿ.ಎಂ.ಎ.ಕೆ ನೀಡಿರುವ ಪ್ರಶಸ್ತಿ ಪತ್ರದಲ್ಲಿ ತಿಳಿಸಲಾಗಿದೆ.

ನಗರದಲ್ಲಿ ಉತ್ಪತ್ತಿಯಾಗುವ ಟನ್‌ ಗಟ್ಟಲೆ ತ್ಯಾಜ್ಯದ ನಿರ್ವಹಣೆಗೆ ಸ್ಥಳೀಯ ನಗರಸಭೆ ಕೆಲ ವರ್ಷಗಳ ಹಿಂದೆಯೇ ಈ ಘಟಕವನ್ನು ಆರಂಭಿಸಿತ್ತು. ಹಸಿ ತ್ಯಾಜ್ಯವನ್ನು ನಾಗರಿಕರು ಬೇರ್ಪಡಿಸಿಕೊಡದಿದ್ದರೂ, ನಗರಸಭೆಯ ಸಿಬ್ಬಂದಿಯೇ ಹಸಿ ಕಸವನ್ನು ಬೇರ್ಪಡಿಸಿ ಬಯೋಮಿಥನೈಸೇಷನ್‌ ಪ್ಲಾಂಟ್‌ ಪಾರ್‌ ಎಲೆಕ್ಟ್ರಿಸಿಟಿ ಜನರೇಷನ್‌ ಘಟಕಕ್ಕೆ ಸುರಿಯುತ್ತಾರೆ. ಹಸಿ ಕಸದ ಮೂಲಕ ವಿದ್ಯುತ್‌ ಉತ್ಪಾದಿಸಿ ಸ್ಥಳೀಯವಾಗಿ ಬೀದಿ ದೀಪಗಳನ್ನು ಬೆಳಗಿಸಲು ಉಪ ಯೋಗಿಸಲಾಗುತ್ತಿದೆ.

ಕಸ ನಿರ್ವಹಣೆ ತೀರಾ ಕಷ್ಟದ ಕೆಲಸ. ಅಧುನಿಕ ತಂತ್ರಜ್ಞಾನ ಬಳಸಿಕೊಂಡು ಕಸ ನಿರ್ವಹಣೆಮಾಡುವುದು ಸಹ ಸವಾಲಿನ ಕೆಲಸ. ನಗರಸಭೆಯ ಅಧಿಕಾರಿಗಳು ಹಸಿ ಕಸವನ್ನೇ ಬಳಸಿಕೊಂಡು ವಿದ್ಯುತ್‌ ಉತ್ಪಾದಿಸಿ ಅದನ್ನು ಸಾರ್ವಜನಿಕರಿಗೆ ಸಮರ್ಪಿಸುವ ನಿಟ್ಟಿನಲ್ಲಿ ಹಲವಾರು ವರ್ಷಗಳಿಂದ ರೂಢಿಸಿಕೊಂಡು ಬಂದಿದ್ದಾರೆ. ಇದೀಗ ಈ ಕಾರ್ಯಕ್ಕೆ ಪ್ರಶಸ್ತಿ ಸಿಕ್ಕಿ ರುವುದು ಅಧಿಕಾರಿಗಳಲ್ಲಿ ಸಂತಸ ತಂದಿದೆ. ಸಾರ್ವಜನಿಕರು ತ್ಯಾಜ್ಯ ನಿರ್ವಹಣೆಯಲ್ಲಿ ನಗರಸಭೆಯೊಡನೆ ಸಹಕರಿಸಬೇಕಾಗಿದೆ.

Advertisement

ಹಸಿ ಕಸವನ್ನು ಬೇರ್ಪಡಿಸಿಕೊಟ್ಟರೆ ಇಂತಹ ಇನ್ನಷ್ಟು ಘಟಕಗಳನ್ನು ಆಯಾ ವಾರ್ಡುಗಳಲ್ಲೇ ಸ್ಥಾಪಿಸಿ ವಿದ್ಯುತ್‌ ಉತ್ಪಾದಿಸಿ ಬೀದಿ ದೀಪಗಳಿಗೆ ಉಪಯೋಗಿಸಬಹುದು. ಬಯೋ ಮಿಥನೈಸೇಷನ್‌ ಘಟಕದಿಂದ ಪರಿಸರಕ್ಕೆ ಧಕ್ಕೆಯಾಗುವುದಿಲ್ಲ. ಯಾವುದೇ ವಾಸನೆ ಬರುವುದಿಲ್ಲ. ದ್ಯಾವರಸೇಗೌಡನ ದೊಡ್ಡಿ ರಸ್ತೆಯಲ್ಲಿ ಸ್ಥಾಪಿಸಲಾಗಿರುವ ಈ ಘಟಕವನ್ನು ಸಾರ್ವಜನಿಕರು ನೋಡಿ ನಗರಸಭೆಯೊಂದಿಗೆ ಸಹಕರಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next