Advertisement

ಸಮಗ್ರ ಕೃಷಿ ಪದ್ಧತಿಯಿಂದ ರೈತರ ಜೀವನ ಸುಧಾರಣೆ

06:17 PM Nov 14, 2019 | Naveen |

ರಾಮನಗರ: ರೈತರು ಕೃಷಿ ಜೊತೆಗೆ ಹೈನುಗಾರಿಕೆ, ಜೇನು ಸಾಕಾಣಿಕೆ, ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡು ಜೀವನ ಮಟ್ಟವನ್ನು ಸುಧಾರಿಸಿಕೊಳ್ಳುವಂತೆ ವಿಧಾನ ಪರಿಷತ್‌ ಸದಸ್ಯ ಅ.ದೇವೇಗೌಡ ಸಲಹೆ ನೀಡಿದರು. ನಗರದ ಜಿಲ್ಲಾ ಪಂಚಾಯ್ತಿ ಭವನದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ತೋಟಗಾರಿಕೆ ಇಲಾಖೆ ಹಮ್ಮಿಕೊಂಡಿದ್ದ ಜೇನು ಮೇಳ ಉದ್ಘಾಟಿಸಿ ಮಾತನಾಡಿದರು.

Advertisement

ಕೃಷಿಯಲ್ಲಿ ವಿಶ್ವಾಸವಿಟ್ಟು ನಿಷ್ಠೆಯಿಂದ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳುಬೇಕು. ಇವರಿಗೆ ತೋಟಗಾರಿಕೆ, ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಅಗತ್ಯ ಮಾಹಿತಿ ಕೊಡಬೇಕು. ವಿಶೇಷವಾಗಿ ಹೊಸ ತಂತ್ರಜ್ಞಾನದ ಬಗ್ಗೆ ತಿಳುವಳಿಕೆ ಕೊಡುವಂತೆ ಅಧಿಕಾರಿಗಳಿಗೆ ತಾಖೀತು ಮಾಡಿದರು.

ಗಿಡಗಳಲ್ಲಿ ಜೇನು ಹುಳುಗಳು ಪರಾಗಸ್ಪರ್ಶ ಕ್ರಿಯೆಗೆ ಸಹಕರಿಸುವುದರಿಂದ ತಮ್ಮ ಬೆಳೆಯ ಇಳುವರಿಯನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಿದೆ ಎಂದರು.

ಜೇನು ಮೇಳಕ್ಕೆ ತಾಪಂ ಅಧ್ಯಕ್ಷರ ಶ್ಲಾಘನೆ: ರಾಮನಗರ ತಾಪಂ ಅಧ್ಯಕ್ಷ ಗಾಣಕಲ್‌ ನಟರಾಜು ಮಾತನಾಡಿ, ಜಿಲ್ಲೆ ಹೈನುಗಾರಿಕೆ ಹಾಗೂ ರೇಷ್ಮೆ ಕೃಷಿಗೆ ಹೆಸರು ವಾಸಿಯಾಗಿದ್ದು, ಜೇನು ಸಾಕಾಣಿಕೆ ಬಗ್ಗೆ ಜಿಲ್ಲೆಯ ರೈತರಿಗೆ ಅರಿವು ಮೂಡಿ ಸುತ್ತಿರುವುದು ಶ್ಲಾಘನೀಯ ಎಂದರು.

ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ಕೊಟ್ಟು ಕಾರ್ಯಕ್ರಮ ಆಯೋಜಿಸಿ ಅವರನ್ನು ಉತ್ತೇಜಿಸಬೇಕು ಎಂದರು. ಜೇನು ಸಾಕಾಣಿಕೆಯ ಬಗ್ಗೆ ವಿಶೇಷವಾಗಿ ರೈತ ಮಹಿಳೆಯರಿಗೆ ತರಬೇತಿಯ ಅವಶ್ಯಕತೆ ಇದೆ. ಮಹಿಳಾ ಸಂಘಗಳ ಮೂಲಕ ಈ ಕಾರ್ಯಕ್ರಮ ಹಮ್ಮಿಕೊಳ್ಳಬಹುದು ಎಂದು ಸಲಹೆ ನೀಡಿದರು.

Advertisement

ಹಾರೋಹಳ್ಳಿ ಹಾಗೂ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಕೈಗಾರಿಕಾ ಮಾಲೀಕರೊಂದಿಕೆ ಚರ್ಚಿಸಿ ಸಿ.ಎಸ್‌.ಆರ್‌ ಫ‌ಂಡ್‌ನ‌ಡಿ ರೈತರಿಗೆ ಉಚಿತವಾಗಿ ಜೇನು ಸಾಕಾಣಿಕೆ ಪೆಟ್ಟಿಗೆಗಳನ್ನು ನೀಡಿ ಪೋತ್ಸಾಸುವಂತೆ ಸಲಹೆ ನೀಡಿದರು.

ಕೀಟಗಳು ನಾಶವಾದರೆ, ಮನುಕುಲವೂ ನಾಶ: ಬೆಂಗಳೂರು ಜೇನು ಕೃಷಿಯ ತಾಂತ್ರಿಕ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದ ಜಿ. ಕೆ.ವಿ.ಕೆ ಕೃಷಿ ವಿಶ್ವದ್ಯಾಲಯದ ಉಪ ಕುಲಪತಿ ಡಾ.ಎಸ್‌.ರಾಜೇಂದ್ರ ಪ್ರಸಾದ್‌ ಅವರು, ಬೆಂಗಳೂರು ಜಿ.ಕೆ.ವಿ.ಕೆ ಕೃಷಿವಿಶ್ವದ್ಯಾನಿಲಯದಲ್ಲಿ ಜೇನು ಸಾಕಾಣಿಕೆಗೆ ಪ್ರತ್ಯೇಕ ವಿಭಾಗವಿದೆ. ಪಾರಾಗಸ್ಪರ್ಶ ಪ್ರಕ್ರಿಯಲ್ಲಿ ಪಾಲ್ಗೊಳ್ಳುವ ಜೇನು ಸಾಕಾಣಿಕೆಯಿಂದ ರೈತರು ತಮ್ಮ ಬೆಳೆಯಲ್ಲಿ ಶೇ. 30 ರಷ್ಟು ಇಳುವರಿ ಹೆಚ್ಚಿಸಿಕೊಳ್ಳಬಹುದು. ಪಾರಾಗ ಸ್ಪರ್ಶದಲ್ಲಿ ಪಾಲ್ಗೊಳ್ಳುವ ಕೀಟಗಳು ನಾಶವಾದರೆ, ಆಹಾರ ಉತ್ಪಾದನೆಯು ನಾಶವಾಗಿ ಮನುಕುಲವೂ ನಾಶವಾಗುತ್ತದೆ ಎಂದರು.

ರೈತರು ಜೇನು ಸಾಕಾಣಿಕೆ ಪೆಟ್ಟಿಗೆಯನ್ನು ಕೃಷಿ ಸಲಕರಣೆ ಎಂದು ಭಾವಿಸಿ ಕೃಷಿ ಮಾಡುವ ಜಮೀನಿನಲ್ಲಿ ಇಡುವುದು ಉತ್ತಮ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕೃಷಿ ಮೇಳದಲ್ಲಿ ಜೇನು ಸಾಕಾಣಿಕೆಯ ಮಾಹಿತಿ ಪಡೆದ 3000-4000 ರೈತರು ಜೇನು ಸಾಕಾಣಿಕೆ ತರಬೇತಿ ನೀಡುವಂತೆ ಹೆಸರು ನೊಂದಾಯಿಸಿಕೊಂಡಿದ್ದಾರೆ. ಇದು ಜೇನು ಸಾಕಾಣಿಕೆಯ ಬೇಡಿಕೆ ಹಾಗೂ ಮಹತ್ವವನ್ನು ತಿಳಿಸುತ್ತದೆ ಎಂದರು.

ಜೇನು ತುಪ್ಪದಲ್ಲಿ ಔಷಧಿ ಗುಣ: ಜೇನು ಔಷಧಿ ಗುಣಗಳನ್ನು ಹೊಂದಿದ್ದು, ಒಬ್ಬ ಮನುಷ್ಯನಿಗೆ ಒಂದು ವರ್ಷದಲ್ಲಿ 70 ಗ್ರಾಂ ನಷ್ಟು ಜೇನು ತುಪ್ಪದ ಅವಶ್ಯಕತೆ ಇದೆ. ಜೇನನ್ನು ಔಷಧಿಯಾಗಿ ಮಾತ್ರವಲ್ಲದೆ, ಸೌಂದರ್ಯ ವರ್ಧಕವಾಗಿ ಹಾಗೂ ಮೇಣವನ್ನು ಮೇಣದ ಬತ್ತಿ ತಯಾರಿಕೆಯಲ್ಲೂ ಬಳಸುತ್ತಾರೆ. ನಮ್ಮ ರಾಜ್ಯದ ಜೇನು ತುಪ್ಪಕ್ಕೆ ಉತ್ತಮ ಬೇಡಿಕೆ ಇದೆ. ಕೃಷಿ ವಿಜ್ಞಾನ ಕೇಂದ್ರ ದಿಂದ ಜೇನು ಸಾಕಾಣಿಕೆ ತರಬೇತಿ ಪಡೆದವರು ಉದ್ದಿಮೆ ಮಾಡಿ ಬಹಳಷ್ಟು ಜನರಿಗೆ ಉದ್ಯೋಗ ನೀಡುತ್ತಿದ್ದಾರೆ ಎಂದರು.

ಬೆಂಗಳೂರು ಕೃಷಿ ವಿಶ್ವ ದ್ಯಾನಿಲಯದ ಜೇನು ಕೃಷಿ ವಿಭಾಗದ ಮುಖ್ಯಸ್ಥ ಡಾ. ಕೆ.ಎಸ್‌.ಜಗದೀಶ್‌, ಬೆಂಗಳೂರು ಲಾಲ್‌ ಬಾಗ್‌ ಜೇನು ಕೃಷಿ ವಿಭಾಗದ ಸಹಾಯಕ ತೋಟಗಾರಿಕೆ ನಿರ್ದೇಶಕ ಡಾ. ಹೇಮಾ ಅವರು ಜೇನು ಕೃಷಿ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷ ಎಚ್‌.ಬಸಪ್ಪ, ತೋಟ ಗಾರಿಕೆ ಜಂಟಿ ನಿರ್ದೇಶಕ ಡಾ.ಜಗದೀಶ್‌, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇ ಶಕ ಜೆ.ಗುಣವಂತ್‌, ರೈತ ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next