Advertisement

Ramanagara: ಗಾಂಜಾ ಮಾರುತ್ತಿದ್ದ 7 ಆರೋಪಿಗಳ ಬಂಧನ, 3 ಲಕ್ಷ ಮೌಲ್ಯದ ಸೊತ್ತು ವಶ

02:33 PM Jul 12, 2023 | Team Udayavani |

ರಾಮನಗರ: ರಾಮನಗರ ಎಸ್‌ಪಿ ಕಾರ್ತಿಕ್ ರೆಡ್ಡಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಏಳು ಮಂದಿಯನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರ ತಂಡ ಯಶಸ್ವಿಯಾಗಿದೆ.

Advertisement

ಮಧುಕುಮಾರ್ ಎಂ (25), ಲಕ್ಷ್ಮೀಕಾಂತ (23), ಶರಶ್‌ಗೌಡ ಜಿ. (20)  ವಿಜಯ್ (26),  ಗುಣಶೇಖರ್ (25), ಪವನ್ ಕುಮಾರ್.ಜೆ (24), ತಂಗರಾಜು ಪಿ (31) ಬಂಧಿತ ಆರೋಪಿಗಳು.

ಕಳೆದ ಕೆಲ ತಿಂಗಳಿನಿಂದ ಜಿಲ್ಲೆಯಲ್ಲಿ ಗಾಂಜಾ ಪ್ರಕರಣಗಳು ಅವ್ಯಾಹತವಾಗಿ ನಡೆಯುತ್ತಿದ್ದು ಈ ಘಟನೆ ಹಿನ್ನೆಲೆಯಲ್ಲಿ ತಾವರೆಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ರಾಮನಗರ ಎಸ್‌ಪಿ ಕಾರ್ತಿಕ್ ರೆಡ್ಡಿ ನೇತೃತ್ವದಲ್ಲಿ ಕಾರ್ಯಾಚರಣೆಗೆ ಇಳಿದಿದೆ ಈ ವೇಳೆ ಗಾಂಜಾ ಮಾರಾಟ ಮಾಡುತ್ತಿದ್ದ ಏಳು ಮಂದಿಯನ್ನು ಬಂಧಿಸಿದ್ದು ಅವರಿಂದ ಸುಮಾರು 3 ಲಕ್ಷ ಬೆಲೆಯ 6.40 ಕೆಜಿ ಗಾಂಜಾ ಸೊಪ್ಪು. 2 ಬೈಕ್, 7 ಮೊಬೈಲ್, 5000 ನಗದು, ತೂಕದ ಯಂತ್ರವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: Maharashtra: ಐಷಾರಾಮಿ ಬಸ್- ಟ್ರಕ್‌ ನಡುವೆ ಅಪಘಾತ; ಕನಿಷ್ಠ 22 ಪ್ರಯಾಣಿಕರಿಗೆ ಗಾಯ

Advertisement

Udayavani is now on Telegram. Click here to join our channel and stay updated with the latest news.

Next