Advertisement
ಬೀದಿಬದಿಯ ಕಸವನ್ನೇ ಸಮ ರ್ಪಕವಾಗಿ ನಿರ್ವಹಣೆ ಮಾಡದಿದ್ರೂ, ಘನತ್ಯಾಜ್ಯ ಸುಂಕ ವಸೂಲಿಯಲ್ಲಿ ಮುಂದಿದ್ದ ನಗರಸಭೆ ಅಧಿಕಾರಿಗಳಿಗೆ ಮತ್ತು ಆಡಳಿತ ಮಂಡಳಿಗೆ ಖಾಲಿ ನಿವೇಶನಕ್ಕೂ ಘನತ್ಯಾಜ್ಯ ನಿರ್ವಹಣೆಯ ಸುಂಕ ವಿಧಿಸಿರುವ ಕಿರೀಟ ಸಿಕ್ಕಂತಾಗಿದೆ.
Related Articles
Advertisement
ಬೀದಿಬದಿ ಹೆದ್ದಾರಿಗಳಲ್ಲಿ ಕಸದ ರಾಶಿ ಬಿದ್ದು ನಾರುತ್ತಿದೆ. ಮನೆಗಳಿಂದ ಕಲೆ ಹಾಕುತ್ತಿರುವ ಸುಂಕ ಅದರ ತೆರವಿಗೆ ಸಾಕಾಗುತ್ತಿಲ್ಲವೆ. ಮತ್ತೇ ಏಕೆ ಏರಿಸುತ್ತಾರೆ ಎನ್ನುವ ಪ್ರಶ್ನೆಯೊಂದಿಗೆ ಈ ವರ್ಷದಿಂದ ಖಾಲಿ ನಿವೇಶನದ ತ್ಯಾಜ್ಯ ವಿಲೇವಾರಿ ವೆಚ್ಚ ವಿಧಿಸಿದ್ದಾರೆ. ಅದೂ ಖಾಲಿ ನಿವೇಶನದ ತೆರಿಗೆಗಿಂತ ಕಸ ವಿಲೇವಾರಿ ತೆರಿಗೆಯೇ ಹೆಚ್ಚಿದೆ ಎಂದು ತಮ್ಮ ಅಳಲು ತೋಡಿಕೊಳ್ಳುತ್ತಾರೆ.
ಏಕಾಏಕಿ ನಿರ್ಧಾರ: ದಿನೇ ದಿನೆ ಹೆಚ್ಚಿಸುತ್ತಿರುವ ಸುಂಕಗಳು ನಗರದಲ್ಲಿ ಒಂದು ನಿವೇಶನ ಸೂರು ಹೊಂದಬೇಕೆನ್ನುವುದು ಬಡವರ ಆಸೆಯಾಗಿತ್ತು. ಆದರೆ, ನಗರಸಭೆಯಲ್ಲಿ ಸುಂಕ ಏರಿಕೆ ಮತ್ತು ಕಸವಿಲೇವಾರಿಗೆ ಸುಂಕ ಹಾಕುತ್ತಿರುವುದು ಎಲ್ಲವನ್ನೂ ನೋಡಿದರೆ ಗ್ರಾಮೀಣ ಭಾಗದಲ್ಲಿ ವಾಸಿಸುವುದೇ ವಾಸಿ ಎನ್ನುವಂತಾಗಿದೆ. ಅಲ್ಲದೆ, ಯಾವುದೇ ಪ್ರಕಟಣೆ ಮತ್ತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಮಾಡದೆ ಏಕಾಏಕಿ ನಿರ್ಧಾರ ತೆಗೆದುಕೊಂಡಿರುವುದು ಹಿಟ್ಲರ್ ಸಂಸ್ಕೃತಿ ನೆನಪಿಸುವಂತಾಗಿದೆ.
ಪ್ರತಿವರ್ಷ ತೆರಿಗೆ ಹೆಚ್ಚಳ : ಒಮ್ಮೆ ತೆರಿಗೆ ಹೆಚ್ಚಳವಾದ್ರೆ ಮೂರು ವರ್ಷಗಳ ಕಾಲ ತೆರಿಗೆ ಹೆಚ್ಚಿಸುವಂತಿಲ್ಲ ಎಂಬ ನಿಯಮವಿದೆ. ಅಲ್ಲದೆ, ಯಾವುದೇ ತೆರಿಗೆ ಅಥವಾ ಸಾರ್ವಜನಿಕರ ಮೇಲೆ ಸುಂಕ ವಿಧಿಸುವುದಿದ್ದರೆ ಪೂರ್ವಭಾವಿಯಾಗಿ ಸಾರ್ವ ಜನಿಕರಿಗೆ ಪ್ರಕಟಣೆ ಹೊರಡಿಸಿ ಅಭಿಪ್ರಾಯ ಸಂಗ್ರ ಹಿಸಿ ಜಾರಿಗೆ ತರಬೇಕು. ಸಾಧಕ-ಬಾಧಕಗಳ ಬಗ್ಗೆ ನಗರಸಭೆಯ ಸದಸ್ಯರ ಸಭೆಯಲ್ಲಿಯೂ ಕೂಡ ಚರ್ಚಿಸಬೇಕು. ಆದರೆ, ರಾಮನಗರ ನಗರಸಭೆಗೆ ಪಾಪ ಕರ್ನಾಟಕ ಮುನಿಸಿಪಲ್ ಕಾಯ್ದೆ 1964ರ ಉಪನಿಯಮಗಳ ಕಾಯ್ದೆಯಡಿ ಸಾರ್ವಜನಿಕ ಮೂಲಭೂತ ಸೌಲಭ್ಯಕ್ಕಾಗಿ ತೆರಿಗೆ ವಿಧಿಸುವುದಕ್ಕೆ ಪಾಲನೆ ಅನ್ವಯವಾಗುವುದಿಲ್ಲ ಎನ್ನುವಂತಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಕಳೆದ ಮೂರು ವರ್ಷ ಗಳಲ್ಲಿ ಮೂರು ಬಾರಿ ಅಂದರೆ ಪ್ರತಿವರ್ಷ ಹೆಚ್ಚಳ ಮಾಡುವ ಮೂಲಕ ಗಾಯದ ಮೇಲೆ ಬರೆ ಎಳೆದಿದ್ದಾರೆ.
ಕಳೆದ 2005ರಿಂದಲೂ ನಗರಸಭೆಯಲ್ಲಿ ಕರ ಹೆಚ್ಚಳ ಮಾಡಿರಲಿಲ್ಲ. ಸಬ್ ರಿಜಿಸ್ಟ್ರಾರ್ ಪ್ರಕಾರ ಲೆಕ್ಕಾಚಾರ ಮಾಡಿ ಫಿಕ್ಸ್ ಮಾಡಲಾಗಿತ್ತು. ಅದರಂತೆ ಪ್ರತಿ ಮೂರು ವರ್ಷಕ್ಕೊಮ್ಮೆ ಹೆಚ್ಚಳ ಮಾಡಬೇಕಿತ್ತು. ಆದರೆ, ಈವರೆಗೂ ಮಾಡಿರಲಿಲ್ಲ. 2021-22 ಅಂದರೆ ಕಳೆದ ವರ್ಷ ಸರ್ಕಾರದ ನಿಯಮಾವಳಿಯಂತೆ ಶೇ. 33ರಷ್ಟು ಹೆಚ್ಚಳ ಮಾಡಲಾಗಿತ್ತು. ಈ ಬಾರಿ ನಗರಸಭೆಯ ನಿಯಮಾವಳಿಯಂತೆ ಹೆಚ್ಚಿಸಿದ್ದೇವೆ.
ಘನತ್ಯಾಜ್ಯ ವಿಲೇವಾರಿ ಶುಲ್ಕ ಖಾಲಿ ನಿವೇಶನಕ್ಕೂ ವಿಧಿಸಲು ನಿವೇಶನ ಆಕಾರ ಅಳತೆ ಮೇಲೆ ಸರ್ಕಾರವೇ ನಿಗದಿ ಮಾಡಿ ಆದೇಶ ಹೊರಡಿಸಿದೆ. – ನಂಜುಂಡಸ್ವಾಮಿ, ಪ್ರಭಾರ ಕಂದಾಯ ಅಧಿಕಾರಿ
ಅದೇನೇ ಆದ್ರೂ ಸರ್ಕಾರದ ಹೆಸರಲ್ಲಿ ಒಮ್ಮೆ ಹೆಚ್ಚಿಸಿದ್ದಾಯ್ತು. ಇದೀಗ ನಗರಸಭೆ ಹೆಸರಲ್ಲಿ ಜನತೆಯ ಸುಲಿಗೆಗೆ ನಿಂತಿದ್ದಾರೆ. ಪದೇ ಪದೆ ತೆರಿಗೆ ಹೆಚ್ಚಳ ಸಂಕಷ್ಟಕ್ಕೆ ದೂಡಿದೆ. ಇದು ಕೊರೊನಾ ಬಿಕ್ಕಟ್ಟಿನ ನಡುವೆ ಗಾಯದ ಮೇಲೆ ಬರೆ ಎಳೆದಂತಾಗಿದೆ. – ರಮೇಶ್, ಸ್ಥಳೀಯರು