Advertisement

ರಾಮನಗರದಲ್ಲಿ ಅನಿತಾಗೆ ಭರ್ಜರಿ ಜಯ

06:15 AM Nov 08, 2018 | Team Udayavani |

ರಾಮನಗರ: ರಾಮನಗರ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆ ಸೇರಿದಂತೆ ಕೆಲವು ಪ್ರಥಮಗಳಿಗೆ ಕಾರಣವಾಗಿ, ಪತಿಯ ಮತ ಗಳಿಕೆಯ ದಾಖಲೆಗಳನ್ನು  ಮುರಿದು ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಉಪಚುನಾವಣೆಯಲ್ಲಿ  1,25,043 ಮತ ಗಳಿಸಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

Advertisement

ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ 1,25,043 ಮತ ಪಡೆದು ತಮ್ಮ  ಸಮೀಪ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ವಿರುದ್ದ  1,09,137 ಮತಗಳ ಅಂತರದಿಂದ ಜಯಬೇರಿ ಭಾರಿಸಿದ್ದಾರೆ.

ಯಾರಿಗೆ ಎಷ್ಟು ಮತ? : ಕ್ಷೇತ್ರದಲ್ಲಿ 2,06,306 ಮತದಾರರ ಪೈಕಿ 1,48,168 ಮತದಾರರು ತಮ್ಮ ಮತಹಕ್ಕು ಚಲಾಯಿಸಿದ್ದರು. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಅನಿತಾ 1,25,043 ಮತಗಳು, ಬಿಜೆಪಿ ಅಭ್ಯರ್ಥಿ  ಎಲ್‌.ಚಂದ್ರಶೇಖರ್‌ (ನಿವೃತ್ತಿ) 15,906, ಪೂರ್ವಾಂಚಲ ಮಹಾ ಪಂಚಯತ್‌ ಪಾರ್ಟಿಯ ಅಭ್ಯರ್ಥಿ ಎಚ್‌.ಡಿ.ರೇವಣ್ಣ 2,231, ಪಕ್ಷೇತರ ಅಭ್ಯರ್ಥಿಗಳಾದ ಕುಮಾರನಾಯ್ಕ 520, ಡಿ.ಎಂ.ಮಾದೇಗೌಡ 536,  ಮುನಿಯಾ ಭೋವಿ 478, ಸುರೇಂದ್ರ ಬಿ.ಪಿ. 545 ಮತಗಳನ್ನು ಪಡೆದಿದ್ದಾರೆ. ನೋಟಾಕ್ಕೆ 2909 ಮತಗಳು ಲಭ್ಯವಾಗಿದೆ.

ನೋಟಾಕ್ಕೆ ಹೆಚ್ಚು ಮತ:: ಮೊದಲನೇ ಸುತ್ತಿನಿಂದಲೂ ಅನಿತಾ ಮುನ್ನಡೆ ಕಾಯ್ದುಕೊಂಡು ಬಂದರು. ಬಿಜೆಪಿ ಅಭ್ಯರ್ಥಿ ಎಲ್‌.ಚಂದ್ರಶೇಖರ್‌ ಕಣದಿಂದ ನಿವೃತ್ತಿಯಾಗಿದ್ದರೂ ಸಹ ಕಮಲದ ಗುರುತಿಗೆ ಮತ ಕೊಡುವಂತೆ ಕೊನೆ ಕ್ಷಣದವರೆಗೂ ಬಿಜೆಪಿ ಕಾರ್ಯಕರ್ತರು ಮತದಾರರಿಗೆ ಮನವಿ ಮಾಡಿಕೊಳ್ಳುತ್ತಿದ್ದರು.

ಅಭ್ಯರ್ಥಿಯ ನಿವೃತ್ತಿಯ ನಂತರವೂ ಬಿಜೆಪಿಗೆ 15906 ಮತಗಳು ಲಭಿಸಿರುವುದು ಸಹಜವಾಗಿಯೆ ಮೈತ್ರಿ ಪಾಳಯದಲ್ಲಿ ಅಚ್ಚರಿಗೆ ಕಾರಣವಾಗಿದೆ. ಕ್ಷೇತ್ರದಲ್ಲಿ ಎಂದೂ ಕಂಡರಿಯದ ರಾಜಕೀಯ ಬೆಳವಣಿಗೆಗಳಿಂದ ಬೇಸತ್ತತ್ತ 2909 ಮತದಾರರು ನೋಟಾಕ್ಕೆ ಮೊರೆ ಹೋಗಿದ್ದಾರೆ. ರಾಮನಗರ ಚುನಾವಣಾ ಇತಿಹಾಸದಲ್ಲೇ ಇಷ್ಟೋಂದು ಮತಗಳು ನೋಟಾಕ್ಕೆ ಎಂದೂ ಬಿದ್ದಿರಲಿಲ್ಲ.

Advertisement

ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ನೀಡುವ ಮೂಲಕ ಸಮ್ಮಿಶ್ರ ಸರ್ಕಾರಕ್ಕೆ ಜನರು ಆಶೀರ್ವಾದ ಮಾಡಿದ್ದಾರೆ. ಲೋಕಸಭೆಗೂ ಸೀಟು ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ 28 ಕ್ಷೇತ್ರಗಳನ್ನು ಗೆಲ್ಲಲು ಶ್ರಮಿಸುತ್ತೇವೆ.
– ಎಚ್‌.ಡಿ.ಕುಮಾರಸ್ವಾಮಿ,ಸಿಎಂ

ಅನಿತಾ ಕುಮಾರಸ್ವಾಮಿ ಅವರನ್ನು ಹಂಗಾಮಿ ಸ್ಪೀಕರ್‌ ಬಸವರಾಜ ಹೊರಟ್ಟಿ ಅಭಿನಂದಿಸಿದರು. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next