Advertisement

Ramanagara: ನಡು ರಸ್ತೆಯಲ್ಲೇ ವೀಲಿಂಗ್- ಬೈಕ್ ಸಮೇತ ಯುವಕ ಪೊಲೀಸ್ ವಶಕ್ಕೆ

09:16 PM Jul 11, 2023 | Team Udayavani |

ರಾಮನಗರ: ರಾಮನಗರದಲ್ಲಿ ಬೈಕ್ ವೀಲಿಂಗ್ ಯುವಕರ ಪುಂಡಾಟ ಹೆಚ್ಚಾಗಿದೆ. ರಾಮನಗರ ತಾಲೂಕಿನ ಬಿಡದಿಯ ಹಾಯೋಹಳ್ಳಿ ರಸ್ತೆಯಲ್ಲಿ 21 ವರ್ಷದ ರವಿ ಎಂಬಾತ ಬೈಕ್ ವೀಲಿಂಗ್ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ. ಮೊನ್ನೆಯಷ್ಟೇ ದಶಪಥ ಹೆದ್ದಾರಿಯ ಪ್ಲೈ ಓವರ್ ಮೇಲೆ ಪುಂಡರು ಬೈಕ್ ವೀಲಿಂಗ್ ಮಾಡಿದ್ದು ವರದಿಯಾಗಿತ್ತು. ಪದೇ ಪದೆ ಬೈಕ್ ವೀಲಿಂಗ್ ಮಾಡಿ‌ ಭೂಪರು ತೊಂದರೆ ನೀಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ಧಾರೆ.

Advertisement

ಬಿಡದಿಯ ಹಾಯೋಹಳ್ಳಿ ರಸ್ತೆಯಲ್ಲಿ ಯುವಕರು ವೀಲಿಂಗ್ ಮಾಡಿದ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ವಿಡಿಯೋವನ್ನು ಆಧರಿಸಿ ಪೊಲೀಸರು ರವಿಯನ್ನು ಬಂಧಿಸಿ ಮೋಟಾರ್ ವೆಹಿಕಲ್ ಆಕ್ಟ್ ಅಡಿ ಬಿಡದಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ತಾನು ಕೆಲಸ ಮಾಡಿದ್ದ ಕಂಪೆನಿಯ MD, CEO ರನ್ನೇ ಇರಿದು ಕೊಂದ ಮಾಜಿ ಉದ್ಯೋಗಿ

Advertisement

Udayavani is now on Telegram. Click here to join our channel and stay updated with the latest news.

Next