ರಾಮನಗರ: ಜಿಲ್ಲೆಯಲ್ಲಿ ಬುಧವಾರ ಒಂದೇ ದಿನ 12ಕ್ಕೂ ಅಧಿಕ ಸೋಂಕಿತರು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 37ಕ್ಕೆ ಏರಿದೆ. ಅಲ್ಲದೆ ಕನಕಪುರ ತಾಲೂಕಿನಲ್ಲಿ 90 ವರ್ಷದ ಸೋಂಕಿತ ಬಟ್ಟೆ ಅಂಗಡಿ ಮಾಲಿಕ ಸಾವಿಗೀಡಾಗಿದ್ದಾರೆ. ಆದರೆ ಈ ಸಾವು ಜಿಲ್ಲೆಯ 2ನೇ ಸಾವು ಎಂದು ಜಿಲ್ಲಾಡಳಿತ ದೃಢಪಡಿಸಿಲ್ಲ.
ಚನ್ನಪಟ್ಟಣದಲ್ಲಿ 10 ಮಂದಿಗೆ ಸೋಂಕು: ಚನ್ನಪಟ್ಟಣ ತಾಲೂಕಿನ ಶ್ಯಾನುಭೋಗನಹಳ್ಳಿ 7 ಮಂದಿಗೆ ಹಾಗೂ ದೇವರಹೊಸಹಳ್ಳಿ 3 ಮಂದಿಗೆ ಪಾಸಿಟಿವ್ ವರದಿ ಬಂದಿದೆ. ಶ್ಯಾನು ಭೋಗನಹಳ್ಳಿಯ ಪಿ.6137, ಪಿ.6138, ಪಿ-6139 ಸೋಂಕಿತರಿಗೆ ಅವರು ಪ್ರಾಥಮಿಕ ಸೋಂಕಿತರು.
20ರಿಂದ 36 ವರ್ಷದ 6 ಪುರುಷ ರು ಮತ್ತು 72 ವರ್ಷದ ಮಹಿಳೆಗೆ ಸೋಂಕಿತರಾಗಿದ್ದಾರೆ. ದೇವರಹೋಸಹಳ್ಳಿಯಲ್ಲಿ ಪಿ-6850 ಸೋಂಕಿತ ವ್ಯಕ್ತಿಗೆ ಪ್ರಾಥಮಿಕ ಸಂಪರ್ಕಿತ 11ರ ಬಾಲಕ ಮತ್ತು 21ರ ಯುವಕ ಹಾಗೂ 50 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಬೊಂಬೆನಾಡು ಚನ್ನಪಟ್ಟಣದಲ್ಲಿ ಸೋಂಕಿತರ ಸಂಖ್ಯೆ 19ಕ್ಕೇರಿದ್ದು ಆತಂಕ ಸೃಷ್ಟಿಸಿದೆ. ಮಾಗಡಿ ತಾಲೂಕಿನಲ್ಲಿ 15 ವರ್ಷದ ಯುವತಿಯಲ್ಲಿ ಕೋವಿಡ್ ಪಾಸಿಟಿವ್ ಕಂಡು ಬಂದಿದ್ದು,
ಈಕೆಯಲ್ಲಿ ಐಎಲ್‌ಐ ಲಕ್ಷಣಗಳು ಕಾಣಿಸಿಕೊಂಡಿದೆ ಎಂದು ವರದಿ ತಿಳಿಸಿದೆ. ಕನಕಪುರ ತಾಲೂಕಿನ ಮರಳವಾಡಿಯಲ್ಲಿ ಕಿಡ್ನಿ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದ 55 ವರ್ಷದ ವ್ಯಕ್ತಿ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದು, ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಪಾಸಿಟವ್ ಪ್ರಕರಣಗಳ ನ್ನು ಸ್ಥಳೀಯ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಮತ್ತೂಬ್ಬರು ಗುಣಮುಖ: ಜಿಲ್ಲೆಯಲ್ಲಿ ಮತ್ತೂಬ್ಬ ಸೋಂಕಿತ ವ್ಯಕ್ತಿ ಗುಣಮುಖರಾಗಿರುವುದಾಗಿ ಜಿಲ್ಲಾಡಳಿತ ತಿಳಿಸಿದೆಯಾದರು, ಪೂರ್ಣ ಮಾಹಿತಿ ಕೊಟ್ಟಿಲ್ಲ.
55 ವರ್ಷದ ವ್ಯಕ್ತಿಗೆ ಸೋಂಕು: ಮರಳವಾಡಿ ಹೋಬಳಿಯ ದೊಡ್ಡಸಾದೇನಹಳ್ಳಿ ಗ್ರಾಮದ 55 ವರ್ಷದ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಿದೆ. ಸೋಂಕಿತ ವ್ಯಕ್ತಿಯನ್ನು ಆರೋಗ್ಯ ಅಧಿಕಾರಿಗಳು ರಾಮನಗರ ಕೋವಿಡ್-19 ಆಸ್ಪತ್ರೆಗೆ ದಾಖಲಿಸಿದ್ದಾರೆ. ಈತ ಅನಾರೋಗ್ಯದಿಂದ ಡಯಾಲಿಸಿಸ್ ಚಿಕಿತ್ಸೆಗೆಂದು ವಾರದಲ್ಲಿ ಎರಡು ದಿನ ಬೆಂಗಳೂರಿನ ಆಸ್ಪತ್ರೆ ಹೋಗಿ ಬರುತ್ತಿದ್ದ. ಹೀಗಾಗಿ ಈತನಿಗೆ ಬೆಂಗಳೂರಿನ ಮೂಲದಿಂದಲೇ ಸೋಂಕು ಹರಡಿರಬಹುದು ಎಂದು ಶಂಕಿಸಲಾಗಿದೆ.
ಸೋಂಕಿತ ವ್ಯಕ್ತಿಯನ್ನು ಚಿಕಿತ್ಸೆಗೆಂದು ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದ ಮಕ್ಕಳಿಗೂ ಸೋಂಕು ಹರಡುವ ಭೀತಿ ಎದುರಾಗಿದೆ. ಈ ಸಂಬಂಧ ತಾಲೂಕು ಆರೋಗ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೋಂಕಿತ ವ್ಯಕ್ತಿಯ ಮನೆಯ ಸುತ್ತಲೂ ಸೀಲ್‌ಡೌನ್ ಮಾಡಲಾಗಿದೆ. ಸೋಂಕಿತನ ಸಂಪರ್ಕದಲ್ಲಿದ್ದ 4 ಜನ ಕುಟುಂಬದವರನ್ನು ಕ್ವಾರಂಟೈನ್ ಮಾಡಲಾಗಿದೆ.