ಮಾಲಿಕೆಯಲ್ಲಿ ಏಳನೆಯ ಪ್ರಸ್ತುತಿಯಾಗಿ ರಾಮಕೃಷ್ಣ ವೀಣಾವಾದನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
Advertisement
ಪಿಸಿರಿಲ್ಲದ ನುಡಿತ, ದೀರ್ಘವಾದ ಮೀಟುಗಳು, ಸುಶ್ಯಾವ್ಯವಾದ ಸೌಖ್ಯ ಸಂಗೀತ, ಎಲ್ಲಕ್ಕಿಂತ ಮಿಗಿಲಾಗಿ ಕಲಾವಿದರ ಸಂಗೀತ ಪ್ರೀತಿ ಮತ್ತು ಆತ್ಮವಿಶ್ವಾಸ. ನಾಟಕುರುಂಜಿ ವರ್ಣದ ಚುರುಕಾದ ಆರಂಭ. ನಾಟ (ಶ್ರೀ ಮಹಾಗಣಪತಿಂ) ಸರಸ್ವತಿ (ಸರಸ್ವತಿ ನಮೋಸ್ತುತೆ) ಅಭೋಗಿ (ನೆಕ್ಕುರಂಗಿ) ಸಾರಮತಿ (ಮೋಕ್ಷಮಗಲದಾ) ರಸಾಳಿ (ಅಪರಾಧಮುಲನು) ರಾಗಗಳ ದೋಷರಹಿತವಾದ ನಿರೂಪಣೆ ಮನಸ್ಸಿಗೆ ಹಿತ ನೀಡಿತು. ಸುರಟಿ (ಶ್ರೀ ವೆಂಕಟಗಿರೀಶಂ) ರಾಗದ ಆಲಾಪನೆ ಚಿಕ್ಕದಾದರೂ ಚೊಕ್ಕವೆನಿಸಿತು. “ಭೈರವಿ’ಯ ರಾಗವಿಸ್ತಾರ, “ತಾನಂ’ ನಂತರ ಸ್ವರಜತಿಯನ್ನು (ಕಾಮಾಕ್ಷಿ) ನುಡಿಸಿದ ವೈಣಿಕರು ಅದರಲ್ಲಿ ಉತ್ತಮವಾದ ಸ್ವರ ವಿನಿಕೆಗಳನ್ನು ಪೋಣಿಸಿ ರಾಗಕ್ಕೆ ನ್ಯಾಯ ಒದಗಿಸಿದರು.