Advertisement

ನಾಗರಿಕರೆಲ್ಲ ಸ್ವಚ್ಛತೆಯ ಕಡೆಗೆ ಚಿಂತಿಸಿ: ಮಧುಸೂದನ್‌ ರಾವ್‌

12:45 AM Apr 18, 2019 | Sriram |

ಸುರತ್ಕಲ್‌: ರಾಮಕೃಷ್ಣ ಮಿಷನ್‌ ನೇತೃತ್ವದಲ್ಲಿ ಸ್ವಚ್ಛ ಸುರತ್ಕಲ್‌ ಅಭಿಯಾನದಿಂದ ಸಾಕಷ್ಟು ಬದಲಾವಣೆಗಳಾಗುತ್ತಿದ್ದು, ನಾಗರಿಕರೆಲ್ಲ ತಮ್ಮ ಚಿಂತನೆಗಳನ್ನು ಸ್ವಚ್ಛತೆಯ ಕಡೆಗೆ ಹರಿಯ ಬಿಡಬೇಕೆಂದು ಹೊಸಬೆಟ್ಟು ಕೋರªಬ್ಬು ಸೇವಾ ಟ್ರಸ್ಟ್‌ನ ಕಾರ್ಯದರ್ಶಿ ಮಧುಸೂದನ್‌ ರಾವ್‌ ಹೇಳಿದರು.

Advertisement

ರಾಮಕೃಷ್ಣ ಮಿಷನ್‌ ಮಂಗಳೂರು, ನಾಗರಿಕ ಸಲಹಾ ಸಮಿತಿ, ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಎಂ.ಆರ್‌.ಪಿ.ಎಲ್‌. ಸಹಯೋಗದಲ್ಲಿ ನಡೆಯುವ ರಾಮಕೃಷ್ಣ ಮಿಷನ್‌ ಸ್ವಚ್ಛ ಸುರತ್ಕಲ್‌ ಅಭಿಯಾನದ 26ನೇ ವಾರದ ಶ್ರಮದಾನಕ್ಕೆ ಹೊಸಬೆಟ್ಟು ಪರಿಸರದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ನಮ್ಮ ಮನೆಯ ಸಮಸ್ಯೆಯನ್ನು ಊರಿನ ಸಮಸ್ಯೆಯನ್ನಾಗಿ ಮಾಡಬೇಡಿ. ನಮ್ಮ ಕಸಕ್ಕೆ ನಾವೇ ಹೊಣೆಗಾರರು. ತ್ಯಾಜ್ಯವನ್ನು ರಸ್ತೆಗೆ ಎಸೆದು ಊರಿನ ಸೌಂದರ್ಯವನ್ನು ಹಾಳು ಮಾಡಬೇಡಿ.

ತ್ಯಾಜ್ಯದ ಸೂಕ್ತ ರೀತಿಯ ನಿರ್ವಹಣೆ ಮಾಡದೇ ಇರುವುದರಿಂದ ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಿದ್ದು, ಮುಂದಿನ ಜನಾಂಗದ ಆರೋಗ್ಯದ ದೃಷ್ಟಿಯಿಂದ ನಾವೆಲ್ಲ ಜಾಗೃತರಾಗಬೇಕಾದ ಅಗತ್ಯವನ್ನು ತಿಳಿಸಿದರು.

ವಿವಿಧ ಗುಂಪುಗಳಲ್ಲಿ ಶ್ರಮದಾನ
ವಿದ್ಯಾದಾಯಿನಿ ಗ್ರಾಮೀಣಾ ಅಭಿವೃದ್ಧಿ ಮತ್ತು ಕೃಷಿ ತರಬೇತಿ ಕೇಂದ್ರ ಸುರತ್ಕಲ್‌ ಬೃಂದಾವನ ನಗರ ಹಿತವೇದಿಕೆ, ಆಶ್ರಯ ಮಹಿಳಾ ವೇದಿಕೆ ಹಾಗೂ ಯುವ ವೇದಿಕೆ, ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್‌ ಗುತ್ತಿಗೆದಾರರ ಸಂಘ, ಕರ್ನಾಟಕ ರಾಜ್ಯ ಟೈಲರ್ ಆಸೋಸಿಯೇಶನ್‌(ಸುರತ್ಕಲ್‌ ವಲಯ), ನಾಗರಿಕ ಸಮಿತಿ ಕುಳಾಯಿ, ಗ್ರಾಮ ಸಂಘ ಕುಳಾಯಿ, ಗೋಪಾಲಕೃಷ್ಣ ಯುವ ಸೇವಾ ದಳ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕುಳಾಯಿ, ಮಹಿಳಾ ಮಂಡಳಿ ಕುಳಾಯಿ ಗೋವಿಂದದಾಸ ಕಾಲೇಜು ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಮುಂತಾದ ಸಂಘಟನೆಗಳ 70ಕ್ಕೂ ಮಿಕ್ಕಿ ಸ್ವಯಂ ಸೇವಕರು ನಾಯಕರಾದ ಭರತ್‌ ಶೆಟ್ಟಿ, ಲೋಕಾನಾಥ ಅಮಿನ್‌, ಸಂಜೀವ್‌ ರಾವ್‌, ಸುಕುಮಾರ್‌, ಮಿನಾಕ್ಷಿ ದೇವದಾಸ್‌, ಅಕುಂಶ್‌ ಶೆಟ್ಟಿ, ಜಯಶಂಕರ್‌, ಹರಿಣಿ ಜಯಶಂಕರ್‌, ಓಂಪ್ರಕಾಶ್‌ ಶೆಟ್ಟಿಗಾರ್‌, ಸುಮತಿ ಹಂದೆ, ಎಂ.ಟಿ. ಸಾಲ್ಯಾನ್‌, ಬಾಲಕೃಷ್ಣ ಎಚ್‌., ಗಣೇಶ್‌ ಆಚಾರ್‌, ದೇವದಾಸ್‌ ಕುಳಾಯಿ, ಸದಾಶಿವ ಶೆಟ್ಟಿ, ಅನುರಾಧ ಮೊದಲಾದವರ ನೇತೃತ್ವದಲ್ಲಿ 4 ಗುಂಪುಗಳಲ್ಲಿ ಹೊಸಬೆಟ್ಟುವಿನಿಂದ ಇಡ್ಯಾ ವಿದ್ಯಾದಾಯಿನಿ ಶಾಲೆಯವರೆಗಿನ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳನ್ನು ಸ್ವಚ್ಛ ಮಾಡಲಾಯಿತು.

Advertisement

ಸ್ವಚ್ಛತಾ ಜಾಗೃತಿ ಅರಿವು
ನಾಗರಿಕ ಸಲಹಾ ಸಮಿತಿ ಸಂಚಾಲಕ ಡಾ| ರಾಜ್‌ ಮೋಹನ್‌ ರಾವ್‌, ಗೋವಿಂದದಾಸ ಕಾಲೇಜಿನ ಉಪಪ್ರಾಂಶುಪಾಲ ಕೃಷ್ಣಮೂರ್ತಿ, ಪ್ರೊ| ರಮೇಶ್‌ ಭಟ್‌, ಸಾವಿತ್ರಿ ರಮೇಶ್‌ ಭಟ್‌, ಗೋವಿಂದದಾಸ ಕಾಲೇಜಿನ ಎಂ.ಕಾಂ. ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ನಾಯಕರಾದ ಪ್ರಾರ್ಥನಾ ಅವರ ನೇತೃತ್ವದಲ್ಲಿ ಪರಿಸರದ ಅಂಗಡಿ, ಮನೆಗಳಿಗೆ ತೆರಳಿ ಸ್ವತ್ಛತೆಯ ಅರಿವು ಮೂಡಿಸಲಾಯಿತು. ರಾಮಕೃಷ್ಣ ಮಿಷನ್‌ ಸ್ವಚ್ಛ ಸುರತ್ಕಲ್‌ ಅಭಿಯಾನದ ಸಂಯೋಜಕ ಸತೀಶ್‌ ಸದಾನಂದ್‌ ಸ್ವಯಂ ಸೇವಕರಿಗೆ ಅಗತ್ಯ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next