Advertisement

“ಸಾರ್ವಜನಿಕ ಸ್ಥಳಗಳನ್ನು ಕೊಳಕು ಮಾಡುವ ಮನಸ್ಥಿತಿಯಿಂದ ಹೊರಬನ್ನಿ’

11:41 PM Jul 14, 2019 | Team Udayavani |

ಮಹಾನಗರ: ನಾವೆಲ್ಲರೂ ನಮ್ಮ ಮನೆಯ ಪರಿಸರವನ್ನು ಸ್ವಚ್ಛವಾಗಿ ಡಲು ಹೆಚ್ಚು ಗಮನ ಹರಿಸುತ್ತೇವೇಯೇ ಹೊರತು ಸಾರ್ವಜನಿಕ ಸ್ಥಳಗಳ ಬಗ್ಗೆ ಗಮನ ಹರಿಸುವುದಿಲ್ಲ; ಸಾರ್ವಜನಿಕ ಸ್ಥಳಗಳನ್ನು ಕೊಳಕು ಮಾಡುವ ಮನಸ್ಥಿತಿಯಿಂದ ಹೊರಬರ ಬೇಕಿದೆ ಎಂದು ಕ್ಯಾಂಪ್ಕೊ ಸಂಸ್ಥೆಯ ಜನರಲ್ ಮ್ಯಾನೇಜರ್‌ ರೇಶ್ಮಾ ಮಲ್ಯ ಹೇಳಿದರು.

Advertisement

ರವಿವಾರ ರಾಮಕೃಷ್ಣ ಮಿಷನ್‌ ಮಾರ್ಗ ದರ್ಶನದಲ್ಲಿ ನಡೆದ ಸ್ವಚ್ಛ ಮಂಗಳೂರು ಅಭಿಯಾನದ ಶ್ರಮದಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಭಾರತೀಯ ಸಂಸ್ಕೃತಿಯಲ್ಲಿ ಸ್ವಚ್ಛತೆಗೆ ಅತ್ಯುಚ್ಛ ಸ್ಥಾನವನ್ನು ನೀಡಿ ದ್ದರೂ ಕಾರಣಾಂತರಗಳಿಂದ ನಮ್ಮ ನಗರ ಗಳನ್ನು ಸ್ವಚ್ಛವಾಗಿಡುವಲ್ಲಿ ಎಡವಿ ದ್ದೇವೆ. ಮನೆ ಹಾಗೂ ಮನೆಯ ಪರಿಸರವನ್ನು ಒಪ್ಪ-ಓರಣವಾಗಿಡುವ ನಾವು ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡಬೇಕು. ಈಗೀಗ ಸ್ವಚ್ಛ ಭಾರತ ಅಭಿಯಾನದಿಂದಾಗಿ ಜನರಲ್ಲಿ ಈ ಕುರಿತು ಅರಿವು ನಿಧಾನವಾಗಿ ಮೂಡುತ್ತಿದೆ. ವಿಶೇಷವಾಗಿ ಮಕ್ಕಳು ಹೆಚ್ಚು ಜಾಗೃತರಾಗಿದ್ದಾರೆ. ದೊಡ್ಡವರು ಕಸ ಬಿಸಾಡಿದರೆ ಮಕ್ಕಳೇ ಅವರನ್ನು ತಡೆ ಯುತ್ತಿರುವ ಸಾಕಷ್ಟು ನಿದರ್ಶನಗಳನ್ನು ಕಾಣ ಬಹುದಾಗಿದೆ. ಈ ತೆರನಾದ ಕಾರ್ಯಕ್ರಮಗಳಿಂದಾಗಿ ಮುಂಬರುವ ಜನಾಂಗ ಸ್ವಚ್ಛತೆ, ಪರಿಸರ ಸಂರಕ್ಷಣೆ, ಸಾಮಾಜಿಕ ಜವಾಬ್ದಾರಿ ಮತ್ತಿತರ ಗುಣಗಳನ್ನು ಮೈಗೂಡಿಸಿಕೊಳ್ಳುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿ ಅವರು ಶುಭ ಹಾರೈಸಿದರು.

ರಾಮಕೃಷ್ಣ ಮಿಷನ್‌ ಮಾರ್ಗ ದರ್ಶನದಲ್ಲಿ 5ನೇ ವರ್ಷದ ಸ್ವಚ್ಛ ಮಂಗಳೂರು ಅಭಿಯಾನದ 32ನೇ ಶ್ರಮದಾನವು ಜು. 14ರಂದು ನಗರದ ಮಿಷನ್‌ ಸ್ಟ್ರೀಟ್ ಮತ್ತು ನೆಲ್ಲಿಕಾಯಿ ರಸ್ತೆ ಪ್ರದೇಶದಲ್ಲಿ ನಡೆಯಿತು.

ರೇಶ್ಮಾ ಮಲ್ಯ ಮತ್ತು ಕಾರ್ಪೊರೇಶನ್‌ ಬ್ಯಾಂಕಿನ ಅಸಿಸ್ಟೆಂಟ್ ಮ್ಯಾನೇಜರ್‌ ಯೋಗೀಶ್‌ ಪ್ರಭು, ಅಭಿಯಾನದ ಮಾರ್ಗದರ್ಶಿ ಕ್ಯಾ| ಗಣೇಶ್‌ ಕಾರ್ಣಿಕ್‌, ಎಂ.ಆರ್‌.ಪಿ.ಎಲ್. ಚೀಫ್‌ ಜನರಲ್ ಮೆನೇಜರ್‌ ಸುಭಾಷ ಪೈ, ಸುಬ್ರಾಯ ನಾಯಕ್‌, ಲತಾಮಣಿ ರೈ, ದಿನೇಶ್‌ ಕರ್ಕೇರಾ, ಸುನಂದಾ ಶಿವರಾಂ, ಸಂತೋಷ್‌ ಸುವರ್ಣ, ಮೋಹನ್‌ ಭಟ್, ಉಮಾನಾಥ್‌ ಕೋಟೆಕಾರ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

ಸ್ವಚ್ಛತೆ
ಶ್ರಮದಾನಕ್ಕೆ ಚಾಲನೆ ದೊರಕಿದ ಬಳಿಕ ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದ ಅವರು ನಾಲ್ಕು ಗುಂಪುಗಳನ್ನು ರಚಿಸಿ ಕಾರ್ಯಗಳನ್ನು ಹಂಚಿಕೆ ಮಾಡಿದರು.

ಪ್ರಥಮ ತಂಡ ಮಧುಚಂದ್ರ ಅಡ್ಯಂತಾಯ ನೇತೃತ್ವದಲ್ಲಿ ಮಿಷನ್‌ ಸ್ಟ್ರೀಟ್ ಹಾಗೂ ಅಲ್ಲಿದ್ದ ತ್ಯಾಜ್ಯ ತುಂಬಿ ದುರ್ನಾತ ಬೀರುತ್ತಿದ್ದ ಸ್ಥಳವನ್ನು ಸ್ವಚ್ಛ ಗೊಳಿಸಿತು. ಎರಡನೇ ಗುಂಪು ಸಂದೀಪ್‌ ಕೋಡಿಕಲ್ ಮತ್ತು ಯೋಗೀಶ್‌ ಕಾಯರ್ತಡ್ಕ ಜತೆಗೂಡಿ ನೆಲ್ಲಿಕಾಯಿ ರಸ್ತೆಯನ್ನು ಸ್ವಚ್ಛಗೊಳಿಸಿ, ಅಲ್ಲಿಯೇ ಮೂಲೆಯೊಂದರಲ್ಲಿದ್ದ ತ್ಯಾಜ್ಯದ ರಾಶಿಗಳನ್ನು ಜೇಸಿಬಿ ಬಳಸಿ ಕೊಂಡು ತೆರವುಗೊಳಿಸಿತು.

ಬಳಿಕ ಅಲ್ಲಿ ದುರ್ನಾತ ಹರಡದಂತೆ ತಡೆಯಲು ಜಲ್ಲಿಹುಡಿಯನ್ನು ಹಾಕಿ ನೆಲವನ್ನು ಸಮತಟ್ಟುಗೊಳಿಸಲಾಯಿತು. ಮೂರನೇ ತಂಡ ಅನಿರುದ್ಧ ನಾಯಕ್‌ ಹಾಗೂ ಅವಿನಾಶ್‌ ಅಂಚನ್‌ ಜತೆ ಸೇರಿ ಮಿಷನ್‌ ಸ್ಟ್ರೀಟ್ ಮತ್ತು ನೆಲ್ಲಿಕಾಯಿ ರಸ್ತೆಯ ಜಂಕ್ಷನ್‌ನಲ್ಲಿದ್ದ ಕಸದ ರಾಶಿ, ಕಟ್ಟಡ ತ್ಯಾಜ್ಯಗಳನ್ನು ತೆರವುಗೊಳಿಸಿ ಆ ಪರಿಸರವನ್ನು ಸ್ವಚ್ಛಗೊಳಿಸಿತು. ನಾಲ್ಕನೇ ತಂಡದಲ್ಲಿದ್ದ ಶಾರದಾ ವಿದ್ಯಾಲಯದ ವಿದ್ಯಾರ್ಥಿನಿಯರು ಸರಿತಾ ಶೆಟ್ಟಿ, ಶ್ರೀಜಾ ಶ್ರೀಕಾಂತ್‌ ಮತ್ತು ವಿಧಾತ್ರಿ ನೇತೃತ್ವದಲ್ಲಿ ಶ್ರಮದಾನ ಮಾಡಿದ ಬಳಿಕ ಆ ಪರಿಸರದ ಜನರಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಲು ಮನೆ ಭೇಟಿ ಹಾಗೂ ಅಂಗಡಿಯ ವರ್ತಕರಿಗೆ ಕರಪತ್ರ ಹಂಚಿ ಸ್ವಚ್ಛತೆಯನ್ನು ಕಾಪಾಡುವಂತೆ ಮನವಿ ಮಾಡಿತು.

ಇನ್ನುಳಿದ ಕಾರ್ಯಕರ್ತರು ರಸ್ತೆಗಳನ್ನು, ಬದಿಗಳನ್ನು ಹಾಗೂ ತೋಡುಗಳನ್ನು ಶುಚಿಗೊಳಿಸಿದರು. ಹಿರಿಯ ಸ್ವಯಂ ಸೇವಕರು ಅನಧಿಕೃತ ಬ್ಯಾನರ್‌- ಪೋಸ್ಟರ್‌ಗಳನ್ನು ತೆರವುಗೊಳಿಸಿದರು.

ಕಣ್ಗಾವಲು ಪಡೆ
ನೆಲ್ಲಿಕಾಯಿ ರಸ್ತೆ, ಮಿಷನ್‌ ಸ್ಟ್ರೀಟ್‌ನಲ್ಲಿನ ಮೂರು ಬೃಹತ್‌ ತ್ಯಾಜ್ಯರಾಶಿ ಬೀಳುವ ಸ್ಥಳಗಳನ್ನು ಸ್ವಯಂಸೇವಕರು ಸ್ವಚ್ಛಗೊಳಿಸಿ, ಅಲ್ಲಿ ಆಲಂಕಾರಿಕ ಹೂಕುಂಡಗಳನ್ನಿಟ್ಟು ಆ ಜಾಗವನ್ನು ಅಂದಗೊಳಿಸಿದ್ದಾರೆ. ಪ್ರತಿ ವಾರದಂತೆ ರಾಮಕೃಷ್ಣ ಮಿಷನ್‌ ಸ್ವಚ್ಛತಾ ಯೋಧರು ಜಗನ್‌ ಕೋಡಿಕಲ್, ಸುಧೀರ್‌ ವಾಮಂಜೂರು ಜತೆ ಸೇರಿ ಮುಂದಿನ ಒಂದು ವಾರಗಳ ಕಾಲ ಹಗಲಿರುಳು ಆ ಸ್ಥಳಗಳಲ್ಲಿ ಕಾವಲು ಕಾಯಲಿದ್ದಾರೆ. ಅಕಸ್ಮಾತ್‌ ಯಾರಾದರೂ ತ್ಯಾಜ್ಯ ಬಿಸಾಡಿದರೆ ಅವರನ್ನು ಗುರುತಿಸಿ, ಜಾಗೃತಿ ಮೂಡಿಸಿ ಮನಪರಿವರ್ತನೆ ಮಾಡಲು ಪ್ರಯತ್ನಿಸಲಿದ್ದಾರೆ.

ರಾಮಕೃಷ್ಣ ಮಿಷನ್‌ ವತಿಯಿಂದ ಹಮ್ಮಿಕೊಳ್ಳಲಾಗುತ್ತಿರುವ ‘ಕಸದ ಬುಟ್ಟಿ ಉಪಯೋಗಿಸಿ ಸ್ವಚ್ಛತೆಯಲ್ಲಿ ಕೈಜೋಡಿಸಿ’ ಅಭಿಯಾನದಡಿಯಲ್ಲಿ ನಗರದ ಚಿಕ್ಕಪುಟ್ಟ ಅಂಗಡಿಗಳಿಗೆ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಕಸದ ಬುಟ್ಟಿಯನ್ನು ವಿತರಿಸುವ ಅಭಿಯಾನವನ್ನು ತಿಂಗಳ ಹಿಂದೆ ಆರಂಭಿಸಲಾಗಿತ್ತು. ಇದುವರೆಗೆ ಸುಮಾರು 300 ಕಸದ ಬುಟ್ಟಿಗಳನ್ನು ಸ್ಟೇಟ್ ಬ್ಯಾಂಕ್‌, ಬೈಕಂಪಾಡಿ, ಬಿಜೈ, ಹಂಪನಕಟ್ಟೆ, ಬೊಕ್ಕಪಟ್ಣ, ಕುಲಶೇಖರ, ನಂದಿಗುಡ್ದ, ಬಂದರ್‌, ಉರ್ವಸ್ಟೋರ್‌, ಅಶೋಕ ನಗರ, ಕಾವೂರು ಇನ್ನಿತರ ಕಡೆಗಳಲ್ಲಿ ವಿತರಿಸಲಾಗಿದೆ. ಕಮಲಾಕ್ಷ ಪೈ ನೇತೃತ್ವದಲ್ಲಿ ಪುನೀತ್‌ ಪೂಜಾರಿ, ಸತೀಶ್‌ ಕೆಂಕನಾಜೆ, ಶಿವು ಪುತ್ತೂರು, ರವಿ ಕೆ.ಆರ್‌., ಕೃಷ್ಣ ಜಿ., ಪ್ರಶಾಂತ ಉಪ್ಪಿನಂಗಡಿ ಹಾಗೂ ಇತರ ಕಾರ್ಯಕರ್ತರು ಭಾಗವಹಿಸಿದ್ದರು. ಈ ಎಲ್ಲ ಚಟುವಟಿಕೆಗಳಿಗೆ ಎಂ.ಆರ್‌. ಪಿ.ಎಲ್. ಸಂಸ್ಥೆ ಪ್ರಾಯೋಜಕತ್ವ ನೀಡಿ ಪ್ರೋತ್ಸಾಹಿಸುತ್ತಿದೆ.

ಕಸದ ಬುಟ್ಟಿಗಳ ವಿತರಣೆ
ರಾಮಕೃಷ್ಣ ಮಿಷನ್‌ ವತಿಯಿಂದ ಹಮ್ಮಿಕೊಳ್ಳಲಾಗುತ್ತಿರುವ ‘ಕಸದ ಬುಟ್ಟಿ ಉಪಯೋಗಿಸಿ ಸ್ವಚ್ಛತೆಯಲ್ಲಿ ಕೈಜೋಡಿಸಿ’ ಅಭಿಯಾನದಡಿಯಲ್ಲಿ ನಗರದ ಚಿಕ್ಕಪುಟ್ಟ ಅಂಗಡಿಗಳಿಗೆ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಕಸದ ಬುಟ್ಟಿಯನ್ನು ವಿತರಿಸುವ ಅಭಿಯಾನವನ್ನು ತಿಂಗಳ ಹಿಂದೆ ಆರಂಭಿಸಲಾಗಿತ್ತು. ಇದುವರೆಗೆ ಸುಮಾರು 300 ಕಸದ ಬುಟ್ಟಿಗಳನ್ನು ಸ್ಟೇಟ್ ಬ್ಯಾಂಕ್‌, ಬೈಕಂಪಾಡಿ, ಬಿಜೈ, ಹಂಪನಕಟ್ಟೆ, ಬೊಕ್ಕಪಟ್ಣ, ಕುಲಶೇಖರ, ನಂದಿಗುಡ್ದ, ಬಂದರ್‌, ಉರ್ವಸ್ಟೋರ್‌, ಅಶೋಕ ನಗರ, ಕಾವೂರು ಇನ್ನಿತರ ಕಡೆಗಳಲ್ಲಿ ವಿತರಿಸಲಾಗಿದೆ. ಕಮಲಾಕ್ಷ ಪೈ ನೇತೃತ್ವದಲ್ಲಿ ಪುನೀತ್‌ ಪೂಜಾರಿ, ಸತೀಶ್‌ ಕೆಂಕನಾಜೆ, ಶಿವು ಪುತ್ತೂರು, ರವಿ ಕೆ.ಆರ್‌., ಕೃಷ್ಣ ಜಿ., ಪ್ರಶಾಂತ ಉಪ್ಪಿನಂಗಡಿ ಹಾಗೂ ಇತರ ಕಾರ್ಯಕರ್ತರು ಭಾಗವಹಿಸಿದ್ದರು. ಈ ಎಲ್ಲ ಚಟುವಟಿಕೆಗಳಿಗೆ ಎಂ.ಆರ್‌. ಪಿ.ಎಲ್. ಸಂಸ್ಥೆ ಪ್ರಾಯೋಜಕತ್ವ ನೀಡಿ ಪ್ರೋತ್ಸಾಹಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next