Advertisement
ಬೆಂದೂರ್‌ವೆಲ್ ವೃತ್ತದಲ್ಲಿ ಪ್ರಮುಖ ರಾದ ಶಿವರಾಮ ಅಡೂxರ್, ಶ್ರದ್ಧಾ ಅವರು ಅಭಿಯಾನಕ್ಕೆ ಚಾಲನೆ ನೀಡಿದರು.
ಸಮಾಜಸೇವಕಿ ಶ್ರದ್ಧಾ ಮಾತನಾಡಿ, ಯಾವುದೇ ಕಾರ್ಯಕ್ರಮವನ್ನಾದರೂ ಆರಂಭಿಸುವುದು ಸುಲಭ; ಆದರೆ ಅದನ್ನು ನಿರಂತರವಾಗಿ, ಶ್ರದ್ಧೆಯಿಂದ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರು ವುದು ಕಷ್ಟ. ದೇಶದ ಇತರೆಡೆಗಳಂತೆ ಬೆಂಗಳೂರಿನಲ್ಲಿಯೂ ನಾವು ಸ್ವತ್ಛತಾ ಅಭಿಯಾನವನ್ನು ಅರಂಭಿಸಿದ್ದೆವು. ಆದರೆ ಅದನ್ನು ಮುನ್ನಡೆಸಲು ಸಾಧ್ಯವಾಗಲಿಲ್ಲ. ಅದರೆ ಸ್ವಚ್ಛ ಮಂಗಳೂರು ಅಭಿಯಾನ ಅತ್ಯಂತ ಶಿಸ್ತಿನಿಂದ, ಯೋಜನಾಬದ್ಧವಾಗಿ ನಾಲ್ಕೂವರೆ ವರ್ಷಗಳಿಂದ ನಡೆಯು ತ್ತಿರುವುದನ್ನು ಕಂಡಾಗ ಅದ್ಭುತವೇ ಅನಿಸುತ್ತದೆ. ಇದು ಕೇವಲ ಸ್ವಚ್ಛತಾ ಅಭಿ ಯಾನವಲ್ಲ, ನಮ್ಮಂತವರಿಗೆ ಸ್ಫೂರ್ತಿಯ ಅಭಿಯಾನವಾಗಿದೆ. ಬೆಂಗಳೂರಿಗೆ ಹೋಗಿ ಶ್ರಮದಾನವನ್ನು ಆರಂಭಿಸಲು ಸ್ಫೂರ್ತಿ ನೀಡಿದ ಮಂಗಳೂರಿಗೆ ಧನ್ಯವಾದ ಎಂದು ಶುಭಹಾರೈಸಿದರು.
Related Articles
Advertisement
ಶ್ರಮದಾನಸ್ವಯಂಸೇವಕರು ಬೆಂದೂರ್‌ವೆಲ್- ಬಲ್ಮಠ ಮುಖ್ಯರಸ್ತೆಗಳಲ್ಲಿ ಶ್ರಮದಾನವನ್ನು ಕೈಗೊಂಡರು. ಮಹಿಳಾ ಕಾರ್ಯಕರ್ತರು ಬೆಂದೂರವೆಲ್ ವೃತ್ತದಲ್ಲಿ ಸ್ವಚ್ಛತಾ ಕಾರ್ಯ ಮಾಡಿದರು. ಮೋಹನ್ ಕೊಟ್ಟಾರಿ, ಹಿರಿಯ ಕಾರ್ಯಕರ್ತರು ಬಲ್ಮಠದತ್ತ ಸಾಗುವ ಮಾರ್ಗಗಳಲ್ಲಿದ್ದ ಕಸ-ಮಣ್ಣು ಗುಡಿಸಿ ಸ್ವತ್ಛಗೊಳಿಸಿದರು. ಬೆಂದೂರ್ ವೆಲ್ ವೃತ್ತದಿಂದ ಬಲ್ಮಠ ಸಾಗುವ ರಸ್ತೆಯ ಎಡಬದಿಯ ಕಾಲು ದಾರಿಯಲ್ಲಿ ಮೂರು ಸ್ಥಳಗಳನ್ನು ಸಾರ್ವಜನಿಕರು ತ್ಯಾಜ್ಯ ಬಿಸಾಕುವ ತಾಣಗಳನ್ನಾಗಿ ಮಾರ್ಪಡಿಸಿದ್ದರು. ಅವುಗಳನ್ನು ಮೆಹಬೂಬ್ ಖಾನ್, ಸುಧೀರ್ ನೊರೊನ್ಹ, ಉಮಾಕಾಂತ ಸುವರ್ಣ, ಕಾರ್ಯಕರ್ತರು ತೆಗೆದು ಸ್ವಚ್ಛಗೊಳಿಸಿದರು. ಬಳಿಕ ಅಲ್ಲಿ ಆಲಂಕಾರಿಕ ಗಿಡಗಳನ್ನಿಟ್ಟು ಅಂದಗೊಳಿಸಲಾಗಿದೆ. ರಾಮಚಂದ್ರ ಶೆಟ್ಟಿ, ದಿನೇಶ್ ಕಾರ್ಯಕರ್ತ ರೊಡಗೂಡಿ ಅದೇ ರಸ್ತೆಯ ಮೂರು ಕಡೆಗಳಲ್ಲಿ ಕಿತ್ತುಹೋಗಿದ್ದ ಫುಟಪಾತ್ ಕಲ್ಲುಗಳನ್ನು ಸರಿಪಡಿಸಿದರು. ಇನ್ನೊಂದು ಬದಿಯಲ್ಲಿ ವಿಟuಲದಾಸ್ ಪ್ರಭು, ಬಾಲಕೃಷ್ಣ ಭಟ್, ಕಾರ್ಯಕರ್ತರು ಸುಮಾರು ಒಂದು ಲೋಡ್ ಮಿಕ್ಕಿ ಕಟ್ಟಡ ತ್ಯಾಜ್ಯ, ಮುರಿದು ಬಿದ್ದ ಕಾಂಕ್ರೀಟ್ ಕಂಬ ಇತ್ಯಾದಿ ತ್ಯಾಜ್ಯಗಳನ್ನು ಜೇಸಿಬಿ ಬಳಸಿ ತೆರವುಗೊಳಿಸಿದರು. ಬಾಲಕೃಷ್ಣ ನಾೖಕ್ ಮಾರ್ಗಸೂಚಕ ರಿಪ್ಲೆಕ್ಟರ್ ಫಲಕಗಳನ್ನು ನೀರಿನಿಂದ ತೊಳೆದು ಸ್ವಚ್ಛಗೊಳಿಸಿದರು. ವಿಖ್ಯಾತ್ ಬ್ಯಾನರ್ ಪೋಸ್ಟ್ರರ್ ತೆರವುಗೊಳಿಸಿದರು. ಕಮಲಾಕ್ಷ ಪೈ, ಯುವತಿಯರು ಅಂಗಡಿ, ಮನೆಗಳಿಗೆ ತೆರಳಿ ಸ್ವಚ್ಛತೆಯ ಕರಪತ್ರ ನೀಡಿ ಜಾಗೃತಿ ಕಾರ್ಯಕ್ರಮ ನಡೆಸಿಕೊಟ್ಟರು.ಅಭಿಯಾನದ ಪ್ರಮುಖ ದಿಲ್‌ರಾಜ್ ಆಳ್ವ ಉಮಾನಾಥ್ ಕೋಟೆಕಾರ್ ಶ್ರಮದಾನದ ನೇತೃತ್ವ ವಹಿಸಿದ್ದರು. ಸ್ವಚ್ಛತೆಯ ಕಲ್ಪನೆ ಮೂಡಿದೆ
ಶಿವರಾಂ ಅಡೂxರ್ ಮಾತನಾಡಿ, ಸ್ವಚ್ಛತ ಅಭಿಯಾನ ಹಲವಾರು ಸಂಘ-ಸಂಸ್ಥೆಗಳಿಗೆ ಸ್ಫೂರ್ತಿಯನ್ನು ಕೊಟ್ಟ ಹೆಗ್ಗಳಿಕೆ ಹೊಂದಿದೆ. ನಾಲ್ಕು ವರ್ಷಗಳಿಂದ ಸಾಗಿಬರುತ್ತಿರುವ ಈ ಕಾರ್ಯಕ್ರಮ ನಿಧಾನವಾಗಿ ಜನರಲ್ಲಿ ಸ್ವಚ್ಛತೆಯ ಕಲ್ಪನೆ ಮೂಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಎಲ್ಲರೂ ಸ್ವಚ್ಛತೆಯನ್ನು ಮೈಗೂಡಿಸಿಕೊಂಡರೆ ಸ್ವತ್ಛ ಭಾರತ ಆದಷ್ಟು ಬೇಗ ಸಾಕಾರಗೊಳ್ಳುವುದು ಎಂದರು. ಬಟ್ಟೆ ಚೀಲಗಳ ವಿತರಣೆ
ಪ್ಲಾಸ್ಟಿಕ್ ಕೈ ಚೀಲಗಳು ಪರಿಸರಕ್ಕೆ ಹಾನಿಯನ್ನುಂಟು ಮಾಡುತ್ತಿರುವ ಹಿನ್ನೆಲೆಯಲ್ಲಿ ರಾಮಕೃಷ್ಣ ಮಿಷನ್ ವತಿಯಿಂದ ಎಂ.ಆರ್.ಪಿ.ಎಲ್. ಪ್ರಾಯೋಜಕತ್ವದಲ್ಲಿ ಸಾರ್ವಜನಿಕರಿಗೆ ಬಟ್ಟೆ ಚೀಲಗಳನ್ನು ವಿತರಿಸಿ ಪ್ಲಾಸ್ಟಿಕ್ ಉಪಯೋಗ ಕಡಿಮೆ ಮಾಡುವಂತೆ ಜಾಗೃತಿ ಮಾಡಲಾಗುತ್ತಿದೆ. ನಾಲ್ಕು ಕಲ್ಪನೆಗಳಲ್ಲಿ ಈ ಚೀಲಗಳನ್ನು ಹೊರತರಲಾಗಿದೆ. ಮರ ಬೆಳಸಿ-ಪರಿಸರ ಉಳಿಸಿ, ಸ್ವಚ್ಛಭೂಮಿ ಹಸುರುಭೂಮಿ, ಪ್ಲಾಸ್ಟಿಕ್ ಬಳಸದೇ ಭೂಮಿ ಉಳಿಸಿ ಇಂತಹ ಸಂದೇಶಗಳನ್ನು ಅವುಗಳ ಮೇಲೆ ಮುದ್ರಿಸಲಾಗಿದೆ. ಒಟ್ಟು ಸುಮಾರು ಆರು ಸಾವಿರ ಚೀಲಗಳನ್ನು ಪ್ರತಿದಿನ ನಡೆಯುವ ಸಂಪರ್ಕ ಅಭಿಯಾನದಲ್ಲಿ ತರಿಸಲಾಗುತ್ತಿದೆ. ಈ ಎಲ್ಲ ಸ್ವಚ್ಛತ ಕಾರ್ಯಕ್ರಮಗಳಿಗೆ ಎಂ.ಆರ್.ಪಿ.ಎಲ್. ಸಂಸ್ಥೆ ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿದೆ.