Advertisement
ಮಂಗಳೂರಿನ ರಾಮಕೃಷ್ಣ ಮಠ ಹಾಗೂ ಸುರತ್ಕಲ್‌ನ ಚಿರಂತನ ಚಾರಿಟೇಬಲ್ ಟ್ರಸ್ಟ್‌ನ ಪಂಚಮದ ಇಂಚರ ಬಳಗ ಆಯೋಜಿಸಿದ “ಪಂಚಮದ ಇಂಚರ ವಿವೇಕಸ್ಮತಿ 2018′ ಸಂಗೀತ ಮಹೋತ್ಸವದ 7 ಕಛೇರಿಗಳು ಪ್ರಶಂಸೆಗೆ ಪಾತ್ರವಾಯಿತು.
Related Articles
Advertisement
ಕೊಳಲು ಮಾಂತ್ರಿಕ ಪಂಡಿತ್ ಪ್ರವೀಣ್ ಗೋಡಖೀಂಡಿಯವರು ತನ್ನ ಬೃಂದಾವನೀಸಾರಂಗ ರಾಗದ ಸುವಿಸ್ತಾರವಾದ ಆಲಾಪ್ ಜೋಡ್‌ಝಾಲ ಹಾಗೂ ತಂತ್ರಕಾರೀ ಅಂಗದಲ್ಲಿ 9 ಮಾತ್ರೆಯ ಮತ್‌ತಾಳದಲ್ಲಿ ಹಾಗೂ ದೃತ್ ತೀನ್‌ತಾಳದಲ್ಲಿ ಅದಕ್ಕೆ ಶುದ್ಧ ಸಾರಂಗದ ಅಂಗವನ್ನು ಸೇರಿಸಿ, ತಮ್ಮ ಪರಿಕಲ್ಪನೆಯಲ್ಲಿ ಪ್ರಸ್ತುತ ಪಡಿಸಿದರು. ಇದಕ್ಕೆ ತಬಲಾಸಾಥ್‌ನೊಂದಿಗೆ ಮೆರುಗನ್ನು ನೀಡಿದವರು ಪಂ| ರವೀಂದ್ರ ಯಾವಗಲ್. ಇವರೀರ್ವರ ಸಮನ್ವಯ ಹಾಗೂ ಸಾಂಗತ್ಯ ಅದ್ಭುತವಾದ ಸಂಗೀತ ಲೋಕವನ್ನು ಸೃಷ್ಟಿಸಿತು.
ಮಧ್ಯಾಹ್ನ ನಂತರದ ಪ್ರಥಮ ಕಛೇರಿಯಲ್ಲಿ ಗಂಧಾರ್ ದೇಶ್‌ಪಾಂಡೆ ಮನಮೋಹಕ ಗಾಯನದಿಂದ ಮನ ಗೆದ್ದರು. ಸ್ವರ ಲಯಗಳ ಮೇಲಿನ ಹಿಡಿತ ಅನಿರೀಕ್ಷಿತ ಮಟ್ಟದಲ್ಲಿದ್ದುದು ಕಲಾಭಿಮಾನಿಗಳ ಆನಂದಕ್ಕೆ ಕಾರಣವಾಯಿತು. ಇವರಿಗೆ ಗುರುಮೂರ್ತಿ ವೈದ್ಯ ಹಾಗೂ ಗುರುಪ್ರಸಾದ್ ಹೆಗಡೆ ಸಾಥ್ ನೀಡಿದರು. ಚೈತನ್ಯ ಭಟ್, ನಹುಶ್ ತಾನ್‌ಪುರದಲ್ಲಿ ಸಹಕರಿಸಿದರು.
ತದನಂತರ ದೆಹಲಿಯ ಪ್ರಸಿದ್ಧ ಗಾಯಕಿ ಶಾಶ್ವತಿ ಮಂಡಲ್ ಅಪೂರ್ವ ಕಂಠಸಿರಿಯಿಂದ ಸಂಗೀತ ರಸದೌತಣವನ್ನು ನೀಡಿದರು. ರಾಗ್ ಮುಲ್ತಾನಿಯಲ್ಲಿ ವಿಲಂಬಿತ್ ತೀನ್‌ತಾಲ್, ದೃತ್ ಏಕ್‌ತಾಲ್‌ನಲ್ಲಿ ಬಂದಿಶ್‌ಗಳನ್ನೂ ದೃತ್ ತೀನ್ ತಾಲ್‌ನಲ್ಲಿ ಒಂದು ತರಾನವನ್ನೂ ಹಾಡಿದರು. ನಂತರ ರಾಗವಾದ ಸೋಹನೀ ಭಟಿಯಾರ್‌ನಲ್ಲಿ ಒಂದು ಬಂಧಿಶ್ ಪ್ರಸ್ತುತಪಡಿಸಿ, ಕೊನೆಯಲ್ಲಿ ಕಾಫಿ ರಾಗದ ಒಂದು ಟಪ್ಪಾ ಹಾಗೂ ಒಂದು ದೃತ್ ಬಂಧಿಶ್ ಪ್ರಸ್ತುತಪಡಿಸಿದರು. ಇವರಿಗೆ ಬೆಂಗಳೂರಿನ ವ್ಯಾಸಮೂರ್ತಿ ಕಟ್ಟಿ ಸಂವಾದಿನಿಯಲ್ಲಿ ಹಾಗೂ ಗುರುಮೂರ್ತಿ ವೈದ್ಯ ತಬಲಾದಲ್ಲಿ ಸಾಥ್ ನೀಡಿದರು. ವೀಣಾ ನಾಯಕ್ ಹಾಗೂ ಸಂಗೀತಾ ಹೆಗಡೆ ತಾನ್ಪುರದಲ್ಲಿ ಸಹಕರಿಸಿದರು.
ಕೊನೆಯ ಕಾರ್ಯಕ್ರಮದಲ್ಲಿ ಪಂಡಿತ್ ಡಾ| ರಾಮ್ ದೇಶ್‌ಪಾಂಡೆಯವರು ಪಂಡಿತ್ ರವೀಂದ್ರ ಯಾವಗಲ್ ಹಾಗೂ ಗುರುಪ್ರಸಾದ್ ಹೆಗಡೆಯವರ ಸಾಥ್ ಸಂಗತ್‌ನೊಂದಿಗೆ ಅದ್ಭುತ ಸಂಗೀತ ಲೋಕದ ಸೃಷ್ಟಿಮಾಡಿದರು. ಮಾರ್‌ವಾ ರಾಗದಲ್ಲಿ ತಿಲ್ವಾಡ ಹಾಗೂ ತೀನ್‌ತಾಲ್ ಬಂಧಿಶ್ ಹಾಗೂ ತರಾನಾ, ಬಿಹಾಗ್ ರಾಗದಲ್ಲಿ ಝಪ್‌ತಾಲ್ ಹಾಗೂ ತೀನ್‌ತಾಲ್‌ನ ಬಂಧಿಶ್ ಅಲ್ಲದೆ ಬಹು ಪ್ರಸಿದ್ಧವಾದ ಸಾವರೆ ಐಜಯ್ಯೋ ಪ್ರಸುತಪಡಿಸಿದರು.
ಕೃಷ್ಣ ಮೂರ್ತಿ