Advertisement

ಸಂಸ್ಕೃತಿ-ಸಂಸ್ಕಾರ ಉಳಿವಿಗೆ ವೇದ ಪಾಠ ಅವಶ್ಯ: ನಾರಾಯಣ ಭಟ್‌

09:05 PM May 12, 2019 | Team Udayavani |

ವಿಟ್ಲ: ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ ವಸಂತ ವೇದಪಾಠ ಶಿಬಿರದ ಸಮಾರೋಪ ಸಮಾರಂಭ ಶುಕ್ರವಾರ ನಡೆಯಿತು.

Advertisement

ಅಧ್ಯಕ್ಷತೆ ವಹಿಸಿದ್ದ ಸೇವಾ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್‌ ಮಾತನಾಡಿ, ಈ ಶಿಬಿರದಲ್ಲಿ ಪಡೆದ ಶಿಕ್ಷಣವನ್ನು ಸದುಪಯೋಗಪಡಿಸಬೇಕು. ನಿರಂತರವಾಗಿ ಮುಂದುವರಿಯಬೇಕು. ಸಂಸ್ಕೃತಿ-ಸಂಸ್ಕಾರಗಳ ಉಳಿವಿಗೆ, ಜ್ಞಾನ ಸಂಪಾದನೆಗೆ ವೇದ ಪಾಠ ಅವಶ್ಯ. ಈ ಶಿಕ್ಷಣಕ್ಕೂ ಹೆತ್ತವರು ಆದ್ಯತೆ ನೀಡಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ಯು.ಎಸ್‌. ವಿಶ್ವೇಶ್ವರ ಭಟ್‌ ಮಾತನಾಡಿ, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು ಮಕ್ಕಳ ಬುದ್ಧಿಯನ್ನು ಚುರುಕುಗೊಳಿಸುತ್ತವೆ. ವೇದ ವಿದ್ಯೆಯನ್ನು ಪಡೆಯುವ ಆಸಕ್ತಿ ಹೆಚ್ಚಬೇಕು. ಆ ಮೂಲಕ ಸಮಾಜದ ಒಳಿತಾಗಬೇಕು ಎಂದರು. ವೇದ ಶಿಬಿರದ ಅಧ್ಯಾಪಕರಾದ ವಿಘ್ನೇಶ್ವರ ಭಟ್‌, ಸುಮಂತ್‌ ಹೆಗ್ಡೆ ಉಪಸ್ಥಿತರಿದ್ದರು. ಅನೂಪ್‌ ಶರ್ಮ ಸ್ವಾಗತಿಸಿ, ವೆಂಕಟಕೃಷ್ಣ ವಂದಿಸಿದರು. ಸತ್ಯನಾರಾಯಣ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next