Advertisement
ಪ್ರಣಾಳಿಕೆಯಲ್ಲಿ ಹಲವು ವಿಷಯಗಳ ಬಗ್ಗೆ ಪ್ರಸ್ತಾವಿಸಲಾಗಿದ್ದು, ಉಗ್ರವಾದದ ವಿರುದ್ಧ ಕಠಿನ ಕ್ರಮ ಕೈಗೊಳ್ಳುವುದು, ರೈತರ ಆದಾಯವನ್ನು ಮೂರು ವರ್ಷಗಳಲ್ಲಿ ದುಪ್ಪಟ್ಟುಗೊಳಿಸುವುದೂ ಸಹಿತ ವಿವಿಧ ಭರವಸೆಗಳನ್ನು ನೀಡಲಾಗಿದೆ.
Related Articles
Advertisement
ಸ್ವಾತಂತ್ರ್ಯದ ನೂರರ ಕನಸುಭಾರತ ಸ್ವಾತಂತ್ರ್ಯ ಪಡೆದು 100 ವರ್ಷ ವಾದಾಗ ಅಂದರೆ 2047ರಲ್ಲಿ ಭಾರತವು ಅಭಿ ವೃದ್ಧಿ ಹೊಂದಿದ ದೇಶವಾಗಬೇಕು ಎಂಬ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. ದೇಶದ ಅಭಿವೃದ್ಧಿಗೆ 75 ಅಂಶಗಳ ಸೂತ್ರವನ್ನು ರೂಪಿ ಸಿದ್ದು, ಇದನ್ನು 2022ರ ಒಳಗೆ ಪೂರೈಸುತ್ತೇವೆ ಎಂದರು. ಈಗಾಗಲೇ ಜನರ ಮೂಲ ಅಗತ್ಯಗಳನ್ನು ನಾವು ಪೂರೈಸಿದ್ದೇವೆ. ಇನ್ನು ನಾವು ಜನರ ನಿರೀಕ್ಷೆಗಳನ್ನು ಪೂರೈಸಲು ಶ್ರಮಿಸಲಿದ್ದೇವೆ ಎಂದು ಮೋದಿ ಹೇಳಿದರು. ಪ್ರಣಾಳಿಕೆಯ ಪ್ರಮುಖ ಅಂಶಗಳು
– ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆ. ಉಗ್ರವಾದ ಸಂಪೂರ್ಣ ನಿರ್ಮೂಲನೆ ಯಾಗುವ ವರೆಗೂ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಲು ಸೇನೆಗೆ ಮುಕ್ತ ಅನುಮತಿ – ಸೇನೆಗೆ ದಾಳಿ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಆಧುನಿಕ ಶಸ್ತ್ರಾಸ್ತ್ರ ಪೂರೈಕೆ – ಈಶಾನ್ಯ ರಾಜ್ಯಗಳಲ್ಲಿ ಅಕ್ರಮ ಒಳನುಸುಳುವಿಕೆ, ವಲಸೆ ತಡೆಯಲು ಕ್ರಮ – ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ರೈತರಿಗೆ ವಾರ್ಷಿಕ 6 ಸಾವಿರ ರೂ. ಆದಾಯ ಬೆಂಬಲ – 2022ರ ವೇಳೆಗೆ ರೈತರ ಆದಾಯ ದುಪ್ಪಟ್ಟುಗೊಳಿಸಲು ಬದ್ಧ – ಸಣ್ಣ ರೈತರಿಗೆ ಪಿಂಚಣಿ ಯೋಜನೆ ಘೋಷಣೆ – ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 1 ಲಕ್ಷ ರೂ.ವರೆಗೆ ಅಲ್ಪಾವಧಿ ಕೃಷಿ ಸಾಲ – ರಕ್ಷಣಾ ಸಲಕರಣೆಗಳ ದೇಸಿ ಉತ್ಪಾದನೆ ಪ್ರೋತ್ಸಾಹಿಸಿ ರಕ್ಷಣೆಯಲ್ಲಿ ಮೇಕ್ ಇನ್ ಇಂಡಿಯಾಗೆ ಹೆಚ್ಚಿನ ಉತ್ತೇಜನ – ರಾಮಮಂದಿರ ನಿರ್ಮಾಣಕ್ಕೆ ಬದ್ಧ. ಈ ನಿಟ್ಟಿನಲ್ಲಿ ತ್ವರಿತ ಕ್ರಮ ಕೈಗೊಳ್ಳಲು ಸರ್ವ ಪ್ರಯತ್ನ – ಕಲಂ 370 ರದ್ದುಗೊಳಿಸುವ ನಿಟ್ಟಿನಲ್ಲಿ ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ – ಕಾಶ್ಮೀರಿ ಪಂಡಿತರನ್ನು ಸುರಕ್ಷಿತವಾಗಿ ವಾಪಸ್ ಕರೆಸಿ ನೆಲೆ ಒದಗಿಸಿಕೊಡುವ ಪ್ರಯತ್ನ – 2022ರ ವೇಳೆಗೆ ಆಶ್ರಯ ಅಡಿಯಲ್ಲಿ ಎಲ್ಲ ಕುಟುಂಬಗಳಿಗೂ ಪಕ್ಕಾ ಮನೆ – 2024ರ ವೇಳೆಗೆ ಸುಜಲ ಯೋಜನೆ ಅಡಿಯಲ್ಲಿ ಎಲ್ಲ ಮನೆಗಳಿಗೂ ಪೈಪ್ ಮೂಲಕ ನೀರು – ಮಾಹಿತಿಯಿಂದ ಸಶಕ್ತೀಕರಣ – 2022ರ ವೇಳೆಗೆ ಪ್ರತಿ ಗ್ರಾಮ ಪಂಚಾಯತ್‌ಗೂ ಹೈ ಸ್ಪೀಡ್ ಫೈಬರ್ ನೆಟ್‌ವರ್ಕ್ ಸಂಪರ್ಕ – ರಸ್ತೆಯಿಂದ ಸಮೃದ್ಧಿ – ಶಿಕ್ಷಣ, ಆರೋಗ್ಯ ಕೇಂದ್ರ ಮತ್ತು ಮಾರುಕಟ್ಟೆಗಳಿಗೆ ಹಳ್ಳಿಗಳನ್ನು ಸಂಪರ್ಕಿಸುವ ಗ್ರಾಮೀಣ ರಸ್ತೆ ಸುಧಾರಣೆ – ಸ್ವತ್ಛತೆಯಿಂದ ಸಂಪನ್ನತೆ – ಶೇ. 100ರಷ್ಟು ದ್ರವ ತ್ಯಾಜ್ಯ ವಿಲೇ ಮತ್ತು ತ್ಯಾಜ್ಯ ನೀರಿನ ಮರುಬಳಕೆ 370ನೇ ವಿಧಿಯನ್ನು ರದ್ದುಗೊಳಿಸಿದರೆ ಕಾಶ್ಮೀರ ದಲ್ಲಿ ಯಾರೂ ರಾಷ್ಟ್ರಧ್ವಜ ವನ್ನು ಹಾರಿಸಲಾಗದು. ಹೇಗೆ ರದ್ದು ಮಾಡುತ್ತಾರೋ ನೋಡುತ್ತೇನೆ. ಒಂದು ವೇಳೆ 370ನೇ ವಿಧಿ ರದ್ದು ಗೊಳಿ ಸಿದರೆ ಯಾರು ಭಾರತದ ರಾಷ್ಟ್ರಧ್ವಜ ಹಾರಿಸುತ್ತಾರೆ ಎಂಬುದನ್ನು ನಾನು ನೋಡಬೇಕಿದೆ. ಜನರ ಹೃದಯ ವನ್ನು ಗೆಲ್ಲುವಂಥ ಕೆಲಸ ಮಾಡಿ. ಹೃದಯ ಒಡೆಯಬೇಡಿ.
– ಫಾರೂಕ್ ಅಬ್ದುಲ್ಲ