Advertisement

ಮೂಲ್ಕಿಯಲ್ಲಿ ಶ್ರೀ ರಾಮನವಮಿ ಉತ್ಸವ

10:39 PM Apr 13, 2019 | Team Udayavani |

ಮೂಲ್ಕಿ: ಶ್ರೀ ಶಿರಡಿ ಸಾಯಿಬಾಬಾ ಮಂದಿರ ಕೊಲಕಾಡಿ ಮೂಲ್ಕಿ ಇದರ ಅಶ್ರಯದಲ್ಲಿ ಶನಿವಾರ ವೈಭವದ ಶ್ರೀ ರಾಮನವಮಿ ಉತ್ಸವ ಜರಗಿತು.

Advertisement

ಬೆಳಗ್ಗೆ ವಿವಿಧ ಆರತಿ, ಪೂಜೆ ಹಾಗೂ ಹವನ, ಭಜನೆ ಕಾರ್ಯಕ್ರಮಗಳು ನಡೆದು ಮಧ್ಯಾಹ್ನ ಮಹಾ ಮಂಗಳಾರತಿ ಬಳಿಕ ಅನಂತರ ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು.ಭಜನ ಕಾರ್ಯಕ್ರಮ ಪಾಲಕಿ ಉತ್ಸವದ ನಗರ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಧೂಪಾರತಿ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ವಿವಿಧ ಭಜನ ಮಂಡಳಿಗಳು ನಡೆಸಿದ ಆಕರ್ಷಕ ಭಜನ ಕಾರ್ಯಕ್ರಮದಲ್ಲಿ ಪರಿಸರದ ಹತ್ತಕ್ಕೂ ಹೆಚ್ಚಾ ಮಂಡಳಿಗಳ ತಂಡದ ಕಾರ್ಯಕ್ರಮ ಭಕ್ತ ಜನ ಮೆಚ್ಚುಗೆ ಪಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next