ವಿಜಯಪುರ: ಯೋಗ ಮಾಡಿದರೆ ಅನಾರೋಗ್ಯ ದೂರ ಎಂಬ ಮಾತಿದೆ. ಇಲ್ಲೊಬ್ಬ ಸಾಧಕಿಯೊಬ್ಬರು ಸುಮಾರು 25 ವರ್ಷಗಳಿಂದಲೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉಚಿತವಾಗಿ ಯೋಗ ಶಿಕ್ಷಣವನ್ನು ಹೇಳಿ ಕೊಡುತ್ತಿದ್ದು ಪ್ರಶಂಸೆಗೂ ಪಾತ್ರ ವಾಗಿದ್ದಾರೆ.
ನಗರದ 11ನೇ ವಾರ್ಡ್‌ನ ಧರ್ಮ ರಾಯ ಸ್ವಾಮಿ ದೇವಾಲಯ ರ ಸ್ತೆ ನಿವಾಸಿ ರಮಾ ನಟರಾಜ್ ಯೋಗ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸುಮಾರು 62 ವರ್ಷ ವಯಸ್ಸಿನವರಾ ಗಿರುವ ಇವರು, ಈಗಲೂ ಲವ ಲವಿಕೆಯಿಂದ ಯೋಗಾಭ್ಯಾಸದ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ.
“ಯೋಗಾಭ್ಯಾಸ ಮಾಡಿದಷ್ಟೂ ಉತ್ತಮ ಆರೋಗ್ಯ ಲಭಿಸುತ್ತದೆ. ಧ್ಯಾನದಿಂದ ಮನಃ ಶಾಂತಿಯೂ ಸಿಗಲಿದೆ’ ಎನ್ನುವ ಯೋಗ ಶಿಕ್ಷಕಿ ರಮಕ್ಕ, ಮನೋ ನಿಯಂತ್ರಣ, ಇಂದ್ರಿಯ ನಿಗ್ರಹ, ಅಧಿಕ ಕಾರ್ಯೋತ್ಸಾಹ ಮೊದಲಾದ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬಹುದು ಎನ್ನುತ್ತಾರೆ.
ಗವಿಯಲ್ಲಿ ವಾಸ: ಸಿದ್ಧರಬೆಟ್ಟದಲ್ಲಿ 5 ದಿನ ಕಚ್ಚಾ ಆಹಾರದ ಸೇವನೆ, ಗವಿಯಲ್ಲಿ ವಾಸ, ತಣ್ಣೀರಿನ ಸ್ನಾನ, 5 ದಿನ ಸಂಪೂರ್ಣ ಮೌನಾಚರಣೆ ಹೀಗೆ ಪಡೆದ ಶಿಕ್ಷಣವನ್ನು ಬೇರೆ ಬೇರೆ ಊರುಗಳಿಗೆ ಹೋಗಿ ಶಿಕ್ಷಣ ನೀಡುತ್ತಾರೆ. ಈ ವೇಳೆ, ಊರಿನ ಮುಖಂಡರು, ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಪ್ರಯಾಣ ಭತ್ಯೆ ಮತ್ತು ಪ್ರಸಾದದ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಮುಖ್ಯ ಕೇಂದ್ರ ತುಮಕೂರಿನಲ್ಲಿ 50 ವರ್ಷದಿಂದ ಇದ್ದು ಶ್ರೀ ರಾಮಸ್ವಾಮಿ ಅಣ್ಣನವರು ಸಾವಿರಾರು ಜನರನ್ನು ಯೋಗ ಶಿಕ್ಷಕರನ್ನಾಗಿ ತಯಾರು ಮಾಡಿದ್ದಾರೆ. ಹಾಗೆಯೇ ಬಿಕೆಎಸ್ ಅಯ್ಯಂಗಾರ್ ಅವರು ನಮಗೆ 2 ಬಾರಿ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಶಿಬಿರ ತೆಗೆದುಕೊಂಡಿದ್ದರು. ಯೋಗದಲ್ಲಿ ಸಾಧನೆ ಮಾಡಿದ ಓಂಕಾರ್, ಮುರಳೀಧರ್, ರಾಘವೇಂದ್ರ ಶೆಣೈ ಇವರೊಂದಿಗೆ ಯೋಗ ಶಿಬಿರಗಳಲ್ಲಿ ಭಾಗವಹಿಸುವುದು ನಿಜಕ್ಕೂ ಉತ್ತಮ ಅನುಭವ ಹಾಗೂ ನಮಗೆ ಮತ್ತಷ್ಟು ಉತ್ತೇಜನ ನೀಡುತ್ತದೆ ಎಂದು ತಿಳಿಸಿದ್ದಾರೆ.
ಯೋಗ ಶಿಕ್ಷ ಕರಾಗಲು ಬಯಸಿದರೆ ಮಾರ್ಗದರ್ಶನವನ್ನೂ ನೀಡುತ್ತಾರೆ : ಯೋಗ ಶಿಕ್ಷಕಿಯಾಗಿ ರಾಯಚೂರು, ದಾವಣಗೆರೆ, ತುಮಕೂರು, ಮೈಸೂರು, ಹುಬ್ಬಳ್ಳಿ, ದೇವನಹಳ್ಳಿ, ದೊಡ್ಡಬಳ್ಳಾಪುರ ಹೀಗೆ ಸುಮಾರು 20 ಜಿಲ್ಲೆ ಸೇರಿ ತಾಲೂ ಕುಗಳಲ್ಲಿಯೂ ಯೋಗ ಶಿಕ್ಷಕಿಯಾಗಿ ರಮಕ್ಕ ಉಚಿತ ಸೇವೆ ಸಲ್ಲಿಸಿದ್ದಾರೆ. ಸನ್ಮಾನ, ಅಭಿನಂದನೆ ಸೇರಿ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. ಶ್ರೀ ಪತಂಜಲಿ ಯೋಗ ಶಿಕ್ಷಣ ವತಿಯಿಂದ ನೀಡುವ ಯೋಗ ಶಿಕ್ಷಣ ಉಚಿತವಾಗಿ ಇರುವು ದರಿಂದ ವಿಜಯಪುರದಲ್ಲಿ 25 ವರ್ಷ ದಿಂದಲೂ ಸರ್ಕಾರಿ ಮಾದರಿ ಬಾಲಕಿ ಯರ ಶಾಲೆಯಲ್ಲಿ ಯೋಗಾಭ್ಯಾಸಕ್ಕೆ ಸ್ಥಳಾವಕಾಶ ನೀಡಿದ್ದಾರೆ. ಯೋಗಾ ಭ್ಯಾಸಕ್ಕೆ ಬರುವವರು ಶಿಕ್ಷಕರಾಗಲು ಬಯಸಿದರೆ ಅವರಿಗೆ ಪ್ರಾಂತ ಪ್ರಶಿಕ್ಷಣ ನೀಡಿ ಮುಂದಿನ ಹಂತ ಪೂರೈಸಿಕೊಳ್ಳಲು ಮಾರ್ಗದರ್ಶನವನ್ನೂ ನೀಡುತ್ತಾರೆ.
ಯೋಗ ಶಿಕ್ಷಣವನ್ನು ಹೀಗಳೆಯದಿರಿ… : ಯೋಗ ಶಿಕ್ಷಣ ಸಾಂಪ್ರದಾಯಿಕ ಶಿಕ್ಷಣವೆಂಬ ಕಾರಣದಿಂದ ಅನೇಕರು ಹೀಗಳೆ ಯುವುದು ಉಂಟು. ಆದರೆ, ಯೋಗದ ಮಹತ್ವ ಅರಿತ ಅನೇಕ ದೇಶಗಳು ಯೋಗ ಶಿಕ್ಷಣವನ್ನು ತಮ್ಮ ನೆಲದಲ್ಲಿ ಅಳವಡಿಸಿಕೊಂಡಿವೆ. ಇಂದು ಭಾರತ ಅನೇಕ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಯೋಗ ಶಿಕ್ಷಣವನ್ನು ಕಡ್ಡಾಯಗೊಳಿಸಿದೆ. ಯೋಗಾಭ್ಯಾಸ ಮಾಡಿದರೆ, ಇಡೀ ದೇಶ ಎದುರಿಸುತ್ತಿರುವ ಅನೇಕ ನೈತಿಕ ಸವಾಲುಗಳನ್ನು ಎದುರಿಸಲು ಸಾಧ್ಯವೆಂದು ಯೋಗ ಶಿಕ್ಷಕಿ ರಮಾ ನಟರಾಜ್ ತಿಳಿಸಿದ್ದಾರೆ.