ಮಹಾನಗರ: ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಡಿಜಿಟಲ್ ಮಾಧ್ಯಮಗಳನ್ನೇ ಬಳಸಿ ಹಲವಾರು ಪ್ರತಿಭೆಗಳು ಅಭಿವ್ಯಕ್ತಿಗೊಂಡಿವೆ. ಕರಾ ವಳಿಯ ಗಂಡು ಕಲೆ ಯಕ್ಷಗಾನವೂ ಆನ್‌ಲೈನ್ ಟಚ್ ಪಡೆದುಕೊಂಡಿದ್ದು, ಯಶಸ್ವಿಯಾಗಿದೆ. ಉಡುಪಿಯಿಂದ ರಾಮ, ಯುಎಸ್‌ನಿಂದ ಲಕ್ಷ್ಮಣ ಪಾತ್ರ ನಿರ್ವಹಣೆ ಮಾಡಿರುವುದು ವಿಶೇಷವಾಗಿದೆ.
ಸಾಂಪ್ರದಾಯಿಕ ಯಕ್ಷಗಾನ ತಾಳಮದ್ದಳೆ ಕಲೆಯನ್ನು ದೇಶ- ವಿದೇಶಗಳಲ್ಲಿರುವ ಕರಾವಳಿಯ ಕಲಾ ವಿದರು ಮೀಟಿಂಗ್ ಆ್ಯಪ್‌ವೊಂದನ್ನು ಬಳಸಿ ಕೊಂಡು ನಿರ್ವಹಿಸಿದ್ದು, ಫೇಸುºಕ್ ಮತ್ತು ಯೂಟ್ಯೂಬ್‌ನಲ್ಲಿ ಹರಿಯಬಿಟ್ಟಿದ್ದಾರೆ.
ರಾಮಾಯಣದಲ್ಲಿ ಬರುವ “ಪಾದುಕಾ ಪ್ರದಾನ’ ಕಥಾ ಭಾಗವನ್ನು ತಾಳಮದ್ದಳೆ ರೂಪದಲ್ಲಿ ಲೈವ್ ಆಗಿ ಪ್ರದರ್ಶಿಸುವ ಮೂಲಕ ಮೆಚ್ಚುಗೆ ಗಳಿಸಿದ್ದಾರೆ. ರಾಮನ ಪಾತ್ರವನ್ನು ವಾಸುದೇವ ರಂಗಾಭಟ್ ಉಡುಪಿಯಿಂದ ಪ್ರಸ್ತುತ ಪಡಿಸಿದರೆ, ಲಕ್ಷ್ಮಣನ ಪಾತ್ರವನ್ನು ಅಮೆರಿಕದ ಕ್ಯಾಲಿಫೋರ್ನಿಯಾದಿಂದ ಶ್ರೀಪಾದ್ ಹೆಗ್ಡೆ ಪ್ರಸ್ತುತ ಪಡಿಸಿದ್ದಾರೆ.
ಮೈಸೂರಿನಿಂದ ಗಣಪತಿ ಭಟ್ ಸಂಕದಗುಂಡಿ ಅವರು ಭರತನ ಪಾತ್ರ ನಿರ್ವಹಿಸಿದ್ದರು. ಉತ್ತರ ಕನ್ನಡದಲ್ಲಿರುವ ಅನಂತ ಹೆಗ್ಡೆ ದಂತಳಿಗೆ ಭಾಗವತಿಕೆಯನ್ನೂ, ಗಣಪತಿ ಭಾಗ್ವತ್ ಕವಳೆ ಮದ್ದಳೆ ವಾದಕರಾಗಿ ಗಮನ ಸೆಳೆದಿದ್ದಾರೆ.
ಸನಾತನ ಯಕ್ಷ ರಂಗ ಸಾಂಸ್ಕೃತಿಕ ಕೇಂದ್ರ ಮತ್ತು ನಾರ್ದರ್ನ್ ಕ್ಯಾಲಿಫೋರ್ನಿಯಾ ಹವ್ಯಕ ಗ್ರೂಪ್ ಸಂಸ್ಥೆಗಳ ಆಶ್ರಯದಲ್ಲಿ ಈ ಕಾರ್ಯಕ್ರಮ ಜೂ. 13ರಂದು ರಾತ್ರಿ 8.45ರಿಂದ ಎರಡು ಗಂಟೆ ಕಾಲ ನಡೆದಿದ್ದು, ಯಕ್ಷಾಭಿಮಾನಿಗಳುಹೊಸ ವೇದಿಕೆಯ ತಾಳ ಮದ್ದಳೆಯನ್ನು ಮೆಚ್ಚಿದ್ದಾರೆ