Advertisement

2023ಕ್ಕೆ ಮಂದಿರ ಲೋಕಾರ್ಪಣೆ

11:29 PM Aug 04, 2021 | Team Udayavani |

ವಿಶ್ವದೆಲ್ಲೆಡೆ ಇರುವ ಸಮಸ್ತ ಹಿಂದೂಗಳು ತದೇಕಚಿತ್ತರಾಗಿ ಗಮನಿಸುತ್ತಿರುವ ಅಯೋಧ್ಯೆಯ ಶ್ರೀರಾಮಮಂದಿರದ 2023ರ ವರ್ಷಾಂತ್ಯಕ್ಕೆ ಪೂರ್ಣಗೊಳ್ಳಲಿದೆ.  ಅದೇ ವರ್ಷ ಡಿಸೆಂಬರ್‌ನಲ್ಲಿ ಲೋಕಾರ್ಪಣೆಗೊಳ್ಳಲಿದೆ. ಸಮಸ್ತ ಭಕ್ತರಿಗೆ ಕೇಂದ್ರ ಸರಕಾರವೇ ಈ ಸಿಹಿ ಸುದ್ದಿ ನೀಡಿದೆ. ಇದೇ ಆ. 5ಕ್ಕೆ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಿ ಒಂದು ವರ್ಷ ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ ಈವರೆಗೆ ಮಂದಿರ ನಿರ್ಮಾಣ ಜಾಗದಲ್ಲಿರುವ ಆಗಿರುವ ಕಾಮಗಾರಿಗಳ ಪಕ್ಷಿನೋಟ ಇಲ್ಲಿದೆ. ಅಕ್ಟೋಬರ್‌ನಲ್ಲಿ ದೇಗುಲ ನಿರ್ಮಾಣಕ್ಕೆ ಅಗತ್ಯವಾಗಿರುವ ತಳಹ‌ದಿ ನಿರ್ಮಾಣ ಕಾರ್ಯ ಮುಕ್ತಾಯವಾಗಲಿದೆ.

Advertisement

ಹೇಗಿರಲಿದೆ ದೇಗುಲ?  :

ದಶಕಗಳ ಹಿಂದೆ ಪ್ರಸ್ತಾವನೆಗೊಂಡಿದ್ದ ರಾಮಮಂದಿರ ವಿನ್ಯಾಸಕ್ಕಿಂತ ಈಗ ಕಟ್ಟುತ್ತಿರುವ ದೇಗುಲ ದುಪ್ಪಟ್ಟು ದೊಡ್ಡದಿರಲಿದೆ. 161 ಅಡಿ ಎತ್ತರವಿರಲಿರುವ ಈ ದೇವಸ್ಥಾನವು ಮೂರು ಅಂತಸ್ತು ಹಾಗೂ ಐದು ಗುಮ್ಮಟಗಳನ್ನು ಒಳಗೊಂಡಿರಲಿದೆ. ಇಡೀ ದೇಗುಲವನ್ನು ನಾಗರ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗುತ್ತಿದೆ.

ನೆಲ ಅಂತಸ್ತಿನಲ್ಲಿ “ರಾಮ್‌ ದರ್ಬಾರ್‌’ :

2023ರ ವರ್ಷಾಂತ್ಯಕ್ಕೆ ಲೋಕಾರ್ಪಣೆಗೊಳಿಸಲು ಉದ್ದೇಶಿಸಲಾಗಿ ರುವ ಶ್ರೀರಾಮ ಮಂದಿರದ ನೆಲ ಅಂತಸ್ತಿನಲ್ಲಿ ಶ್ರೀರಾಮ ದೇಗುಲದ ಗರ್ಭಗುಡಿ ಹಾಗೂ ಐದು ಮಂಟಪಗಳಿರುತ್ತವೆ. ಈಗ ತಾತ್ಕಾಲಿಕ ದೇಗುಲದಲ್ಲಿರುವ ರಾಮಲಲ್ಲಾ ಮೂರ್ತಿಯನ್ನು 2023ರಲ್ಲಿ ಇದೇ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ.

Advertisement

2023ರಲ್ಲಿ  ನೆಲ ಅಂತಸ್ತು ಉದ್ಘಾಟನೆ :

  • 2025 ಪೂರ್ತಿ ದೇಗುಲ ಲೋಕಾರ್ಪಣೆಗೊಳ್ಳುವ ವರ್ಷ
  • 101ಎಕರೆ ದೇಗುಲದ ಪರಿಷ್ಕೃತ ವ್ಯಾಪ್ತಿ
  • 67ಎಕರೆ ಈ ಹಿಂದಿನ ಯೋಜನೆಯಲ್ಲಿದ್ದ ದೇಗುಲದ ವ್ಯಾಪ್ತಿ
  • 84,600ಚ. ಅಡಿ ದೇಗುಲದ ವಿಸ್ತೀರ್ಣ
  • 1000 ಕೋಟಿ ರೂ. ಪೂರ್ಣ ದೇಗುಲ ನಿರ್ಮಾಣಕ್ಕೆ ಆಗುವ ಅಂದಾಜು ಖರ್ಚು
  • 3000 ಕೋಟಿ ರೂ. ಶ್ರೀರಾಮಮಂದಿರ ಪುಣ್ಯಕ್ಷೇತ್ರ ಟ್ರಸ್ಟ್‌ಗೆ ಬಂದಿರುವ ದೇಣಿಗೆ
  • 10 ಲಕ್ಷ ರಾಮನವಮಿಗೆ ರಾಮಮಂದಿರ ದಲ್ಲಿ ಸೇರಬಹುದಾದ ಭಕ್ತರ ಅಂದಾಜು.

ವರ್ಷದಿಂದ ಆಗಿರುವ ಕಾಮಗಾರಿಗಳೇನು?  :

  • ದೇಗುಲ ಕಟ್ಟುವ ಜಾಗದಲ್ಲಿ ನೆಲದ ಮೇಲ್ಮಟ್ಟದಿಂದ ಕಳಗೆ 12 ಮೀಟರ್‌ನಷ್ಟಿದ್ದ ಅವಶೇಷಗಳ ತೆರವಿಗಾಗಿ ದೇಗುಲ ನಿರ್ಮಾಣ ಪ್ರಾಂತ್ಯದಲ್ಲಿ ಸರ್ವೇ.
  • ಅಂತಸ್ತಿಗಾಗುವಷ್ಟಿದ್ದ ಅವಶೇಷಗಳ ತೆರವು.
  • ಸಡಿಲ ಮಣ್ಣಿರುವ ಭೂಮಿಯ ಅಡಿಯಲ್ಲಿ ದೈತ್ಯ ಕಟ್ಟಡದ ಭಾರವನ್ನು ತಡೆದುಕೊಳ್ಳುವಂಥ “ವೈಬ್ರೋ ಪೈಲ್ಸ್‌’ ಬಳಕೆ.
  • ಟ್ರಸ್ಟ್‌ನ ಸೂಚನೆಯಂತೆ ದೇಗುಲ ನಿರ್ಮಾಣದ ಜಾಗದಲ್ಲಿ ಉತVನನ ಆರಂಭ. 70 ಲಕ್ಷ ಕ್ಯೂಬಿಕ್‌ ಅಡಿಗಳಷ್ಟು ಮಣ್ಣು ಉತ್ಖನನ.
  • ದೇಗುಲ ನಿರ್ಮಾಣಕ್ಕಾಗಿ ತೋಡಿದ ಜಾಗದಲ್ಲಿ 40 ಪದರಗಳ ಕಾಂಕ್ರೀಟ್‌ ಬೆಡ್‌ ನಿರ್ಮಾಣ. ಪ್ರತೀ ಪದರ 8 ಇಂಚು ದಪ್ಪ.
  • ಈವರೆಗೆ ಒಟ್ಟಾರೆ ಫಿಲ್ಲಿಂಗ್‌ ಕಾಮಗಾರಿಯಲ್ಲಿ ಶೇ. 50ರಷ್ಟು ಪೂರ್ಣ (70 ಲಕ್ಷ ಕ್ಯೂಬಿಕ್‌ ಮೀಟರ್‌) ಫಿಲ್ಲಿಂಗ್‌ ಪೂರ್ಣ. ಈ ಪ್ರಕ್ರಿಯೆ ಇನ್ನೂ ಪ್ರಗತಿಯಲ್ಲಿ. ಸೆ. 15ಕ್ಕೆ ಮುಗಿಯುವ ಸಾಧ್ಯತೆ. ಫಿಲ್ಲಿಂಗ್‌ಗಾಗಿ ರೋಲರ್‌ ಕಾಂಪ್ಯಾಕ್ಟೆಡ್‌ ಕಾಂಕ್ರೀಟ್‌ ಬಳಕೆ.
  • ಫಿಲ್ಲಿಂಗ್‌ ಮುಗಿದ ಮೇಲೆ ಇಡೀ ದೇಗುಲ ನಿರ್ಮಾಣ ಜಾಗದಲ್ಲಿ 7 ಅಡಿ ದಪ್ಪವಿರುವ ಮತ್ತೂಂದು ಕಾಂಕ್ರೀಟ್‌ ಪದರ ನಿರ್ಮಾಣ. ಅದರ ಮೇಲೆ ಕಬ್ಬಿಣ-ಸಿಮೆಂಟ್‌ ಸೇರಿಸಿ ಮಾಡುವ ಬೀಮ್‌ಗಳ ನಿರ್ಮಾಣ. ಪ್ರತಿಯೊಂದು ಬೀಮ್‌, 16 ಅಡಿಯಷ್ಟು ದಪ್ಪ.
  • ದೇಗುಲ ನಿರ್ಮಾಣದ ಜಾಗದಲ್ಲಿ 66 ಎಕರೆಯಲ್ಲಿ ನಾನಾ ಸೌಕರ್ಯ ನಿರ್ಮಿಸುವ ಕಾಮಗಾರಿಗೂ ಚಾಲನೆ.
Advertisement

Udayavani is now on Telegram. Click here to join our channel and stay updated with the latest news.

Next