Advertisement

Ram; ಇಸ್ಲಾಂ ರಾಷ್ಟ್ರದಲ್ಲೂ ರಾಮಾಯಣ ಜೀವಂತ!

12:43 AM Jan 18, 2024 | Team Udayavani |

ಇಸ್ಲಾಂ ರಾಷ್ಟ್ರ ಇಂಡೋನೇಷ್ಯಾದಲ್ಲಿ ರಾಮಾಯಣ ಅವಿಭಾಜ್ಯ ಅಂಗ. ಇಲ್ಲಿನ ಸಂಸ್ಕೃತಿಯಲ್ಲಿಯೂ ರಾಮಾಯಣದ ಛಾಯೆಯನ್ನು ಕಾಣಬಹುದು. ಜವಾನೀಜ್‌, ಬಾಲಿನೀಜ್‌ ಹಾಗೂ ಸುಂಡಾನೀಜ್‌ ಜನಾಂಗದಲ್ಲಿ ರಾಮಾಯಣವನ್ನು ಹೆಚ್ಚಾಗಿ ಪಾಲಿಸಲಾಗುತ್ತದೆ. ರಾಮಾಯಣವನ್ನು ಇಲ್ಲಿ ಆಧ್ಯಾತ್ಮಿಕ ಹಾಗೂ ನೈತಿಕ ಜೀವನದ ಮಾರ್ಗದರ್ಶಕವಾಗಿ ಕಾಣಲಾಗುತ್ತದೆ. ವೆಯಾಂಗ್‌ ಸಂಪ್ರದಾಯದ ಹಾಗೂ ಇನ್ನಿತರ ಸಾಂಪ್ರದಾಯಿಕ ನೃತ್ಯಗಳಲ್ಲೂ ರಾಮಾಯಣವನ್ನು ಬಳಸಲಾಗುತ್ತದೆ.

Advertisement

ಇಂಡೋನೇಷ್ಯಾದಲ್ಲಿ ಇಸ್ಲಾಂ ಧರ್ಮಿಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿ ಇಸ್ಲಾಂ ಹಾಗೂ ಬೌದ್ಧ ಧರ್ಮ ಬರುವ ಮೊದಲೇ ಹಿಂದೂ ಧರ್ಮವಿತ್ತಂತೆ. ಭಾರತದಿಂದ ಇಲ್ಲಿಗೆ ಬರುತ್ತಿದ್ದ ವ್ಯಾಪಾರಸ್ಥರು, ಸೈನಿಕರು ಹಾಗೂ ಕವಿಗಳಿಂದ ಇಲ್ಲಿ ರಾಮಾಯಣದ ಪರಿಚಯವಾಯಿತು. ರಾಮಾಯಣದ ಹಲವು ರೂಪಾಂತರಗಳನ್ನು ಕಾಣಬಹುದು. ಇಲ್ಲಿನ ಜವಾನೀಜ್‌ನಲ್ಲಿರುವ ಯೋಗೀಶ್ವರ್‌ ಎಂಬ ವ್ಯಕ್ತಿ ಬರೆದ ಕಾಕಾವಿನ್‌ ರಾಮಾಯಣವನ್ನು ಅತೀ ಹಳೆಯ ರಾಮಾಯಣ ಎಂದು ಹೇಳಲಾಗುತ್ತದೆ. ಇದನ್ನು ಅಂದಾಜು ಕ್ರಿ.ಶ.870ರಲ್ಲಿ ಮಧ್ಯ ಜಾವಾ ಭಾಷೆಯಲ್ಲಿ ರಚಿಸಲಾಯಿತು ಎನ್ನಲಾಗುತ್ತದೆ. ಕಾಕಾವಿನ್‌ ರಾಮಾಯಣವು 6ನೇ ಅಥವಾ 7ನೇ ಶತಮಾನದಲ್ಲಿ ಭಾರತೀಯ ಕವಿ ಭಕ್ತಿಕಾವ್ಯ ರಚಿಸಿದ ರಾವಣ ವಧದ ಆಧಾರಿತವಾಗದೆ. ಪೂರ್ವ ಜಾವಾದ ಜನರು ಸುಮಾರು 1200 ಆವೃತ್ತಿಯ ರಾಮಾಯಣವನ್ನು ಹೊಂದಿದ್ದಾರೆ ಎಂದು ಹೇಳಲಾಗಿದೆ. ಕಾಕಾವಿನ್‌ ರಾಮಾಯಣವನ್ನು ಅನಂತರ ದಿನದಲ್ಲಿ ಬಾಲಿ ದ್ವೀಪದಲ್ಲಿ ಕೊಂಚ ಬದಲಾವಣೆಗಳೊಂದಿಗೆ ಅಳವಡಿಸಿಕೊಳ್ಳಲಾಯಿತು. ಇದನ್ನು ಬಾಲಿನಿ ರಾಮಕಾವಕಾ ಎಂದು ಕರೆಯಲಾಯಿತು.

ಕಾಕಾವಿನ್‌ ರಾಮಾಯಣವು ಭಾರತದ ರಾಮಾಯಣದ ಬಹುತೇಕ ಪಾತ್ರಗಳನ್ನೇ ಹೊಂದಿದ್ದರು, ಕೆಲವು ಜವಾನೀಜ್‌ ದೇವತೆಗಳನ್ನು ಹೊಂದಿದೆ. ಅಲ್ಲದೇ ಸೀತೆ ಅಪಹರಣವಾದ ಸಂದರ್ಭ ರಾಮ ರಕ್ಷಣೆಗೆ ಕಾಯದೇ ಲಂಕಾದ ರಾಕ್ಷಸರೊಂದಿಗೆ ಅವಳೇ ಹೋರಾಡಿದ್ದಳು ಎಂದು ಕಥೆ ಹೇಳುತ್ತದೆ.

ಮಧ್ಯ ಜಾವಾದಲ್ಲಿನ ಚಂಡಿ ಶಿವ ಹಾಗೂ ಚಂಡಿ ಬ್ರಹ್ಮ ದೇವಾಲಯದಲ್ಲಿ ಮೊದಲ ಬಾರಿಗೆ ರಾಮಾಯಣವನ್ನು ಕಲ್ಲಿನಲ್ಲಿ ಕೆತ್ತಲಾಗಿದೆ. ಇಲ್ಲಿನ ಸ್ಥಳೀಯ ಭಾಷೆಯಲ್ಲಿ ಇದನ್ನು ಲಾರಾ ಜೋಂಗಗೆಗ್‌ ಎಂದು ಕರೆಯಲಾಗುತ್ತದೆ.

ಇಲ್ಲಿನ ಸಂಸ್ಕೃತಿ, ನೃತ್ಯ, ಸಂಪ್ರದಾಯದಲ್ಲೂ ರಾಮಾಯಣ ಕಾಣಸಿಗುತ್ತದೆ. ಇಲ್ಲಿನ ವಯಾಂಗ್‌ ಬೊಂಬೆಯಾಟದಲ್ಲಿ ರಾಮಾಯಣದ ಕಥೆಗಳನ್ನು ಹೇಳಲಾಗುತ್ತದೆ. ಬಾಲಿನೀಸ್‌ ಕೆಕಾಕ್‌ ನೃತ್ಯದಲ್ಲಿ ರಾಮಾಯಣ ಕಥೆಯನ್ನು ವಿಷಯವಾಗಿ ಆಧರಿಸಿ ನೃತ್ಯದ ಮೂಲಕ ಹೇಳಲಾಗುತ್ತದೆ.

Advertisement

ಆಯುಂಗ್‌ ನದಿಯ ದಡದಲ್ಲಿರುವ ಕಲ್ಲಿನಲ್ಲಿ ರಾಮಾಯಣವನ್ನು ಕೆತ್ತಲಾಗಿದೆ. ವಿಷ್ಣುವಿನ ಅವತಾರ ರಾಮ, ರಾಮ ಸೀತಾರ ಮದುವೆ, ವನವಾಸದ ಕಥೆ, ಸೀತಾ ಅಪಹರಣ ಹಾಗೂ ರಾಮ-ರಾವಣರ ಯುದ್ಧಗಳ ಚಿತ್ರಗಳನ್ನು ಕೆತ್ತಲಾಗಿದೆ. ಇಲ್ಲಿ ಇಂದಿಗೂ ಭಾರತೀಯ ಮೂಲದ ಹೆಸರುಗಳನ್ನು ಇಡಲಾಗುತ್ತದೆ. ಸಂವಿಧಾನ, ಸರಕಾರದ ಇಲಾಖೆಗಳಲ್ಲೂ ಭಾರತೀಯತೆಯ ಛಾಪು ಕಾಣಸಿಗುತ್ತದೆ. ಇಲ್ಲಿನ ಅತ್ಯಂತ ಪ್ರಾಚೀನ ದೇಗುಲ ಪ್ರಾಂಬಣನ್‌ನಲ್ಲಿ ನಿತ್ಯವೂ ರಾಮಾಯಣದ ರೂಪಕವನ್ನು ಪ್ರದರ್ಶಿಸಲಾಗುತ್ತದೆ. ರಾಮಾಯಣದ ರಾಮ, ಸೀತೆ ಹಾಗೂ ಹನುಮಾನ್‌ನ ಅಂಚೆಚೀಟಿಗಳನ್ನು ಇಂಡೋನೇಷ್ಯಾ ಹೊಂದಿದೆ.

ರಾಮನ ಅಕ್ಕ ಶಾಂತಾ!
ರಾಮನ ತಮ್ಮಂದಿರಾದ ಲಕ್ಷ್ಮಣ, ಭರತ, ಶತ್ರುಘ್ನರ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಆದರೆ ಈ ನಾಲ್ವರು ಸಹೋದರರಿಗೆ ಅಕ್ಕನೋರ್ವಳು ಇದ್ದ ಳು ಎಂಬ ಬಗ್ಗೆ ಯಾರಿಗೂ ಅಷ್ಟೇನೂ ಮಾಹಿತಿ ಇಲ್ಲ. ರಾಮ   ನಿಗೆ ಶಾಂತಾ ಎಂಬ ಅಕ್ಕ ಇದ್ದಳು. ಆಕೆ ದಶರಥ ಮತ್ತು ಕೌಸಲೆÂಯ ಹಿರಿಯ ಮಗಳು. ಒಮ್ಮೆ ರೋಮ ಪದದ ರಾಜ ಅಂಗದೇಶ್‌ ಮತ್ತು ಆತನ ಪತ್ನಿ ವರ್ಷಿಣಿ ಅಯೋಧ್ಯೆಗೆ ಭೇಟಿ ನೀಡುತ್ತಾರೆ. ಈ ವೇಳೆ ತಮಗೆ ಮಕ್ಕಳಿಲ್ಲ ಎನ್ನುವುದರ ಬಗ್ಗೆ ದಂಪತಿ ನೋವನ್ನು ವ್ಯಕ್ತಪಡಿಸಿದಾಗ ದಶರಥನು ತನ್ನ ಮಗಳಾದ ಶಾಂತಾಳನ್ನು ಅವರಿಗೆ ಕೊಡುತ್ತಾನೆ. ಇದರಿಂದ ಸಂತಸಗೊಂಡ ಅಂಗದೇಶ್‌ ಮತ್ತು ವರ್ಷಿಣಿ ದಂಪತಿ, ಶಾಂತಾಳನ್ನು ತಮ್ಮ ಮಗಳಾಗಿ ಸ್ವೀಕರಿಸಿ, ಬಲು ಅಕ್ಕರೆಯಿಂದ ಆಕೆಯನ್ನು ಬೆಳೆಸು ತ್ತಾ ರಲ್ಲದೆ ಹೆತ್ತವರ ಕರ್ತವ್ಯಗಳೆಲ್ಲವನ್ನೂ ಅತ್ಯಂತ ಶ್ರದ್ಧೆಯಿಂದ ನಿರ್ವಹಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next