Advertisement

ರಾಮದೇವರ ಬೆಟ್ಟದಲ್ಲಿ ರಾಮಮಂದಿರ; ದಕ್ಷಿಣ ಅಯೋಧ್ಯೆಗೆ ಸಮರ

01:40 AM Dec 29, 2022 | Team Udayavani |

ಬೆಂಗಳೂರು/ಬೆಳಗಾವಿ: ರಾಮನಗರದ ರಾಮದೇವರ ಬೆಟ್ಟವನ್ನು ದಕ್ಷಿಣ ಆಯೋಧ್ಯೆ ಕೇಂದ್ರ ವಾಗಿಸುವ ವಿಷಯ ವಾಕ್ಸಮರಕ್ಕೆ ಕಾರಣವಾಗಿದೆ.

Advertisement

ಈ ಬಗ್ಗೆ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರ ಹೇಳಿಕೆಗೆ ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅಶ್ವತ್ಥ ನಾರಾಯಣ, ರಾಮನಗರದ ರಾಮದೇವರ ಬೆಟ್ಟ ದಲ್ಲಿನ ಶ್ರೀರಾಮನ ದೇವಸ್ಥಾನದ ಅಭಿವೃದ್ಧಿಗೆ ಯೋಜನೆ ರೂಪಿಸಲು ಮುಖ್ಯಮಂತ್ರಿಯವರು ಸೂಚಿಸಿದ್ದು, ಮುಂದಿನ ಬಜೆಟ್‌ನಲ್ಲಿ ಅನು ದಾನ ದೊರೆಯಲಿದೆ. ಈ ದೇವಸ್ಥಾನ ವನ್ನು ಜೀರ್ಣೋದ್ಧಾರ ಮಾಡಿ, ದಕ್ಷಿಣ ಅಯೋಧ್ಯೆ ಯನ್ನಾಗಿಸಿ ಹಿಂದೂ ಧಾರ್ಮಿಕ ಕೇಂದ್ರವನ್ನಾಗಿ ಮಾಡುತ್ತೇವೆ. ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರನ್ನು ಆಹ್ವಾನಿಸಿದ್ದೇವೆ ಎಂದರು.

ಎಚ್‌ಡಿಕೆ ಕಿಡಿ
ಚಿಕ್ಕನಾಯಕನಹಳ್ಳಿಯಲ್ಲಿ ಮಾತನಾಡಿದ ಜೆಡಿ ಎಸ್‌ ನಾಯಕ  ಎಚ್‌.ಡಿ. ಕುಮಾರಸ್ವಾಮಿ, ಮೂರು ವರ್ಷದಿಂದ ಮಾಡದೇ ಇದ್ದವರು ಈಗ ದಕ್ಷಿಣ ಭಾರತದಲ್ಲಿ ರಾಮಮಂದಿರ ನಿರ್ಮಿಸುತ್ತೇವೆ ಎನ್ನುತ್ತಿದ್ದಾರೆ. ರಾಮನಗರದಲ್ಲಿ ಬಿಜೆಪಿಯ ಆಟ ನಡೆಯದು ಎಂದು ಗುಡುಗಿದರು.

ಇನ್ನು 3 ತಿಂಗಳಲ್ಲಿ ಚುನಾವಣೆ ಬರಲಿದೆ. ಜನರು ಬಿಜೆಪಿಯನ್ನು ಹೊರ ಗಿಡುವ ಪ್ರಯತ್ನದಲ್ಲಿದ್ದಾರೆ. ಹೀಗಾಗಿ ಈಗ ರಾಮನಗರದಲ್ಲಿ  ರಾಮ ಮಂದಿರ ಕಟ್ಟಲು ಹೊರಟಿದ್ದಾರೆ ಎಂದು ಕಿಡಿ ಕಾರಿದರು.

Advertisement

ನಮ್ಮ ರಾಜ್ಯ ದರಿದ್ರ ರಾಜ್ಯ ಅಲ್ಲ. ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನು ಕರೆತಂದು ಇಲ್ಲಿ ಅಡಿಪಾಯ ಹಾಕುವ ಅವಶ್ಯಕತೆ ಇಲ್ಲ. ನಮ್ಮ ಸುತ್ತೂರು ಮಠಾ ಧೀಶರು ಹಾಗೂ ಆದಿಚುಂಚನಗಿರಿ ಶ್ರೀಗಳನ್ನು ಕರೆ ತಂದು ನಾನೇ ಮಂದಿರ ನಿರ್ಮಿಸುವೆ ಎಂದರು.

ರಾಮಮಂದಿರ ವನ್ನಾದರೂ ಕಟ್ಟಲಿ, ಸೀತಾ ಮಂದಿರ, ಹನುಮಂತನ ಮಂದಿರ, ಶಿವ ಮಂದಿರವನ್ನಾದರೂ ಕಟ್ಟಲಿ. ಬೇಕಾದರೆ ತಮ್ಮ ದೇ ಮಂದಿರವನ್ನೂ ಕಟ್ಟಿಕೊಳ್ಳಲಿ. ನಾವೇನು ತಡೆಯೋದಿಲ್ಲ, ಸಿಟ್ಟಾಗುವುದೂ ಇಲ್ಲ. ಅವರನ್ನು ತಡೆದವರಾರು ಎಂದು ಕೆಪಿಸಿಸಿ ಆಧ್ಯಕ್ಷ ಡಿ.ಕೆ. ಶಿವಕುಮಾರ್‌ ಪ್ರಶ್ನಿಸಿದ್ದಾರೆ.

ರಾಮನಗರದಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆ ನಡೆದಿದೆ. ಅಶ್ವತ್ಥ ನಾರಾ ಯಣ ಅವರು ಹೇಳಿರುವ ಹೇಳಿಕೆಗೆ ಏನು ಸಂಬಂಧ ವಿದೆ? ರಾಮಮಂದಿರ ಕಟ್ಟುವು ದಾದರೆ ಕಟ್ಟಲಿ ಬಿಡಿ. ಅಶ್ವತ್ಥ ನಾರಾ ಯಣ ಅವರಿಗೂ ಅದಕ್ಕೂ ಏನು ಸಂಬಂಧ. ಅವರು ಹೆಚ್ಚು ಮಾತ ನಾಡದಿರುವುದು ಸೂಕ್ತ.
-ಎಚ್‌.ಡಿ. ದೇವೇಗೌಡ, ಮಾಜಿ ಪ್ರಧಾನಿ

ರಾಮನಗರದಲ್ಲಿ ರಾಮಮಂದಿರ ಕಟ್ಟಿಸುವ ಬದಲು ಅತಿವೃಷ್ಟಿಯಿಂದ ನಿರಾಶ್ರಿತರಾದ ಬಡವರಿಗೆ ಮನೆ ಕಟ್ಟಿಸಿ ಪುಣ್ಯ ಕಟ್ಟಿಕೊಳ್ಳಿ. ಕೋವಿಡ್‌ನಿಂದ ಅನಾಥರಾದವರಿಗೆ ಮನೆ ಕಟ್ಟಿಸಿಕೊಡಬೇಕು. ರಾಮಮಂದಿರಕ್ಕೆ ಯೋಗಿ ಆದಿತ್ಯನಾಥರಿಂದ ಶಂಕುಸ್ಥಾಪನೆ ಮಾಡುವುದಾಗಿ ಹೇಳುತ್ತೀರಿ. ಬಡವರಿಗೆ ಮನೆ ಕಟ್ಟಿಸುವ ಕೆಲಸಕ್ಕೆ ಬಿ.ಎಸ್‌.ಯಡಿಯೂರಪ್ಪ ಅವರಿಂದ ಶಿಲಾನ್ಯಾಸ ಮಾಡಿಸಲಿ.
– ಸಿ.ಎಂ. ಇಬ್ರಾಹಿಂ, ಜೆಡಿಎಸ್‌ ರಾಜ್ಯಾಧ್ಯಕ್ಷ

 

Advertisement

Udayavani is now on Telegram. Click here to join our channel and stay updated with the latest news.

Next