Advertisement
ಅಯೋಧ್ಯೆಯಲ್ಲಿ ಕನ್ನಡಿಗ ಗಣೇಶ್‌ಭಟ್ ಕೆತ್ತನೆ ಮಾಡಿದ ರಾಮನ ಮೂರ್ತಿ ಪ್ರತಿಷ್ಠಾಪನೆಯಾಗದ ಹಿನ್ನೆಲೆಯಲ್ಲಿ. ಈ ಮೂರ್ತಿಯನ್ನು ಕರ್ನಾಟಕದಲ್ಲಿ ಯಾರಾದರೂ ತಂದು ಪ್ರತಿಷ್ಠಾಪಿಸಲಿ ಎಂಬ ಗಣೇಶ್ ಭಟ್ ಅವರ ಆಶಯವನ್ನು ಉದಯವಾಣಿ ಪ್ರಕಟಿಸಿತ್ತು. ಈ ವರದಿಯ ಬೆನ್ನಲ್ಲೇ ರಾಮನಗರದಲ್ಲಿ ಪ್ರತಿಷ್ಠಾಪಿಸಲು ಶಾಸಕ ಇಕ್ಬಾಲ್ ಹುಸೇನ್ ಸಿದ್ಧವಿರುವ ಬಗ್ಗೆ ಸಹ ಪತ್ರಿಕೆ ವರದಿ ಮಾಡಿತ್ತು. ಬುಧವಾರ ರಾಮದೇವರ ಬೆಟ್ಟದ ಅಭಿವೃದ್ಧಿ ಕಾರ್ಯದ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಕಾಲ್ನಡಿಗೆ ಮೂಲಕ ತೆರಳಿ ಪರಿಶೀಲನೆ ನಡೆಸಿದ ಅವರು, ಈಬಗ್ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಪ್ರವಾಸೋದ್ಯಮ ಸಚಿವರ ಜೊತೆ ಮಾತನಾಡಿದ್ದು, ಅವರು ಒಪ್ಪಿಗೆ ನೀಡಿದ್ದಾರೆ.
Related Articles
Advertisement
ಮೂಲಸೌಕರ್ಯಕ್ಕೆ ಕ್ರಮ: ರಾಮದೇವರ ಬೆಟ್ಟಕ್ಕೆ ಮೂಲ ಸೌಕರ್ಯ ಕಲ್ಪಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳ ಲಾಗುವುದು. ಬುಧವಾರ ಭೇಟಿ ನೀಡಿ ಇಲ್ಲಿನ ಕುಂದುಕೊರತೆಗಳನ್ನು ವೀಕ್ಷಿಸಿದ್ದೇನೆ. ಭಕ್ತರ ಸುರಕ್ಷತೆಗೆ ರೇಲಿಂಗ್ಸ್ ಅಳವಡಿಸುವುದು, ಮಹಿಳಾ ಭಕ್ತರಿಗೆ ಅನಾನುಕೂಲವಾಗುತ್ತಿದ್ದು, ಶೌಚಾಲಯ ಸೇರಿದಂತೆ ಮೂಲಸೌಕರ್ಯ ಕಲ್ಪಿಸುವುದು, ಭಕ್ತರು ದಾಸೋಹ ನಡೆಸಲು ಅನುಕೂಲ ವಾಗುವಂತೆ ದಾಸೋಹ ಭವನ, ರಸ್ತೆ, ಕುಡಿಯುವ ನೀರು ಸೇರಿದಂತೆ ಅಗತ್ಯವಿರುವ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ತೇಜಸ್ವಿನಿ, ಪೌರಾಯುಕ್ತ ಡಾ.ಜಯಣ್ಣ, ಶ್ರೀ ರಾಮಗಿರಿ ಸೇವಾ ಸಮಿತಿ ಅದ್ಯಕ್ಷ ಎಸ್. ನರಸಿಂಹಯ್ಯ, ಗೌರವಾಧ್ಯಕ್ಷ ಶೇಷಾದ್ರಿ ಅಯ್ಯರ್, ಖಜಾಂಚಿ ಪದ್ಮನಾಭ್, ಸಹ ಕಾರ್ಯ ದರ್ಶಿ ಗಳಾದ ಯತೀಶ್, ವೆಂಕಟೇಶ್, ಸಂತೋಷ್.ಪಿ, ಜಗದೀಶ್, ಮುಖಂಡ ಸಿಎನ್. ಆರ್.ವೆಂಕಟೇಶ್, ದೇವಾಲಯದ ಅರ್ಚಕ ನಾಗರಾಜು ಭಟ್, ಮುಖಂಡರಾದ ನಾಗರಾಜು, ಗುರು ಪ್ರಸಾದ್, ಅನಿಲ್ ಜೋಗೇಂದರ್, ವಾಸು, ಪಾದ್ರಳ್ಳಿ ಮಹದೇವು, ಪರ್ವಿಜ್ ಪಾಷ, ಶ್ರೀನಿವಾಸ, ವಸೀಂ, ಆಯಿಷಾ, ಪವಿತ್ರಾ, ಗಿರಿಜಮ್ಮ, ಆರೀಪ್, ಹರೀಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಮ್ಮ ಇದ್ದರು.
ರಾಮನಗರ ಹೆಸರು: ಯಾರೂ ತೆಗೆಯೋಲ್ಲ ನಮ್ಮ ಸರ್ಕಾರ ಜಿಲ್ಲೆಯ ಹೆಸರನ್ನು ಮಾತ್ರ ಬದಲಾವಣೆ ಮಾಡುತ್ತಿದೆಯೇ ವಿನಾ ರಾಮ ನಗರದ ಹೆಸರನ್ನಲ್ಲಾ. ರಾಮನಗರದ ಹೆಸರು ಎಲ್ಲಿಗೂ ಹೋಗುತ್ತಿಲ್ಲ. ರಾಮನಗರ ಹೆಸರೂ ಇರಲಿದೆ, ಶ್ರೀರಾಮಚಂದ್ರನ ಬೆಟ್ಟವೂ ಇರಲಿದೆ. ಅಭಿವೃದ್ಧಿಗಾಗಿ ಜಿಲ್ಲೆಯ ಹೆಸರನ್ನು ಮೊದಲು ಇದ್ದ ರೀತಿ ಮರು ನಾಮಕರಣ ಮಾಡುತ್ತಿದ್ದೇವೆ ಅಷ್ಟೇ. ಈ ನೆಲ ಪವಿತ್ರ ಇತಿಹಾಸ ಹೊಂದಿದ್ದು, ಪ್ರಭು ಶ್ರೀ ರಾಮದೇವರು ಇಲ್ಲಿ ನೆಲೆಸಿದ್ದರು ಎಂಬ ಹಿನ್ನೆಲೆ ಇದೆ. ಇದನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಅರ್ಥಪೂರ್ಣ ರಾಮೋತ್ಸವ: ಮೊದಲಬಾರಿಗೆ ರಾಮನಗರದಲ್ಲಿ ರಾಮೋತ್ಸವ ಆಚರಿಸಲು ತಯಾರಿ ನಡೆಸುತ್ತಿದ್ದೇವೆ. ರಾಮದೇವರ ಬೆಟ್ಟದ ಸಮಿತಿ, ಹಿರಿಯರನ್ನು ಗಣನೆಗೆ ತೆಗೆದುಕೊಂಡು ಅವರ ಸಲಹೆ ಸೂಚನೆ ಮೇರೆಗೆ ರಾಮೋತ್ಸವ ಮಾಡುತ್ತೇವೆ. ಇತಿಹಾಸದಲ್ಲಿ ಮೊದಲ ಬಾರಿಗೆ ಕೈ ಹಾಕುತ್ತಿದ್ದೇವೆ. ಎಲ್ಲಾ ಜಾತಿ ಧರ್ಮ ಒಗ್ಗೂಡಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.