Advertisement

Shimoga: ಚುನಾವಣೆಗೋಸ್ಕರ ರಾಮ ಮಂದಿರ ಕಟ್ಟುತ್ತಿಲ್ಲ….: ಸಂಸದ ರಾಘವೇಂದ್ರ

01:36 PM Sep 07, 2023 | keerthan |

ಶಿವಮೊಗ್ಗ: ಚುನಾವಣೆಗೋಸ್ಕರ ರಾಮ ಮಂದಿರ ಕಟ್ಟುತ್ತಿಲ್ಲ. ಅನೇಕ ವರ್ಷದ ಹೋರಾಟದ ಫಲದಿಂದ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಪ್ರಪಂಚದಲ್ಲಿ ಭಾರತ ದೇಶ ಏನು ಎಂದು ತೋರಿಸಿದ್ದು ಮೋದಿ ಬಂದ ನಂತ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.

Advertisement

ಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರು ಭಾವನಾತ್ಮಕ ವಿಷಯ ತೆಗೆಯುತ್ತಾರೆಂಬ ಸಚಿವ ಮಧು ಬಂಗಾರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ ಅವರು ಈ ರೀತಿ ಹೇಳಿದರು.

ಭಾರತ ನಾಮಕರಣ ವಿಚಾರವಾಗಿ ಮಾತನಾಡಿದ ಅವರು, ಭಾರತ ಎಂದು ಕರೆದರೆ ಏನು ತಪ್ಪಿಲ್ಲ. ನಮ್ಮ I.N.D.I.A ಸದಸ್ಯರು ಗಾಬರಿಯಾಗಿದ್ದಾರೆ. ಸಣ್ಣ ಸಣ್ಣ ವಿಚಾರವನ್ನು ರಾಜಕೀಕರಣ ಮಾಡುವ ಕೆಲಸ ಮಾಡುತ್ತಿದ್ದಾರೆ. I.N.D.I.A ರಚನೆಯಾದ ಬಳಿಕ ಎನ್ ಡಿಎ ಏನು ಭಯಗೊಂಡಿಲ್ಲ. ಕಳೆದ ಎರಡು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇವೆ. ಮುಂದಿನ‌ ಚುನಾವಣೆಯಲ್ಲೂ ಗೆಲ್ಲುತ್ತೇವೆ ಎಂದರು.

ಸನಾತನ ಧರ್ಮದ ಬಗ್ಗೆ ಉದಯನಿದಿ ಸ್ಟಾಲಿನ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಅತಿ ಬುದ್ಧಿವಂತರು ಈ ರೀತಿ ಹೇಳಿಕೆ ಕೊಡುತ್ತಾರೆ. ಈ ಬಗ್ಗೆ ಇಡೀ ರಾಷ್ಟದಾದ್ಯಂತ ಚರ್ಚೆಯಾಗುತ್ತಿದೆ. ಸ್ಟಾಲಿನ್ ತಾಯಿ ಪ್ರತಿನಿತ್ಯ ಎರಡು ಹೊತ್ತು‌ ದೇವಸ್ಥಾನಕ್ಕೆ ಹೋಗಿ ಬರುತ್ತಾರೆ. ದೇವರಲ್ಲಿ ನಂಬಿಕೆ ಇದೆ, ಸನಾತನ ಧರ್ಮ ಒಂದು ನಂಬಿಕೆ. ಇಂತಹ ವಿಷಯಗಳ ಬಗ್ಗೆ ಮಾತನಾಡುವುದೇ ತಪ್ಪು ಎಂದರು.

ಸಚಿವ ಶಿವಾನಂದ ಪಾಟೀಲ್ ರೈತರ ಬಗ್ಗೆ ಅವಹೇಳನ ಮಾಡಿದ ವಿಚಾರಕ್ಕೆ ಮಾನಾಡಿದ ರಾಘವೇಂದ್ರ, ಅಧಿಕಾರದ ಮದ ತಲೆಗೆ ಏರಿದಾಗ ಇಂತಹ ಮಾತು ಬರುತ್ತವೆ ಎಂದರು.

Advertisement

ಇದನ್ನೂ ಓದಿ:Karnataka ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿಗೆ JDS ಕಾರಣ; ಆಯೋಗದ ಅಂಕಿಅಂಶದಲ್ಲೇನಿದೆ?

ಬರಗಾಲ ಘೋಷಣೆ ಮಾಡದೆ ದಿನ ತಳ್ಳುತ್ತಿದ್ದಾರೆ. ಮಳೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇಡೀ ರಾಜ್ಯವನ್ನು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ತಮಿಳುನಾಡಿಗೆ ಕಾವೇರಿ‌ ನೀರು ಹರಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದ ರೈತರ ಹಿತಾಸಕ್ತಿ ಕಾಪಾಡಬೇಕಿರುವುದು ರಾಜ್ಯ ಸರಕಾರದ ಕರ್ತವ್ಯ. ಸಿದ್ದರಾಮಯ್ಯ ಸರ್ಕಾರ ರೈತರ ಹಿತ ಕಾಪಾಡುತ್ತದೆ ಎಂದುಕೊಂಡಿದ್ದೆವು. ಆ ರೀತಿ ಆಗುತ್ತಿಲ್ಲ. ಕಾವೇರಿ‌ ನದಿ ನೀರು ವಿಷಯದಲ್ಲಿ ಸಿದ್ದರಾಮಯ್ಯ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next