Advertisement

Ram mandir: ಶ್ರೀರಾಮ ವನವಾಸಕ್ಕೆ ಹಾದುಹೋಗಿದ್ದ ಸ್ಥಳ ನಮ್ಮೂರು ಆಗಿರುವುದೇ ಹೆಮ್ಮೆ

01:04 PM Jan 23, 2024 | Team Udayavani |

ನೆಲಮಂಗಲ: ಮರ್ಯಾದ ಪುರುಷೋತ್ತಮ ಶ್ರೀರಾಮ ವನವಾಸಕ್ಕೆ ತೆರಳಿದ್ದು ನಮ್ಮ ಗ್ರಾಮಗಳ ಮುಖಾಂತರ ಎಂಬ ಕಥೆಯನ್ನು ಹಿರಿಯರು ನಮಗೆ ತಿಳಿಸಿದ್ದಾರೆ. ಈ ವಿಚಾರ ನಮಗೆಲ್ಲಾ ಹೆಮ್ಮೆ ಎಂದು ಶ್ರೀಆಂಜನೇಯ ಸ್ವಾಮಿ ಸೇವಾ ಚಾರಿಟಬಲ್‌ ಟ್ರಸ್ಟ್‌ ನ ಅಧ್ಯಕ್ಷ ಹನುಮಂತರಾಯಪ್ಪ ಸಂತಸ ವ್ಯಕ್ತಪಡಿಸಿದರು.

Advertisement

ಅಯೋಧ್ಯೆಯಲ್ಲಿ ಶ್ರೀ ರಾಮನ ವಿಗ್ರಹ ಪ್ರತಿಷ್ಠಾಪನೆ ಹಿನ್ನೆಲೆ ತಾಲೂಕಿನ ಕುಂಟಬೊಮ್ಮನಹಳ್ಳಿಯಲ್ಲಿ ಗ್ರಾಮದ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ, ಅಲಂಕಾರ, ಪ್ರಸಾದ ವಿತರಣೆ ಇನ್ನಿತರ ಧಾರ್ಮಿಕ ಕಾರ್ಯಕ್ರಮದಲ್ಲಿ ನೇತೃತ್ವ ವಹಿಸಿ ಮಾತನಾಡಿದರು.

ಶ್ರೀ ರಾಮ, ಲಕ್ಷ್ಮಣ, ಸೀತಾ ಮಾತೆ ಸಮೇತ ವನವಾಸಕ್ಕೆ ತೆರಳುವಾಗ, ತುಮಕೂರಿನ ದೇವರಾಯನದುರ್ಗ ಬಳಿಯ ನಾಮದ ಚಿಲುಮೆಯಲ್ಲಿ, ಜಲಪಾನ ಮಾಡಿದ್ದರು. ಇಂದು ಗ್ರಾಮದ ಎಲ್ಲರೂ ಸೇರಿ ಶ್ರೀರಾಮನ ಧ್ಯಾನ ಮಾಡಿದ್ದೇವೆ. ನಮ್ಮ ಗ್ರಾಮದ ಆಂಜನೇಯ ಸ್ವಾಮಿ ರಾಮನ ಭಂಟ, ಆದ್ದರಿಂದ ಪೂಜೆ ಸಲ್ಲಿಸಿದ್ದೇವೆ, ಕಳೆದ 4 ವರ್ಷಗಳ ಹಿಂದೆ ದೇವಾಲಯ ಜೀರ್ಣೋದ್ಧಾರಗೊಂಡಿತು, ಮೇ 29 ರಂದು 5ನೇ ವರ್ಷದ ವಾರ್ಷಿಕೋತ್ಸವ ನಡೆಸುತ್ತೇವೆ ಎಂದರು.ವಿಜ್ಞಾನಿ ಕೆ.ಎನ್‌ .ತಿಮ್ಮಯ್ಯ, ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಹನುಮಂತರಾಜು, ಕಾರ್ಯದರ್ಶಿ ಟಿ. ಹನುಮಂತರಾಜು, ನಿವೃತ್ತ ಶಿಕ್ಷಕ ರೇಣುಕಾರಾಧ್ಯ, ಶಿವಕುಮಾರಯ್ಯ, ನಿವೃತ್ತ ಪ್ರಾಂಶುಪಾಲ ಚೌಡಯ್ಯ, ಗ್ರಾಪಂ ಸದಸ್ಯ ಹಾಗೂ ಮಾಜಿ ಉಪಾಧ್ಯಕ್ಷ ನರಸಿಂಹಮೂರ್ತಿ, ಎಸ್‌ಎಲ್‌ಆರ್‌ ಶಾಲೆ ಮುಖ್ಯಸ್ಥ ನರಸಿಂಹಯ್ಯ, ರವಿಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next