Advertisement

Ram lalla ಶಿಲ್ಪಿ ಅರುಣ್ ಯೋಗಿರಾಜ್ ತಾಯ್ನಾಡಿಗೆ: ಅದ್ದೂರಿ ಸ್ವಾಗತ

09:36 PM Jan 24, 2024 | Team Udayavani |

ಬೆಂಗಳೂರು: ಕೋಟ್ಯಂತರ ಜನ ಭಕ್ತರಿಗೆ ಅಯೋಧ್ಯೆಯ ಭವ್ಯ ಮಂದಿರದಲ್ಲಿ ‘ಬಾಲಕ ರಾಮ’ ರಾಮಲಲ್ಲಾನ ದರ್ಶನ ತೋರಲು ಕಾರಣೀಭೂತರಲ್ಲಿ ಒಬ್ಬರಾದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಬುಧವಾರ ಸಂಜೆ ಅಯೋಧ್ಯೆಯಿಂದ ಬೆಂಗಳೂರಿಗೆ ಮರಳಿದ್ದು ಅದ್ದೂರಿ ಸ್ವಾಗತ ನೀಡಿ ಸ್ವಾಗತಿಸಲಾಗಿದೆ.

Advertisement

ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅರುಣ್ ಅವರನ್ನು ಬಿಜೆಪಿ, ಹಿಂದೂಪರ ಸಂಘಟನೆಯ ಕಾರ್ಯಕರ್ತರು ಜಯಘೋಷಗಳೊಂದಿಗೆ ಸ್ವಾಗತಿಸಿದರು.

ಅಪಾರ ಜನರ ನಡುವೆಯೇ, ದಣಿದಿದ್ದರೂ ಮಾಧ್ಯಮ ಪ್ರತಿನಿಧಿಗಳ ಎದುರು ಮಾತನಾಡಿದ ಅರುಣ್ ಯೋಗಿರಾಜ್ ಧನ್ಯತಾ ಭಾವ ತೋರಿದರು.”ನನಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ಭಾವುಕರಾದರು. ಜನರ ಪ್ರೀತಿ ನೋಡಿದಾಗ ನಾನು ಮಾಡಿದ ಕೆಲಸ ಸಾರ್ಥಕವಾಯಿತು ಎಂದು ಅನಿಸುತ್ತಿದೆ. ಕಲೆಗೆ ಅಪಾರ ಗೌರವವಿದೆ. ಭಾರತೀಯರಿಗೆ ರಾಮ ಮಂದಿರ ನಿರ್ಮಾಣವಾದುದ್ದು ಎಷ್ಟು ಸಂತೋಷ ತಂದಿದೆ ಎನ್ನುವುದು ತಿಳಿಯಿತು”ಎಂದರು.

”ರಾಮಲಲ್ಲಾ ವಿಗ್ರಹ ಭಗವಂತ ಹೇಳಿ ಮಾಡಿಸಿಕೊಂಡಿದ್ದು, ಎಚ್.ಡಿ. ಕೋಟೆಯ ರೈತರ ಜಮೀನಿನಲ್ಲಿದ್ದ ಶಿಲೆ ಇದು ಮೂರ್ತಿಯಾಗಿರುವುದನ್ನೂ ಪ್ರತಿಯೊಬ್ಬರೂ ಕಣ್ತುಂಬಿಸಿಕೊಳ್ಳಬೇಕು ಅನ್ನುವ ಇಚ್ಛೆ ನನ್ನದು” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next