Advertisement

Ram ಜನ್ಮಭೂಮಿ ಹೋರಾಟ ಪ್ರೇರಣೆ: ಮಕ್ಕಳಿಂದಲೇ ಮಂದಿರ ನಿರ್ಮಾಣ

12:13 AM Jan 13, 2024 | Team Udayavani |

ಕೋಟ: ರಾಮಜನ್ಮಭೂಮಿ -ಬಾಬರಿ ಮಸೀದಿ ವಿವಾದ ಸ್ಫೋಟಗೊಂಡ ಸಂದರ್ಭ ಸಾಲಿಗ್ರಾಮ ದಲ್ಲಿ 10-11 ವರ್ಷದ ಐವರು ಬಾಲಕರು ಸೇರಿ “ನಮ್ಮ ತೀರ್ಪು ರಾಮ ಮಂದಿರದ ಪರ’ ಎಂಬ ಅಭಿಪ್ರಾಯ ವ್ಯಕ್ತ ಪಡಿಸಲು ರಾಮಮಂದಿರವನ್ನು ನಿರ್ಮಿಸಿ ದರು. ಇದೀಗ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿರುವ ಘಳಿಗೆ ಕಂಡು ಅವರ ಸಂತಸ ಮುಗಿಲುಮುಟ್ಟಿದೆ.

Advertisement

1989ರಲ್ಲಿ ಅಯೋಧ್ಯೆ ಹೋರಾಟ ತೀವ್ರಗೊಂಡಿತ್ತು. ಹಳ್ಳಿ-ಹಳ್ಳಿಗಳಲ್ಲೂ ಎಲ್ಲರ ಬಾಯಲ್ಲೂ ರಾಮ ನಾಮ ಕೇಳಿ ಬರುತಿತ್ತು. ಟಿವಿಯಲ್ಲಿ ಬರುತ್ತಿದ್ದ ರಾಮಾಯಣವನ್ನು ಕಂಡು ಪ್ರೇರಿತರಾದ ನಾಗೇಶ್‌ ಹೆಗ್ಡೆ, ವಾಸುದೇವ ಭಟ್‌, ರಾಘವೇಂದ್ರ ಹೆಗ್ಡೆ, ಸುರೇಂದ್ರ ಹೆಗ್ಡೆ, ರವೀಂದ್ರನಾಥ ಶ್ಯಾನುಭಾಗ್‌ ಎಂಬ ಮಕ್ಕಳು ಸಾಲಿಗ್ರಾಮದ ಪೇಟೆಯಲ್ಲಿ ಹಾದು ಹೋಗುತ್ತಿದ್ದ ರಾಮ ಪಾದಯಾತ್ರೆ, ಭಜನೆಯನ್ನು ನೋಡಿ ಪ್ರೇರಣೆಗೊಂಡರು. ಅಯೋಧ್ಯೆ ಎಲ್ಲಿದೆ ಎನ್ನುವುದು ಗೊತ್ತಿರದಿ ದ್ದರೂ ಅಲ್ಲಿ ರಾಮ ಮಂದಿರ ನಿರ್ಮಿಸಲು ಅವಕಾಶ ನೀಡದಿದ್ದರೆ ಏನಾಯಿತು ನಮ್ಮ ಊರಿನಲ್ಲೇ ರಾಮನನ್ನು ಪ್ರತಿಷ್ಠಾಪಿಸಿ ಪೂಜಿ ಸುತ್ತೇವೆ ಎಂದು ನಿರ್ಧರಿಸಿದರು. 1990ರಲ್ಲಿ ಪೇಟೆಯ ಮೂಲೆಯೊಂದರಲ್ಲಿ ತೆಂಗಿನಗರಿ ಗಳನ್ನ ಬಳಸಿ, ಮಣ್ಣಿನ ಚಿಕ್ಕ ಗೋಪುರ ರಚಿಸಿ ಅದರಲ್ಲಿ ಶ್ರೀರಾಮ-ಸೀತೆಯ ಫೋಟೋ ಇಟ್ಟು ಶಾಲೆಯಿಂದ ಬಂದ ಮೇಲೆ ಭಜನೆ ಮಾಡಲು ಆರಂಭಿಸಿದ್ದರು. ರಾಮನಿಗೆ ನಿತ್ಯ ಪೂಜೆ ನೈವೇದ್ಯವಾಗಬೇಕು ಎಂದು ಮನೆ ಯಿಂದ ತಂದ ಬೆಲ್ಲ, ಸಕ್ಕರೆ ಅವಲಕ್ಕಿಯಿಂದ ಪ್ರಸಾದ ತಯಾರಿಸಿ ಪೂಜಿಸಿದರು.
ಹಂತ-ಹಂತವಾಗಿ ಬೆಳೆಯಿತು: ಮಕ್ಕಳ ಉತ್ಸಾಹ ವನ್ನು ಕಂಡು ಅಲ್ಲಿನ ಸಿಮೆಂಟ್‌ ವ್ಯಾಪಾರಿಗಳು ನೀಡಿದ ಸಿಮೆಂಟ್‌ ಹಾಗೂ ಅಲ್ಲಿ ಸಿಕ್ಕ ವಸ್ತುಗಳಿಂದಲೇ ತಾರಸಿ ಮಾಡಿನ ಚಿಕ್ಕ ಗುಡಿ ಎದ್ದಿತು. ಮಳೆಗಾಲದಲ್ಲಿ ಭಜನೆ ಮಾಡಲು ತೊಂದರೆಯಾಗದಂತೆ ಸಣ್ಣ ಸಿಮೆಂಟ್‌ ಶೀಟಿನ ಮಾಡು ನಿರ್ಮಾಣ ವಾಯಿತು. ಫೋಟೋದ ಬದಲಿಗೆ ಬಿಳಿ ಬಣ್ಣದ ರಾಮನ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಮೂರ್ತಿ ಬಂದಿತು. ಬಳಿಕ ಸುವ್ಯವಸ್ಥಿತವಾದ ಗುಡಿ, ಮಣ್ಣಿನ ಮೂರ್ತಿ, ವೈಟ್‌ ಮೆಟಲ್‌ನ ಮೂರ್ತಿ ಇಡಲಾಯಿತು. ಇಂದು ಅದು ವ್ಯವಸ್ಥಿತ ಮಂದಿರ. ಅಂದು ಈ ಬಗ್ಗೆ ಉದಯವಾಣಿಯೂ ವರದಿ ಪ್ರಕಟಿಸಿತ್ತು.

ಕೋದಂಡ ರಾಮ
ಇಲ್ಲಿರುವುದು ಕೋದಂಡರಾಮ. ಎಲ್ಲರೂ ಬಂದು ಇಲ್ಲಿ ಪೂಜಿಸ ಬಹುದು. ರಾಮ ನವಮಿಗೆ 9 ದಿನವೂ ವಿಶೇಷವಾದ ಪೂಜೆ, ಭಜನೆ, ಪನಿ ವಾರ ಸೇವೆ ನಡೆಯುತ್ತದೆ. ಅದರಂತೆಯೇ ಮುಂದಿನ ಜ. 22ರಂದೂ ವಿಶೇಷ ಪೂಜೆ, ಭಜನೆ, ಫಲಾಹಾರ ವಿತರಣೆಗೆ ಸಿದ್ಧತೆ ನಡೆದಿದೆ.

ಆ ವಯಸ್ಸಿನಲ್ಲಿ ರಾಮ ಮಂದಿರ ಹೋರಾಟದ ಬಗ್ಗೆ ಹೆಚ್ಚೇನೂ ತಿಳಿದಿರ ಲಿಲ್ಲ. ಆದರೆ ರಾಮ ಮಂದಿರ ನಿರ್ಮಾಣವಾಗಬೇಕು ಎಂಬ ಆಸೆ ನಮ್ಮೊಳ ಗಿತ್ತು. ಹೀಗಾಗಿ ನಮ್ಮಲ್ಲೇ ಮಂದಿರ ನಿರ್ಮಿಸಿದ್ದೆವು. ಇಂದು ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣವಾಗ್ತಿರುವುದನ್ನು ಕಂಡು ಹೃದಯ ತುಂಬಿ ಬರುತ್ತಿದೆ.
ನಾಗೇಶ್‌ ಹೆಗ್ಡೆ ಸಾಲಿಗ್ರಾಮ, ಮಂದಿರ ನಿರ್ಮಾಣದ ತಂಡದಲ್ಲಿದ್ದವರು.

Advertisement

ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next