Advertisement

Game Changer: ಶೂಟಿಂಗ್‌ ಹಂತದಲ್ಲೇ ʼಗೇಮ್‌ ಚೇಂಜರ್‌ʼ ಸಿನಿಮಾದ ದುಬಾರಿ ಹಾಡು ಲೀಕ್

01:10 PM Sep 16, 2023 | Team Udayavani |

ಹೈದರಾಬಾದ್: ರಾಮ್ ಚರಣ್‌ ವೃತ್ತಿ ಬದುಕಿನ ದೊಡ್ಡ ಸಿನಿಮಾವೆಂದೇ ಹೇಳಲಾಗುತ್ತಿರುವ ʼ ಗೇಮ್ ಚೇಂಜರ್ʼ ಶೂಟಿಂಗ್‌ ಹಂತದಲ್ಲೇ ಸದ್ದು ಮಾಡುತ್ತಿದೆ. ಎಸ್‌.ಶಂಕರ್‌ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದು.

Advertisement

ಸದ್ಯ ಸಿನಿಮಾದ ಶೂಟಿಂಗ್‌ ಭರದಿಂದ ಸಾಗುತ್ತಿದೆ. ಈ ನಡುವೆ ಚಿತ್ರದ ಹಾಡೊಂದು ಲೀಕ್‌ ಆಗಿದೆ ಎನ್ನುವ ಸುದ್ದಿಯೊಂದು ಟಾಲಿವುಡ್‌ ವಲಯದಲ್ಲಿ ವೈರಲ್‌ ಆಗಿದೆ. ಸೋಶಿಯಲ್‌ ಮೀಡಿಯಾದಲ್ಲಿ ಹಾಡು ಲೀಕ್‌ ಆಗಿದೆ ಎನ್ನಲಾಗಿದ್ದು, ರಾಮಚರಣ್‌ ಅಭಿಮಾನಿಗಳು ಹಾಡನ್ನು ಹಂಚಿಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ಹಾಡೊಂದು ಸೋಶಿಯಲ್‌ ಮೀಡಿಯಾದಲ್ಲಿ ಲೀಕ್‌ ಆಗಿದೆ. ಈ ಹಾಡು ʼಗೇಮ್‌ ಚೇಂಜರ್‌ʼ ಸಿನಿಮಾದ ಹಾಡೆಂದು ಹೇಳಲಾಗುತ್ತಿದೆ. ಈ ಹಾಡನ್ನು 15 ಕೋಟಿ ರೂ ಬಜೆಟ್‌ ನಲ್ಲಿ ತಯಾರಿಸಲಾಗಿದೆ. ಶಂಕರ್ ಮತ್ತು ಅವರ ತಂಡ ಈ ಚಿತ್ರಕ್ಕಾಗಿ ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿಂದಲ್ಲೇ ಈ ಹಾಡು ಲೀಕ್‌ ಆಗಿದೆ ಎಂದು ವರದಿ ತಿಳಿಸಿದೆ.

ಈ ಬಗ್ಗೆ ‘ಗೇಮ್ ಚೇಂಜರ್’ ಪಿಆರ್‌ ತಂಡ ಪ್ರತಿಕ್ರಿಯಿಸಿದ್ದು, ಲೀಕ್‌ ಆದ ಹಾಡು ಡಮ್ಮಿ ವರ್ಷನ್‌ ಆಗಿದೆ ಎಂದಿದ್ದಾರೆ. ಮೂಲ ಹಾಡಿನ ಡಮ್ಮಿ ಟ್ರ್ಯಾಕ್‌ ಲೀಕ್‌ ಆಗಿದೆ. ಇದರ ಗುಣಮಟ್ಟ ಕಡಿಮೆಯಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: Asia Cup Final: ಗಾಯಗೊಂಡ ಅಕ್ಷರ್ ಪಟೇಲ್; ಬದಲಿ ಆಟಗಾರನ ಆಯ್ಕೆ

Advertisement

ಶಂಕರ್ ನಿರ್ದೇಶನದ ‘ಗೇಮ್ ಚೇಂಜರ್’ ರಾಜಕೀಯ ಥ್ರಿಲ್ಲರ್ ಸಿನಿಮಾವಾಗಿದ್ದು, ಕಾರ್ತಿಕ್ ಸುಬ್ಬರಾಜ್ ಚಿತ್ರದ ಕಥೆ ಬರೆದಿದ್ದಾರೆ.

ಈ ಸಿನಿಮಾದಲ್ಲಿ ರಾಮ್‌ ಚರಣ್‌ ಐಎಎಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇನ್ನು ನಾಯಕಿಯಾಗಿ ಬಾಲಿವುಡ್‌ ಬ್ಯೂಟಿ ಕಿಯಾರಾ ಅಡ್ವಾಣಿ ಕಾಣಿಸಿಕೊಳ್ಳಲಿದ್ದಾರೆ. ಎಸ್‌ಜೆ ಸೂರ್ಯ , ಅಂಜಲಿ, ಜಯರಾಮ್, ನವೀನ್ ಚಂದ್ರ, ಸುನೀಲ್, ಶ್ರೀಕಾಂತ್, ಸಮುದ್ರಕಣಿ ನಾಸರ್ ಹಾಗೂ ಇತರರು ಕಾಣಿಸಿಕೊಳ್ಳಲಿದ್ದಾರೆ.

ದಿಲ್ ರಾಜು ಮತ್ತು ಸಿರಿಶ್ ನಿರ್ಮಾಣದ ಈ ಚಿತ್ರ 2024 ರಲ್ಲಿ ಬಿಡುಗಡೆಯಾಗಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next