ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ ದೇಶದೆಲ್ಲೆಡೆ ರಾಮ ನಾಮ ಜಪ ತೀವ್ರವಾಗಿರುವ ವೇಳೆ ಜಮ್ಮು ಮತ್ತು ಕಾಶ್ಮೀರದ ಮುಸ್ಲಿ ಹುಡುಗಿಯೊಬ್ಬಳು ಹಾಡಿರುವ ರಾಮ ಭಜನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಉರಿ ತಹಸಿಲ್‌ನ ಮುಸ್ಲಿಂ ಸೈಯದ್ ಸಮುದಾಯಕ್ಕೆ ಸೇರಿದ ಕಾಲೇಜು ವಿದ್ಯಾರ್ಥಿನಿ ಸೈಯದಾ ಬಟೂಲ್ ಝೆಹ್ರಾ (19)ಗಾಯಕ ಜುಬಿನ್ ನೌಟಿಯಾಲ್ ಹಾಡಿದ ಭಜನೆಯಿಂದ ಸ್ಫೂರ್ತಿ ಪಡೆದು ಪಹಾರಿ ಭಾಷೆಯಲ್ಲಿ ಹಾಡಿದ ಸುಮಧುರ ರಾಮ ಭಜನೆ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು ಚರ್ಚೆಯ ವಿಷವಾಗಿದೆ.
ಕುಪ್ವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಝೆಹ್ರಾ, “ಇತ್ತೀಚೆಗೆ, ನಾನು ರಾಮ್ ಭಜನ್ ಹಾಡಿದ್ದೇನೆ ಅದು ವೈರಲ್ ಆಗಿದೆ. ಗಾಯಕ ಜುಬಿಯಾನ್ ನೌಟಿಯಲ್ ಅವರು ಹಿಂದಿಯಲ್ಲಿ ಹಾಡಿದ ರಾಮ್ ‘ಭಜನ್’ ಪಹಾರಿಯಲ್ಲಿ ಅದರ ಆವೃತ್ತಿಯನ್ನು ರಚಿಸಲು ಪ್ರೇರೇಪಿಸಿತು ಎಂದರು.
“ನಾನು ಯೂಟ್ಯೂಬ್‌ನಲ್ಲಿ ಜುಬಿನ್ ನೌಟಿಯಾಲ್ ಅವರ ಹಿಂದಿ ಭಜನ್ ಅನ್ನು ನೋಡಿದೆ. ನಾನು ಅದನ್ನು ಮೊದಲು ಹಿಂದಿಯಲ್ಲಿ ಹಾಡಿದೆ ಬಳಿಕ ನನ್ನ ಪಹಾರಿ ಭಾಷೆಯಲ್ಲಿ ಹಾಡಲು ಯೋಚಿಸಿದೆ. ನಾನು ಅದನ್ನು ಅನುವಾದಿಸಿದೆ, ಈ ನಾಲ್ಕು ಸಾಲಿನ ಭಜನೆಯನ್ನು ಬರೆಯಲು ವಿವಿಧ ಸಂಪನ್ಮೂಲಗಳನ್ನು ಬಳಸಿದೆ ಮತ್ತು ಅದನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದೆ ”ಎಂದು ಹೇಳಿದರು.
ಇನ್ನೊಂದೆಡೆ ಲಖಿಂಪುರದ ವಿದ್ಯಾರ್ಥಿನಿ ಎಮಾನ್ ಅನ್ಸಾರಿ ಕೂಡ ಶ್ರೀರಾಮ ಭಜನೆ ಹಾಡಿ ಸುದ್ದಿಯಾಗಿದ್ದಾರೆ.