Advertisement
ದ.ಕ. ಜಿಲ್ಲಾ ಬಿಜೆಪಿ ಕಚೇರಿ ಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬುಧ ವಾರ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 24 ಮಂದಿ ಹಿಂದೂ ಕಾರ್ಯಕರ್ತರ ಹತ್ಯೆ ನಡೆದಿದೆ. ಇದೀಗ ವಿಚಾರವಾದಿ, ಪತ್ರಕರ್ತೆ ಗೌರಿ ಲಂಕೇಶ್ ಅವರನ್ನೂ ಹತ್ಯೆ ಮಾಡ ಲಾಗಿದೆ. ಬಲ ಪಂಥೀಯರು, ಎಡ ಪಂಥೀಯರು, ರೈತರು, ಅಧಿ ಕಾರಿ ಗಳು ಎಂಬ ಭೇದವಿಲ್ಲದೇ ರಾಜ್ಯ ದಲ್ಲಿ ನಡೆದ ಎಲ್ಲ ಹತ್ಯೆ- ಆತ್ಮಹತ್ಯೆ ಪ್ರಕರಣಗಳನ್ನು ತನಿಖೆ ನಡೆಸಬೇಕು ಎಂದು ಆಗ್ರಹಿಸಿ ರ್ಯಾಲಿ ನಡೆಸಲಾಗುವುದು ಎಂದರು.
Related Articles
Advertisement
ರ್ಯಾಲಿಗೆ 1,000 ಬೈಕ್, ಪಾದಯಾತ್ರೆಗೆ 5,000 ಮಂದಿಸೆ. 7ರಂದು ಬೆಳಗ್ಗೆ 11 ಗಂಟೆಗೆ ಜ್ಯೋತಿ ವೃತ್ತದಿಂದ ಬೈಕ್ ರ್ಯಾಲಿ ಆರಂಭವಾಗಲಿದ್ದು, ಸುಮಾರು 1,000 ಬೈಕ್‌ಗಳು ಪಾಲ್ಗೊಳ್ಳ ಲಿವೆ. ದ.ಕ. ಮತ್ತು ಉಡುಪಿ ಜಿಲ್ಲೆ ಸಹಿತ ಇತರೆಡೆಗಳಿಂದಲೂ ಸುಮಾರು 5,000ಕ್ಕೂ ಹೆಚ್ಚು ಮಂದಿ ಪಾದ ಯಾತ್ರೆಯಲ್ಲಿ ಪಾಲ್ಗೊಳ್ಳ ಲಿದ್ದಾರೆ. ಅನಂತರ ಸಭೆ, ಜಿಲ್ಲಾಧಿ ಕಾರಿ ಕಚೇರಿಗೆ ಮುತ್ತಿಗೆ ಕಾರ್ಯ ಕ್ರಮ ವಿದೆ ಎಂದು ಅರವಿಂದ ಲಿಂಬಾವಳಿ ವಿವರಿಸಿದರು. ಈ ಪ್ರತಿಭಟನೆ ಮಂಗಳೂರಿಗೆ ಸೀಮಿತವಾಗಿಲ್ಲ. ಮುಂದಿನ ನಡೆ ಬಗ್ಗೆ ಸಭೆಯಲ್ಲಿ ರಾಜ್ಯಾಧ್ಯಕ್ಷರು ಘೋಷಣೆ ಮಾಡಲಿದ್ದಾರೆ ಎಂದರು.
ಸಭೆಗೆ ಅನುಮತಿ ನೀಡಿದ್ದೇವೆ ಎಂಬ ಪೊಲೀಸ್ ಆಯುಕ್ತರ ಹೇಳಿಕೆ ಸಮಂಜಸವಲ್ಲ. ನಾವು ಅನುಮತಿ ಕೇಳಿಲ್ಲ; ರಕ್ಷಣೆ ಕೇಳಿ ರು ವು ದಷ್ಟೇ ಎಂದು ಪ್ರಶ್ನೆ ಯೊಂದಕ್ಕೆ ಅವರು ಉತ್ತರಿಸಿದರು.