ಸೈದಾಪುರ: ದಲಿತರ ಸಬಲೀಕರಣಕ್ಕಾಗಿ ಸಂಘರ್ಷ ರ್ಯಾಲಿಯನ್ನು ವಿಧಾನಸೌಧ ಚಲೋ ಕಾರ್ಯಕ್ರಮದ ಮೂಲಕ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸಂಚಾಲಕ ಮರಳ ಸಿದ್ದಪ್ಪ ನಾಯ್ಕಲ್ ತಿಳಿಸಿದರು.
ಪಟ್ಟಣದಲ್ಲಿ ದಲಿತರ ಸಬಲೀಕರಣಕ್ಕಾಗಿ ಸಂಘರ್ಷ ರ್ಯಾಲಿಯ ವಿಧಾನಸೌಧ ಚಲೋ ರ್ಯಾಲಿ ಕಾರ್ಯಕ್ರಮದ ಭಿತ್ತಿಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.
ಇಂದಿನ ದಿನಮಾನದಲ್ಲಿ ಪರಿಶಿಷ್ಟ ಜಾತಿಯ ಜನರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಯಂತ್ರಣ ಮಾಡಲು ಕಟ್ಟುನಿಟ್ಟಿನ ಕಾಯ್ದೆ ಅನುಷ್ಠಾನಗೊಳಿಸಲು ಕರ್ನಾಟಕ ಮಾದರಿಯಲ್ಲಿ ಕೇಂದ್ರ ಸರ್ಕಾರ ಎಸ್‌ಸಿ, ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆ ಜಾರಿಗೊಳಿಸಬೇಕು. ವಿದ್ಯಾರ್ಥಿ ವೇತನ, ಬಡ್ತಿ ಮೀಸಲಾತಿ, ಬ್ಯಾಕ್ ಲಾಗ್ ನೇಮಕಾತಿ, ಗುತ್ತಿಗೆ ಮತ್ತು ಸಂಗ್ರಹಣೆ ಒಂದು ಕೋಟಿ ಅನುಷ್ಠಾನಗೊಳಿಸಲು ರಾಜ್ಯದ ಯೋಜನೆಯ ಅನುಸಾರ ಮಾಡಬೇಕು. 2014ರಿಂದ ಹಂಚಿಕೆಯಾಗಿರುವ ಹಣದ ಬಗ್ಗೆ ಸಾರ್ವಜನಿಕ ಲೆಕ್ಕ ಪರಿಶೋಧನೆ ಆಗಬೇಕು. ಡಿ.28 ರಂದು ಮಧ್ಯಾಹ್ನ 12ಗಂಟೆಗೆ ಚಿಕ್ಕ ಲಾಲ್‌ಬಾಗ್‌ನಿಂದ ವಿಧಾನಸೌಧ ಚಲೋ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಸಂಘಟನಾ ಸಂಚಾಲಕ ಭೀಮರಾಯ, ತಾಲೂಕು ಸಂಚಾಲಕ ನಿಂಗಪ್ಪ ಬಿರನಾಳ, ಮರಿಲಿಂಗಪ್ಪ ನಾಯ್ಕಲ್, ನಾಗರಾಜ ಜೈನ, ಮರಿಲಿಂಗಪ್ಪ ಬದ್ದೇಪಲ್ಲಿ, ದೇವಿಂದ್ರಪ್ಪ ಕೂಡ್ಲೂರು, ಮಲ್ಲಿಕಾರ್ಜುನ, ಆಜಪ್ಪ, ಭೀಮಣ್ಣ, ಮರಿಬಸಪ್ಪ ಸಂಗವಾರ, ಬಸವರಾಜ, ಶಿವರಾಜ, ನಾಗರಾಜ ಗೊಂದೆಡಗಿ, ಶರಣಪ್ಪ ಇದ್ದರು.