Advertisement

ಕಾರ್ಮಿಕ ಸಂಘಟನೆಗಳಿಂದ ರ್ಯಾಲಿ

06:06 PM Dec 05, 2021 | Team Udayavani |

ಮುದಗಲ್ಲ: ಕೇಂದ್ರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಕಾರ್ಮಿಕ ವಿರೋಧಿ ನೀತಿ ಕಾನೂನು ಜಾರಿಗೆ ತರುವುದರ ಜೊತೆಗೆ ನಿತ್ಯದ ವಸ್ತುಗಳ ದರ ಏರಿಕೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಶನಿವಾರ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನಾ ರ್ಯಾಲಿ ಜರುಗಿತು.

Advertisement

ಕುಂಬಾರಪೇಟೆಯ ಮೌಲಾಲಿ ದರ್ಗಾದಿಂದ ವಿವೀಧ ಕಾರ್ಮಿಕ ಸಂಘಟನೆಗಳ ಸಹಭಾಗಿತ್ವದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಮೆರವಣಿಗೆಯುದ್ದಕ್ಕೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅಭಿವೃದ್ಧಿ ಮರೆತು ಕಾಲಹರಣ ಮಾಡಿಕೊಂಡು ಬಡ, ಕೂಲಿಕಾರ ಕುಟುಂಬಸ್ಥರ ಜೀವನದೊಂದಿಗೆ ಬೆಲೆ ಏರಿಕೆ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವುದರ ಮೂಲಕ ಕಾರ್ಮಿಕ ಸಂಘಟನೆಗಳ ಹಕ್ಕೊತ್ತಾಯ ಮೊಟಕುಗೊಳಿಸುವುದರ ಮೂಲಕ ಸಂಪೂರ್ಣ ನಿರ್ಲಕ್ಷ ಧೋರಣೆ ಅನುಸರಿಸುತ್ತಿದ್ದು, ಕೂಡಲೇ ಅಧಿಕಾರ ತ್ಯಾಗ ಮಾಡುವಂತೆ ಮೆರವಣಿಗೆಯಲ್ಲಿ ಘೋಷಣೆಗಳನ್ನು ಕೂಗಿದರು.

ಕಾರ್ಮಿಕರ ಹಿತರಕ್ಷಣೆಗಾಗಿ, ಕಾರ್ಮಿಕ ವಿರೋಧಿ ಕಾನೂನು ಜಾರಿಗೆ ತರುವುದರ ವಿರುದ್ಧ ಈ ಅಭಿಯಾನ ಆರಂಭಿಸಲಾಗಿದೆ. ರಾಜ್ಯದ ಉದ್ದಗಲಕ್ಕೂ ಚಳವಳಿ ನಡೆಸಲಾಗುತ್ತಿದೆ. ಮೊದಲು ಐತಿಹಾಸಿಕ ಮುದಗಲ್ಲ ಪಟ್ಟಣದಿಂದಲೇ ಚಾಲನೆ ನೀಡಿ ನಮ್ಮ ಇನ್ನಿತರ ಬೇಡಿಕೆಗಳಿಗೆ ಒತ್ತಾಯಿಸಲಾಗುವುದು ಎಂದು ಹೇಳಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಾನಾಯಕ್‌, ಮುದಗಲ್‌ ಬೀದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಶಾನೂರ, ಪ್ರಧಾನ ಕಾರ್ಯದರ್ಶಿ ಯೂಸೂಫ್‌ ಸೇರಿದಂತೆ ಕಾರ್ಮಿಕ ಸಂಘಟನೆಯ ಮುಖಂಡರು ಹಾಗೂ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next