Advertisement

ವಿದ್ಯಾರ್ಥಿಗಳಿಂದ ಮಾದಕ ದ್ರವ್ಯ ವಿರುದ್ಧ ರಾಲಿ

03:45 AM Jul 02, 2017 | Harsha Rao |

ಮುಳ್ಳೇರಿಯ: ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರುದ್ಧ ಅಡೂರು ಸರಕಾರಿ ಹಿರಿಯ ಪ್ರೌಢ ಶಾಲೆಯ ವಿದ್ಯಾರ್ಥಿ ಗಳು ಮಾದಕ ದ್ರವ್ಯ ವಿರುದ್ಧ ರಾಲಿಯನ್ನು ಹಮ್ಮಿ ಕೊಂಡಿದ್ದರು. ಶಾಲೆಯ  ಸುತ್ತುಮುತ್ತಲು ಮಾದಕ ದ್ರವ್ಯ ವಿರುದ್ಧ ಸಂದೇಶವನ್ನು ಹರಡಲು ಕಿರು ಲೇಖನಗಳನ್ನು ವಿತರಿಸಿದರು. ಸ್ಥಳೀಯ ಪೊಲೀಸ್‌ ಇಲಾಖೆಯ ಸಹಕಾರದೊಂದಿಗೆ ಸಂಘಟಿಸಿದ ಕಾರ್ಯಕ್ರಮದಲ್ಲಿ ಶಾಲೆಯ ಪೊಲೀಸ್‌ ಕೆಡೆಟ್‌ಗಳು, ಜೂಸYರ್‌ ರೆಡ್‌ಕ್ರಾಸ್‌ನ ಸ್ವಯಂ ಸೇವಕರು, ವಿಜ್ಞಾನ, ಸಮಾಜ ವಿಜ್ಞಾನ, ಆರೋಗ್ಯ ಕ್ಲಬ್‌ ಕಾರ್ಯಕರ್ತರು ಭಾಗವಹಿಸಿದರು.

Advertisement

ಶಾಲಾ ಸಭಾಂಗಣದಲ್ಲಿ ಏರ್ಪಡಿಸಿದ ಸಮಾರಂಭದಲ್ಲಿ ಆದೂರು ಪೊಲೀಸ್‌ ಠಾಣೆಯ ಎಡಿಶನಲ್‌ ಸಬ್‌ಇನ್‌ಸ್ಪೆಕ್ಟರ್‌ ಎಂ.ರಾಜನ್‌ ಮಾದಕ ದ್ರವ್ಯ ವಿರುದ್ಧ ಪ್ರತಿಜ್ಞಾ ವಿಧಿಯನ್ನು ನಿರ್ವಹಿಸಿದರು. ರಾಲಿಯಲ್ಲಿ ಫ್ಲ್ಯಾಗ್‌ ಆಪ್‌ ನೆರವೇರಿಸಿದರು. ಮಾದಕ ದ್ರವ್ಯಗಳ ಕೆಡುಕನ್ನು ವಿವರಿಸುವ ಕರಳ್‌ ಎಂಬ ಮಲೆಯಾಳ ಕಿರುಚಲನಚಿತ್ರವನ್ನು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರದರ್ಶಿಸಲಾಯಿತು.

ಮುಖ್ಯ ಶಿಕ್ಷಕರಾದ ಅನೀಸ್‌ ಜಿ. ಮಾಸನ್‌ ಅಧ್ಯಕ್ಷತೆ ವಹಿಸಿದ್ದರು. ಸ್ಟಾಫ್‌ ಸೆಕ್ರೆಟರಿ ಡಿ. ರಾಮಣ್ಣ ಸ್ವಾಗತಿಸಿದರು. ಜೆ.ಆರ್‌.ಸಿ. ಕೊರ್ಡಿನೇಟರ್‌ ಎ.ರಾಜರಾಮ ವಂದಿಸಿದರು. ಸಿವಿಲ್‌ ಪೊಲೀಸ್‌ ಅಧಿಕಾರಿಗಳಾದ ಜಯಪ್ರಕಾಶ್‌, ಭಾಸ್ಕ ರನ್‌, ಎಸ್‌.ಪಿ.ಸಿ. ಸಿ.ಪಿ.ಒ.ಗಳಾದ ಎ.ಗಂಗಾಧರನ್‌, ಶಾರದಾ, ಅಧ್ಯಾಪಕರಾದ ಎ.ಎಂ.ಅಬ್ದುಲ್‌ ಸಲಾಂ, ವಿ.ಆರ್‌.ಶೀಲಾ, ಪಿ. ಇಬ್ರಾಹಿಂ ಖಲೀಲ್‌, ಸಂತೋಷ ಕುಮಾರ್‌, ಎಸ್‌.ಕೆ. ಅನ್ನಪೂರ್ಣಾ, ಎಂ. ಶಬ್‌ನ, ಎಂ ಸುನಿತಾ, ಪಿ.ಪಿ. ಧನಿಲ್‌, ಎ. ರಫೀಕ್‌, ಎ. ಶಾಖೀರಾ, ಪಿ.ವಿ. ಸ್ಮಿತ್‌, ಎ.ಎ. ಖಮರುನ್ನೀಸಾ, ಕೆ. ಸಂಧ್ಯಾ, ಸಿ. ರಮ್ಯ, ವಿದ್ಯಾರ್ಥಿಗಳಾದ ಎಸ್‌.ಮಂಜೂಷಾ, ಎ.ಎಸ್‌. ಶಾನಿಬಾ, ಋಷಿಕೇಶ್‌, ಸುರಾಜ್‌, ರಜಿನಾ, ನೌಫಲ್‌, ಅನಘಾ, ಆದಿರಾ, ಮೊದಲಾದವರು ನೇತೃತ್ವ  ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next