Advertisement

Goa; ವೈವಾಹಿಕ ಜೀವನಕ್ಕೆ ಕಾಲಿಟ್ಟ ರಾಕುಲ್ ಪ್ರೀತ್ ಸಿಂಗ್-ಜಾಕಿ ಭಗ್ನಾನಿ ಜೋಡಿ

06:17 PM Feb 21, 2024 | Team Udayavani |

ಪಣಜಿ: ಬಿ ಟೌನ್‍ನ ಜನಪ್ರಿಯ ಜೋಡಿ ರಾಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ಬುಧವಾರ ಗೋವಾದಲ್ಲಿ ವಿವಾಹವಾಗಿದ್ದಾರೆ. ಗೋವಾದ ರಾಯಲ್ ಹೋಟೆಲ್‍ನಲ್ಲಿ ದಂಪತಿಗಳು ಸಪ್ತಪದಿ ತುಳಿದಿದ್ದಾರೆ.

Advertisement

ಈ ರಾಯಲ್ ವೆಡ್ಡಿಂಗ್ ನಲ್ಲಿ ಪಾಲ್ಗೊಳ್ಳಲು ಹಲವು ಬಾಲಿವುಡ್ ತಾರೆಯರು ಗೋವಾಕ್ಕೆ ಆಗಮಿಸಿದ್ದರು. ರಾಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ಪಂಜಾಬಿ ಮತ್ತು ಸಿಂಧಿ ಪದ್ಧತಿಯಲ್ಲಿ ಮದುವೆಯಾಗಿದ್ದಾರೆ ಎನ್ನಲಾಗಿದೆ.

ರಾಕುಲ್ ಪಂಜಾಬಿಯಾಗಿದ್ದರೆ, ಜಾಕಿ ಸಿಂಧಿ ಕುಟುಂಬದಿಂದ ಬಂದವರು. ಮದುವೆಯ ನಂತರ, ಅತಿಥಿಗಳಿಗಾಗಿ ನಂತರ ಪಾರ್ಟಿಯನ್ನು ಆಯೋಜಿಸಲಾಗಿದೆ. ರಾಕುಲ್ ಮತ್ತು ಜಾಕಿ ಅವರ ಮದುವೆಯಲ್ಲಿ ಅವರ ಕುಟುಂಬವನ್ನು ಹೊರತುಪಡಿಸಿ, ಬಿ ಟೌನ್ ಸೆಲೆಬ್ರಿಟಿಗಳು ಭಾಗವಹಿಸಿದ್ದಾರೆ.

ಬುಧವಾರ ಬೆಳಗ್ಗೆ ವಧು ರಾಕುಲ್ ಅವರ ಚೂಡಾ ಸಮಾರಂಭ ನಡೆದಿದ್ದು, ಮಧ್ಯಾಹ್ನ 3.30 ಕ್ಕೆ ಈ ನವ ದಂಪತಿಗಳು ಸಪ್ತಪದಿ ತುಳಿದಿದ್ದಾರೆ.

ರಾಕುಲ್ ಮತ್ತು ಜಾಕಿ ಮದುವೆ ಸಮಾರಂಭವನ್ನು ಸಂಪೂರ್ಣವಾಗಿ ಖಾಸಗಿಯಾಗಿ ಇರಿಸಲಾಗುವುದು. ತಮ್ಮ ಮದುವೆಯ ವಿಶೇಷ ಫೋಟೋಗಳನ್ನು ಹಂಚಿಕೊಳ್ಳಲಿದ್ದಾರೆ. ಆದ್ದರಿಂದ, ಅತಿಥಿಗಳು ಮದುವೆಯ ಸ್ಥಳದಲ್ಲಿ ಫೋನ್ ಬಳಸಲು ಅನುಮತಿಸಿಲ್ಲ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next