Advertisement

ಸಾವಿನಲ್ಲೂ ಸಾರ್ಥಕತೆ : ಮೆದುಳು ನಿಷ್ಕ್ರಿಯಗೊಂಡ ಯುವತಿಯ ಹೃದಯ ಬೆಂಗಳೂರಿಗೆ ರವಾನೆ

12:25 PM Sep 22, 2022 | Team Udayavani |

ಚಿಕ್ಕಮಗಳೂರು : ಬಸ್ಸಿನಿಂದ ಬಿದ್ದು ಮೆದುಳು ನಿಷ್ಕ್ರಿಯಗೊಂಡಿದ್ದ ಮೊದಲ ಪಿಯುಸಿ ವಿದ್ಯಾರ್ಥಿನಿ ರಕ್ಷಿತಾ ಅವರ ಅಂಗಾಂಗವನ್ನು ದಾನ ದಾನ ಮಾಡಲು ಪೋಷಕರು ಮುಂದಾಗಿದ್ದಾರೆ.

Advertisement

ಪೋಷಕರ ಒಪ್ಪಿಗೆಯಂತೆ ವೈದ್ಯರು ರಕ್ಷಿತಾಳ ಬಹು ಅಂಗಾಂಗ ದಾನಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ನಡೆಸಿದ್ದು, ವಿಶೇಷ ವೈದ್ಯರ ತಂಡವು ಜಿಲ್ಲಾಸ್ಪತ್ರೆಗೆ ಬಂದಿದ್ದು ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ, ಅದರಂತೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿರುವ ರೋಗಿಯೊಬ್ಬರಿಗೆ ಹೃದಯ ಕಸಿ ಮಾಡುವ ಉದ್ದೇಶದಿಂದ ರಕ್ಷಿತಾಳ ಹೃದಯವನ್ನು ವಿಶೇಷ ಹೆಲಿಕಾಪ್ಟರ್ ಮೂಲಕಚಿಕ್ಕಮಗಳೂರಿನಿಂದ ಬೆಂಗಳೂರಿಗೆ ರವಾನಿಸಲಾಯಿತು. ಇದರೊಂದಿಗೆ ರಕ್ಷಿತಾಳ ಒಟ್ಟು ಒಂಬತ್ತು ಅಂಗಾಂಗಗಳನ್ನು ದಾನ ಮಾಡಲು ಪೋಷಕರು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಕಡೂರು ತಾಲೂಕಿನ ಸೋಮನಹಳ್ಳಿಯ ತಾಂಡ್ಯದ ರಕ್ಷಿತಾ ಬಸ್ ಚಲಿಸುತ್ತಿರುವಾಗಲೇ ಕೆಳಗೆ ಬಿದ್ದಿದ್ದು ಆಕೆಯ ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡಿತ್ತು ಅಲ್ಲದೆ ಆಕೆ ಬದುಕುಳಿಯುವ ಯಾವುದೇ ಲಕ್ಷಣಗಳು ಇರಲಿಲ್ಲ. ಈ ವೇಳೆ ವೈದ್ಯರು ಅಂಗಾಂಗ ದಾನದ ವಿಚಾರವನ್ನು ಪೋಷಕರಿಗೆ ತಿಳಿಸಿದ್ದಾರೆ, ಅದರಂತೆ ರಕ್ಷಿತಾಳ ಅಂಗಾಂಗ ದಾನಕ್ಕೆ ತಾಯಿ ಲಕ್ಷ್ಮಿಬಾಯಿ, ತಂದೆ ಸುರೇಶ್ ನಾಯ್ಕ ಅವರು ಒಪ್ಪಿಗೆ ನೀಡಿದ್ದಾರೆ.

ಇದನ್ನೂ ಓದಿ : ಬಂಟ್ವಾಳ : ಬೆಳ್ಳಂಬೆಳಗ್ಗೆ ಪೊಲೀಸರ ಕಾರ್ಯಾಚರಣೆ, ಬೊಳಂತೂರಿನ ವ್ಯಕ್ತಿ ಪೊಲೀಸರ ವಶಕ್ಕೆ

Advertisement

Udayavani is now on Telegram. Click here to join our channel and stay updated with the latest news.

Next