Advertisement

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

05:30 PM Apr 27, 2024 | Team Udayavani |

ಬೆಂಗಳೂರು: ರಕ್ಷಿತ್‌ ಶೆಟ್ಟಿ ಸಿನಿ ಕೆರಿಯರ್‌ ನಲ್ಲಿ ʼ 777 ಚಾರ್ಲಿʼ ವಿಶೇಷ ಸಿನಿಮಾ. ರಕ್ಷಿತ್‌ ಅಭಿನಯ ಹಾಗೂ ʼಚಾರ್ಲಿʼ ಅಭಿನಯ ಪ್ರೇಕ್ಷಕರನ್ನು ಭಾವನಾತ್ಮಕವಾಗಿ ಸೆಳೆದಿತ್ತು.

Advertisement

ಕಿರಣ್‌ ರಾಜ್‌ ನಿರ್ದೇಶನದಲ್ಲಿ 2022 ರಲ್ಲಿ ಬಂದ  ʼ777 ಚಾರ್ಲಿʼ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುವುದರ ಜೊತೆ ಬಾಕ್ಸ್‌ ಆಫೀಸ್‌ ನಲ್ಲಿ ಉತ್ತಮ ಕಮಾಯಿ ಮಾಡಿತ್ತು. ಇದೀಗ ಈ ಸಿನಿಮಾ ಮತ್ತೊಮ್ಮೆ ಥಿಯೇಟರ್‌ ನಲ್ಲಿ ರಿಲೀಸ್‌ ಆಗುವ ಸಾಧ್ಯತೆಯಿದೆ.

ʼ777 ಚಾರ್ಲಿʼ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆಯ ಜೊತೆಗೆ ಪ್ರಶಸ್ತಿಗಳು ಬಂದಿವೆ. ಇದೀಗ ವಿದೇಶದಲ್ಲಿ ಸಿನಿಮಾ ರಿಲೀಸ್‌ ಆಗಲಿದೆ ಎನ್ನುವ ವರದಿಯೊಂದು ಬಂದಿದೆ.

ʼ777 ಚಾರ್ಲಿʼ ಇದೇ ಮೊದಲ ಬಾರಿಗೆ ಜಪಾನ್‌ನಲ್ಲಿ ಬಿಡುಗಡೆಯಾಗಲಿದೆ. ಜೂನ್ 28 ರಂದು ಜಪಾನ್‌ನಾದ್ಯಂತ ರಾಷ್ಟ್ರವ್ಯಾಪಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ʼಪಿಂಕ್‌ ವಿಲ್ಲಾʼ ವರದಿ ಮಾಡಿದೆ.

ಜಪಾನ್‌ ನಲ್ಲಿ ಕನ್ನಡ ಸಿನಿಮಾ ರಿಲೀಸ್‌ ಆಗುವುದು ಇದೇ ಮೊದಲಲ್ಲ. ಈ ಹಿಂದೆ ʼಕೆಜಿಎಫ್‌ʼ ಹಾಗೂ ʼಕಾಂತಾರʼ ಸಿನಿಮಾಗಳು ಜಪಾನ್‌ ನಲ್ಲಿ ರಿಲೀಸ್‌ ಆಗಿ ಭರ್ಜರಿ ರೆಸ್ಪಾನ್ಸ್‌ ಪಡೆದುಕೊಂಡಿದ್ದವು.

Advertisement

ʼ777 ಚಾರ್ಲಿʼ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ, ಚಾರ್ಲಿ, ಸಂಗೀತಾ ಶೃಂಗೇರಿ, ರಾಜ್ ಬಿ ಶೆಟ್ಟಿ, ಡ್ಯಾನಿಶ್ ಸೇಟ್ ಮತ್ತು ಇತರರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next