Advertisement

ಜಪಾನ್‌ನಲ್ಲಿ ಈ ತಿಂಗಳು ತೆರೆಕಾಣಲಿದೆ ಪ್ರಭಾಸ್‌ – ಪ್ರಶಾಂತ್‌ ನೀಲ್‌ ʼಸಲಾರ್‌ʼ

04:36 PM May 02, 2024 | Team Udayavani |

ಹೈದರಾಬಾದ್: ಪ್ಯಾನ್‌ ಇಂಡಿಯಾದಲ್ಲಿ ಸದ್ದು ಮಾಡಿದ್ದ ಪ್ರಭಾಸ್‌ ಅವರ ʼಸಲಾರ್‌ʼ(ಪಾರ್ಟ್‌ -1) ಸಿನಿಮಾ ಮತ್ತೊಮ್ಮೆ ಥಿಯೇಟರ್‌ ನಲ್ಲಿ ಮೋಡಿ ಮಾಡಲು ಸಿದ್ದವಾಗಿದೆ.

Advertisement

ಪ್ರಶಾಂತ್‌ ನೀಲ್‌ ನಿರ್ದೇಶನದ ʼಸಲಾರ್‌ʼ ಬಾಕ್ಸ್‌ ಆಫೀಸ್‌ ನಲ್ಲಿ ಭರ್ಜರಿ ಕಮಾಯಿ ಮಾಡಿತ್ತು. ಆ ಮೂಲಕ ಪ್ರಭಾಸ್‌ ಅವರಿಗೆ ಬ್ರೇಕ್‌ ತಂದುಕೊಟ್ಟಿತ್ತು.  ಭಾರತದಲ್ಲಿ ಪ್ಯಾನ್‌ ಇಂಡಿಯಾದಲ್ಲಿ ರಿಲೀಸ್‌ ಆದ ಸಿನಿಮಾಗಳು ಹೊರದೇಶದಲ್ಲಿ ತೆರೆ ಕಾಣುವುದು ಸಾಮಾನ್ಯ. ವಿದೇಶದಲ್ಲಿ ಇತ್ತೀಚೆಗಿನ ದಿನದಲ್ಲಿ ಭಾರತದ ಸಿನಿಮಾಗಳಿಗೆ ಹೆಚ್ಚಿನ ಬೇಡಿಕೆಯಿದೆ. ಇದಕ್ಕೆ ಉದಾಹರಣೆಯಾಗಿ ʼಬಾಹುಬಲಿʼ, ʼಆರ್‌ ಆರ್‌ ಆರ್‌ʼ ಹಾಗೂ ʼಕೆಜಿಎಫ್‌ʼ ನಂತಹ ಸಿನಿಮಾಗಳಿವೆ.

ಇದೀಗ ಈ ಸಾಲಿಗೆ ಮತ್ತೊಂದು ಸಿನಿಮಾ ಸೇರಿದೆ. ಬ್ಲಾಕ್‌ ಬಸ್ಟರ್‌ ಹಿಟ್‌ ಆದ ʼಸಲಾರ್‌ʼ ಜಪಾನ್‌ ದೇಶದಲ್ಲಿ ತೆರೆ ಕಾಣಲು ಸಿದ್ದವಾಗಿದೆ. ಇದೇ ವರ್ಷದ ಜುಲೈ ತಿಂಗಳಿನಲ್ಲಿ ಜಪಾನ್‌ ಥಿಯೇಟರ್‌ ನಲ್ಲಿ ʼಸಲಾರ್‌ʼ ತೆರೆ ಕಾಣಲಿದೆ ಎಂದು ವರದಿಯೊಂದು ತಿಳಿಸಿದೆ.

ಈ ಹಿಂದೆ ಪ್ರಶಾಂತ್‌ ನೀಲ್‌ ಅವರ ʼಕೆಜಿಎಫ್‌ʼ ಸಿನಿಮಾ ಕೂಡ ಜಪಾನ್‌ ನಲ್ಲಿ ರಿಲೀಸ್‌ ಆಗಿ ಭರ್ಜರಿ ಸೌಂಡ್‌ ಮಾಡಿತ್ತು.

ಪ್ರಭಾಸ್‌ ಹಾಗೂ ಪೃಥ್ವಿರಾಜ್‌ ಸುಕುಮಾರನ್ ಅವರ ಅಭಿನಯ ಸಿನಿಮಾದಲ್ಲಿ ಗಮನ ಸೆಳೆದಿತ್ತು. ʼಕಾನ್ಸಾರ್‌ʼ ಸಾಮ್ರಾಜ್ಯದಲ್ಲಿ ನಡೆಯುವ ಕಥೆಯನ್ನು ಪ್ರಶಾಂತ್‌ ನೀಲ್‌ ಮಾಸ್‌ ಆಗಿ ಹೇಳಿದ್ದರು.

Advertisement

ಪ್ರಭಾಸ್‌, ಪೃಥ್ವಿರಾಜ್‌ ಜೊತೆ ಶ್ರುತಿ ಹಾಸನ್, ಜಗಪತಿ ಬಾಬು, ಬಾಬಿ ಸಿಂಹ, ಶ್ರೀಯಾ ರೆಡ್ಡಿ, ಜಾನ್ ವಿಜಯ್, ಟಿನ್ನು ಆನಂದ್, ಈಶ್ವರಿ ರಾವ್, ರಾಮಚಂದ್ರರಾಜು, ಬ್ರಹ್ಮಾಜಿ, ದೇವರಾಜ್, ಮೈಮ್ ಗೋಪಿ ಮುಂತಾದ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next