Advertisement

Sandalwood: ರಕ್ಷಿತ್‌ ಶೆಟ್ಟಿ ʼರಿಚರ್ಡ್‌ ಆಂಟನಿʼ ನಿರ್ಮಾಣದಿಂದ ಹಿಂದೆ ಸರಿದ ಹೊಂಬಾಳೆ?

06:21 PM Jan 31, 2024 | Team Udayavani |

ಬೆಂಗಳೂರು: ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ʼಸಪ್ತ ಸಾಗರದಾಚೆ ಎಲ್ಲೋʼ (ಸೈಡ್‌ 1,2) ಸಿನಿಮಾ ಯಶಸ್ಸಾದ ಖುಷಿಯಲ್ಲಿದ್ದಾರೆ. ಇತ್ತೀಚೆಗೆ ಅವರ ನಿರ್ಮಾಣದಲ್ಲಿ ಬಂದಿರುವ ʼಬ್ಯಾಚುಲರ್‌ ಪಾರ್ಟಿʼ ಸಿನಿಮಾಕ್ಕೂ ಉತ್ತಮ ಅಭಿಪ್ರಾಯ ಕೇಳಿ ಬರುತ್ತಿದೆ.

Advertisement

ರಕ್ಷಿತ್‌ ಶೆಟ್ಟಿ ವೃತ್ತಿ ಬದುಕಿನ ಡ್ರೀಮ್‌ ಪ್ರಾಜೆಕ್ಟ್‌ ʼರಿಚರ್ಡ್‌ ಆಂಟನಿʼ ಅನೌನ್ಸ್‌ ಆದ ದಿನದಂದ ಸುದ್ದಿಯಲ್ಲಿದೆ. ಸಿನಿಮಾದ ಕುರಿತಂತೆ ಟೈಟಲ್‌ ವಿಡಿಯೋ ಈ ಹಿಂದೆ ರಿಲೀಸ್‌ ಆಗಿತ್ತು. ಹತ್ತು ವರ್ಷದ ಬಳಿಕ ರಕ್ಷಿತ್‌ ಶೆಟ್ಟಿ ನಿರ್ದೇಶನಕ್ಕಿಳಿಯುವುದರಿಂದ ಈ ಸಿನಿಮಾದ ಮೇಲೆ ದೊಡ್ಡ ನಿರೀಕ್ಷೆಯಿದೆ.

ರಿಚರ್ಡ್‌ ಆಂಟನಿʼ ರಕ್ಷಿತ್‌ ಶೆಟ್ಟಿ ಅವರ ʼಉಳಿದವರು ಕಂಡಂತೆʼ ಸಿನಿಮಾ ಸೀಕ್ವೆಲ್‌ ಎನ್ನಲಾಗಿದೆ. ಈ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣ ಮಾಡುವುದಾಗಿ ಅನೌನ್ಸ್‌ ಆಗಿತ್ತು. ಇದು ಹೊಂಬಾಳೆ ಬ್ಯಾನರ್‌ ನ 10ನೇ ಸಿನಿಮಾವೆಂದು ಘೋಷಿಸಲಾಗಿತ್ತು. ಇದರೊಂದಿಗೆ ಅದೇ ಸಮಯದಲ್ಲಿ ಹೊಂಬಾಳೆ  ಪೃಥ್ವಿರಾಜ್ ಸುಕುಮಾರನ್ ಅವರ ʼಟೈಸನ್ʼ ಸುಧಾ ಕೊಂಗರಾ ಅವರೊಂದಿಗಿನ ಸಿನಿಮಾವನ್ನು ನಿರ್ಮಾಣ ಮಾಡುವುದಾಗಿ ಹೇಳಿತ್ತು.

ಇದನ್ನೂ ಓದಿ: Tollywood: ಅನಾರೋಗ್ಯ ಕಾರಣದಿಂದ ಸಿನಿಮಾದಿಂದ ಬ್ರೇಕ್‌ ಪಡೆಯಲು ಪ್ರಭಾಸ್‌ ನಿರ್ಧಾರ?

ಆದರೆ ಇದೀಗ ಬಂದಿರುವ ಲೇಟೆಸ್ಟ್ ಅಪ್ಡೇಟ್‌ ಪ್ರಕಾರ ರಕ್ಷಿತ್‌ ಶೆಟ್ಟಿ ಅವರ ʼರಿಚರ್ಡ್‌ ಆಂಟನಿʼ ಸಿನಿಮಾದಿಂದ ಹೊಂಬಾಳೆ ಫಿಲ್ಮ್ಸ್‌ ಹಿಂದೆ ಸರಿದಿದೆ ಎನ್ನಲಾಗಿದೆ.

Advertisement

ಮುಂದಿನ ಐದು ವರ್ಷದಲ್ಲಿ ಮನರಂಜನಾ ಕ್ಷೇತ್ರದಲ್ಲಿ 3 ಸಾವಿರ ಕೋಟಿ ಹೂಡಿಕೆ ಮಾಡುವುದಾಗಿ ಹೊಂಬಾಳೆ ಫಿಲ್ಮ್ಸ್‌ ಈ ಹಿಂದೆ ಹೇಳಿತ್ತು. ಈ ಕಾರಣದಿಂದ ಸಿನಿಮಾ ನಿರ್ಮಾಣಕ್ಕೆ ಬಜೆಟ್‌ ಸಮಸ್ಯೆಯಾಗದು. ಹೂಡಿಕೆಯ ಮೇಲಿನ ಲಾಭದ ವಿಚಾರವೇ ಇದಕ್ಕೆ ಕಾರಣವಿರಬಹುದು ಎನ್ನಲಾಗುತ್ತಿದೆ. ಏಕೆಂದರೆ ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣ ಮಾಡಿರುವ ʼಧೂಮಂʼ, ʼರಾಘವೇಂದ್ರ ಸ್ಟೋರ್ಸ್ʼ ಬಾಕ್ಸ್ ಆಫೀಸ್‌ನಲ್ಲಿ ಅಷ್ಟಾಗಿ ಬ್ಯುಸಿನೆಸ್‌ ಮಾಡುವಲ್ಲಿ ವಿಫಲವಾಯಿತು.

ಇತ್ತೀಚೆಗೆ ಬಂದ ʼಸಲಾರ್‌ʼ ಕೂಡ ಕೆಜಿಎಫ್‌ ನಷ್ಟು ಲಾಭ ತಂದು ಕೊಟ್ಟಿಲ್ಲ. ʼಸಲಾರ್‌ʼ ಆಂಧ್ರ ಹಾಗೂ ತೆಲಂಗಾಣ ಹೊರತುಪಡಿಸಿ ದಕ್ಷಿಣದ ಉಳಿದ ಭಾಗದಲ್ಲಿ ಅಷ್ಟಾಗಿ ಕಮಾಯಿ ಮಾಡಿಲ್ಲ. ಈ ಕಾರಣದಿಂದ ರಕ್ಷಿತ್‌ ಶೆಟ್ಟಿ ಅವರ ʼರಿಚರ್ಡ್‌ ಆಂಟನಿʼ ಸಿನಿಮಾದ ಲಾಭದ ವಿಚಾರವೇ ಹೊಂಬಾಳೆ ಫಿಲ್ಮ್ಸ್‌ ಹಿಂದೇಟು ಹಾಕಲು ಕಾರಣವಿರಬಹುದೆಂದು ಎನ್ನಲಾಗುತ್ತಿದೆ.

ಇದೇ ವಿಚಾರವಾಗಿ ʼಎಕ್ಸ್ʼ ನಲ್ಲಿ ಒಬ್ಬರು ಟ್ವೀಟ್‌ ಮಾಡಿದ್ದು, ಈ ಟ್ವೀಟ್‌ ಗೆ ರಕ್ಷಿತ್ ಲೈಕ್‌ ಕೊಟ್ಟಿದ್ದಾರೆ. ರಕ್ಷಿತ್‌ ಶೆಟ್ಟಿ ತಮ್ಮ ಪರಂವಃ ಬ್ಯಾನರ್‌ ಅಡಿಯಲ್ಲೇ ʼರಿಚರ್ಡ್‌ ಆಂಟನಿʼ ನಿರ್ಮಾಣವನ್ನು ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ರಕ್ಷಿತ್‌ ಶೆಟ್ಟಿ ಅವರೇ ʼರಿಚರ್ಡ್‌ ಆಂಟನಿʼ ನಿರ್ಮಾಣ ಮಾಡುತ್ತಾರೋ ಅಥವಾ ಬೇರೆ ಪ್ರೊಡಕ್ಷನ್‌ ಹೌಸ್‌ ನಿರ್ಮಾಣಕ್ಕೆ ಮುಂದೆ ಬರುತ್ತೋ ಎನ್ನುವುದರ ಬಗ್ಗೆ ಮುಂದಿನ ದಿನಗಳಲ್ಲಿ ಸ್ಪಷ್ಟನೆ ಸಿಗಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next